ಭಾರೀ ಮಳೆ: ಆಗುಂಬೆ ಘಾಟ್ ನಲ್ಲಿ ಭೂ ಕುಸಿತ, ಸಂಚಾರ ಅಸ್ತವ್ಯಸ್ಥ 
ರಾಜ್ಯ

ಭಾರೀ ಮಳೆ: ಆಗುಂಬೆ ಘಾಟ್ ನಲ್ಲಿ ಭೂ ಕುಸಿತ, ಸಂಚಾರ ಅಸ್ತವ್ಯಸ್ಥ

ಕಳೆದೆರಡು ದಿನಗಳಿಂದ ಸುರ್ರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕ ಕರಾವಳಿ, ಮಲೆನಾಡಿನ ಭಾಗದ ಜನ ಕಂಗಾಲಾಗಿದ್ದಾರೆ.

ಶಿವಮೊಗ್ಗ: ಕಳೆದೆರಡು ದಿನಗಳಿಂದ ಸುರ್ರಿಯುತ್ತಿರುವ ಭಾರೀ ಮಳೆಗೆ ಕರ್ನಾಟಕ ಕರಾವಳಿ, ಮಲೆನಾಡಿನ ಭಾಗದ ಜನ ಕಂಗಾಲಾಗಿದ್ದಾರೆ. ಮಳೆಯ ಕಾರಣ ಶಿವಮೊಗ್ಗ ಹಾಗೂ ಉಡುಪಿಯನ್ನು ಸಂಪರ್ಕಿಸುವ ಆಗುಂಬೆ ಘಾಟ್ ನಲ್ಲಿ ಭೂ ಕುಸಿತ ಉಂಟಾಗಿದೆ,
ಆಗುಂಬೆ ಘಾಟಿಯ 7ನೇ ತಿರುವಿನಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದ್ದು ರಸ್ತೆ ಸಂಚಾರ ಅಸ್ತವ್ಯಸ್ಥವಾಗಿದೆ. ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.
ಭೂ ಕುಸಿತದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದೀಗ ಈ ಮಾರ್ಗದಲ್ಲಿ ಭಾರೀ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಇದೇ ರೀತಿ ಮಳೆ ಮುಂದುವರಿದಲ್ಲಿ 7ನೇ ತಿರುವಿನ ಮುಂಭಾಗಸ್ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ದಟ್ಟವಾಗಿದೆ. 
ಇನ್ನು ಇಲ್ಲಿ ನಿರ್ಮಾಣವಾಗಿರುವ ತಡೆಗೋಡೆ ಸಹ ಅವೈಜ್ಞಾನಿಕವಾಗಿದೆ.  ಇದಾಗಲೇ ಹಲವು ವಾಹನಗಳು ಘಾಟ್ ಮೇಲಿನಿಂದ ಕೆಳಗುರುಳಿದೆ. ಅಲ್ಲದೆ ಘಾಟ್ ನ ಕೆಲವು ಕಡೆ ಹಾಕಿರುವ  ಸ್ಟೀಲ್ ತಡೆಗೋಡೆ ಸಹ ದುರ್ಬಲವಾಗಿದೆ. ಈ ಕುರಿತಂತೆ ಸ್ಥಳೀಯರು ಸಾಕಷ್ಟು ಬಾರಿ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ.
ಸಧ್ಯ ಗುಡ್ಡ ಕುಸಿದ ಸ್ಥಳದಲ್ಲಿ ಕೆಂಪು ರಿಬ್ಬನ್ ಪಟ್ಟಿ ಕಟ್ಟಿದ್ದು ಅಪಾಯದ ಸ್ಥಳ ಎಂದು ಸಾರ್ವಜನಿಕರಿಗೆ ತಿಳಿಯುವಂತೆ ಮಾಡಲಾಗಿದೆ. ಈ ಘಾಟ್ ಮೂಲಕ ಸಂಚರಿಸುವಾಗ ಪ್ರಯಾಣಿಕರು  ಅತೀ ಜಾಗರೂಕತೆಯಿಂದ ಸಂಚರಿಸಬೇಕಾಗಿದೆ.
ಒಟ್ಟಾರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಚಾರ್ಮಾಡಿ ಘಾಟ್ ನಲ್ಲಿ ಭೂ ಕುಸಿತವಾಗಿ ಭಾರೀ ಹಾನಿಯಾಗಿದ್ದ ನೆನಪು ಮಾಸುವ ಮುನ್ನವೇ ಆಗುಂಬೆ ಘಾಟ್ ನಲ್ಲಿ ಸಹ ಇದೇ ಪರಿಸ್ಥಿತಿ ಮರುಕಳಿಸಿರುವುದು ವಿಪರ್ಯಾಸವೇ ಸರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT