ರಾಜ್ಯ

ಬೆಂಗಳೂರು: 15 ವರ್ಷಗಳಲ್ಲಿ ಪುಷ್ಪಪ್ರಿಯಾ ಬರೆದದ್ದು 650ಕ್ಕೂ ಹೆಚ್ಚು ಪರೀಕ್ಷೆ!

Sumana Upadhyaya

ಬೆಂಗಳೂರು: ಸಂಜಯ್ ಗಾಗಿ ಪರೀಕ್ಷೆ ಬರೆಯಲು ನಾನು ಆಫೀಸ್ ನಲ್ಲಿ ವಿಶೇಷ ಅನುಮತಿ ಕೇಳಿಬಂದಿದ್ದೇನೆ. ಪರೀಕ್ಷೆ ಆರಂಭವಾಗುವುದಕ್ಕೆ ಅರ್ಧ ಗಂಟೆ ಮೊದಲು ಪರೀಕ್ಷಾ ಕೊಠಡಿಗೆ ಬರುತ್ತೇನೆ ಎನ್ನುತ್ತಾರೆ 31 ವರ್ಷದ ಪುಷ್ಪಪ್ರಿಯಾ.

ಇವರು ಖಾಸಗಿ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಇವರು ಬರೆಯುತ್ತಿರುವ 658ನೇ ಪರೀಕ್ಷೆ ಮತ್ತು ಈ ತಿಂಗಳು ಇನ್ನೂ 6 ಪರೀಕ್ಷೆ ಬರೆಯಲಿದ್ದಾರೆ. ವಿಶೇಷ ಚೇತನರಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಿ ಸಮಾಜ ಸೇವೆ ಮಾಡುತ್ತಿರುವ ಪುಷ್ಪಪ್ರಿಯಾ ಸಮಾಜಕ್ಕೆ ಮಾದರಿಯಾಗಿದ್ದಾರೆ.

ನಿನ್ನೆ ಬೆಂಗಳೂರಿನ ಬಿಟಿಎಂ ಲೇ ಔಟ್ ನಲ್ಲಿರುವ ಮನೆಯನ್ನು ಬೆಳಗ್ಗೆಯೇ ಬಿಟ್ಟ ಪುಷ್ಪಪ್ರಿಯಾ ಯಲಹಂಕ ಸರ್ಕಾರಿ ಕಾಲೇಜಿಗೆ ಎರಡು ಬಸ್ಸುಗಳಲ್ಲಿ ಪ್ರಯಾಣಿಸಿ ಬಂದಿದ್ದರು. ಬೆಳಗಿನ ಉಪಹಾರವನ್ನು ಕೂಡ ಮಾಡಿರಲಿಲ್ಲ. ಆಕೆಯ ತಂದೆ ನಾಗರಾಜ್ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಆಕೆಯ ತಾಯಿ ಮಲ್ಲಮ್ಮ ತಿಂಗಳಿಗೆ ಒಂದಷ್ಟು ಹಣ ಸಂಪಾದಿಸಿ ಮಗಳನ್ನು ಓದಿಸಿದ್ದರು. ಆರ್ಥಿಕವಾಗಿ ಹಿಂದುಳಿದಿದ್ದ ಪುಷ್ಪಪ್ರಿಯಾ ಅವರ ಶಾಲಾ, ಕಾಲೇಜು ಶುಲ್ಕವನ್ನು ಪೋಲಿಯೊ ಪೀಡಿತ ವ್ಯಕ್ತಿ ಭರಿಸುತ್ತಿದ್ದರಂತೆ. ಅವರ ಉಪಕಾರದ ಋಣವನ್ನು ಸಮಾಜಕ್ಕೆ ತೀರಿಸಲು ಪುಷ್ಪಪ್ರಿಯಾ ವಿಶೇಷ ಚೇತನರಿಗೆ ಪರೀಕ್ಷೆಗಳಲ್ಲಿ ಬರೆಯಲು ಸಹಾಯ ಮಾಡುತ್ತಾರೆ.

ನಮ್ಮ ಸುತ್ತಮುತ್ತ ಅನೇಕ ವಿಶೇಷ ಚೇತನ ವ್ಯಕ್ತಿಗಳಿರುತ್ತಾರೆ. ಅವರು ವಿಧ್ಯಾಭ್ಯಾಸವನ್ನು ಮುಗಿಸುವ ಆಕಾಂಕ್ಷೆಯಲ್ಲಿರುತ್ತಾರೆ. ಆದರೆ ಅವರಿಗೆ ಸಹಾಯ ಮಾಡುವವರು ಸಿಗುವುದು ವಿರಳ. ಅಂತಹ ವಿಶೇಷ ಚೇತನರಿಗೆ ನೆರವಾಗುತ್ತೇನೆ. ಅಂತಹ ವ್ಯಕ್ತಿಗಳ ಮಾತುಗಳನ್ನು ಕೇಳಿ ಬರೆಯುವ ತಾಳ್ಮೆಯಿರಬೇಕಷ್ಟೆ, ನಾವು ಪ್ರಶ್ನೆಗಳನ್ನು ಹಲವು ಸಲ ಪುನರಾವರ್ತಿಸಬೇಕಾಗುತ್ತದೆ. ಆ ಬಳಿಕವಷ್ಟೇ ಅವರು ಉತ್ತರಿಸಲು ಸಾಧ್ಯ ಎನ್ನುತ್ತಾರೆ ಪುಷ್ಪಪ್ರಿಯಾ.

SCROLL FOR NEXT