ರಾಜ್ಯ

80 ಕೋಟಿ ರೂ. ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಿಸಲಿರುವ ಬೆಂಗಳೂರು ಮೆಟ್ರೊ

Sumana Upadhyaya

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಿದ್ದು, ಇದರಿಂದ ಚಲ್ಲಘಟ್ಟ ಡಿಪೊ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಮೆಟ್ರೊದ ಪೂರ್ವ-ಪಶ್ಚಿಮ ಕಾರಿಡಾರ್ ನ ರೈಲುಗಳನ್ನು ನಿರ್ವಹಿಸಲು ಈ ಡಿಪೊಗಳ ನಿರ್ಮಾಣ ಮಾಡಲಾಗುತ್ತಿದೆ.

ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಗಳ ನಡುವೆ 10.7 ಕಿಲೋ ಮೀಟರ್ ಉದ್ದದವರೆಗೆ ನೆಲಮಾರ್ಗವನ್ನು ನಿರ್ಮಿಸಲಾಗುತ್ತಿದ್ದು ಇದು ಕೆಂಪೇಗೌಡ ಲೇ ಔಟ್ ಮೂಲಕ ಹಾದುಹೋಗುತ್ತದೆ. ಚಲ್ಲಘಟ್ಟ ಡಿಪೊದ ಒಂದು ಭಾಗದಲ್ಲಿ ನೆರಮಾರ್ಗ ಸಂಚರಿಸಲಿದ್ದು ಕೆಂಗೇರಿ ಕೊನೆಯ ಭಾಗದಲ್ಲಿ 17 ಎಕರೆ ಪ್ರದೇಶದಲ್ಲಿ ಇದು ನಿರ್ಮಾಣವಾಗಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ ಪ್ರಧಾನ ವ್ಯವಸ್ಥಾಪಕ ಎಂ.ಎಲ್.ಚನ್ನಪ್ಪ ಗೌಡರ್ ಮಾತನಾಡಿ, ಈ ಜಾಗ ಡಿಪೊ ನಿರ್ಮಾಣಕ್ಕೆ ಅಗತ್ಯವಾಗಿದ್ದು 200 ಮೀಟರ್ ಗಳಷ್ಟು ರಸ್ತೆಯನ್ನು ನೆಲಮಾರ್ಗದಲ್ಲಿ ನಿರ್ಮಾಣ ಮಾಡುವ ಅವಶ್ಯಕತೆಯಿದೆ ಎಂದು ನಾವು ಬಿಡಿಎಗೆ ತಿಳಿಸಿದ್ದೇವೆ. ರಸ್ತೆಯ ಅಗಲ 20 ಮೀಟರ್ ಗಳು. ಈ ಭಾಗದ ರಸ್ತೆಯನ್ನು ನಿರ್ಮಿಸಲು ನಾವು ಬಿಡಿಎಗೆ ಒಪ್ಪಿಕೊಂಡಿದ್ದು ಯೋಜನೆಗೆ ತಾತ್ವಿಕ ಅನುಮೋದನೆ ಸಿಕ್ಕಿದೆ ಎಂದು ಹೇಳಿದರು.

80 ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ರಸ್ತೆ ನಿರ್ಮಾಣಕ್ಕೆ ಭೂಮಿ ಪಡೆದುಕೊಂಡದ್ದಕ್ಕೆ ಬಿಡಿಎಗೆ ಪರಿಹಾರ ನೀಡುವ ಬದಲಿಗೆ ಮೆಟ್ರೊವೇ ನಿರ್ಮಾಣದ ವೆಚ್ಚ ಭರಿಸಲಿದೆ. ಬಿಡಿಎ ಯೋಜನೆ ಮಾಡಿರುವಂತೆ ನಾಲ್ಕು ಪಥದ ರಸ್ತೆ 45 ಮೀಟರ್ ಅಗಲ ಹೊಂದಿರುತ್ತದೆ. ಆರಂಭದಲ್ಲಿ 100 ಮೀಟರ್ ಅಗಲವೆಂದು ಯೋಜಿಸಲಾಗಿತ್ತು. ಭೂಮಿ ಖರೀದಿಗೆ ಅಕ್ಕಪಕ್ಕದ ರೈತರಿಂದ ಒಪ್ಪಿಗೆ ಪಡೆಯಲಾಗಿದೆ. ಸುರಂಗ ಮಾರ್ಗದ ಕಾಮಗಾರಿ ಮುಗಿದ ನಂತರ ಒಂದು ರಸ್ತೆ ಮೈಸೂರು ನಗರದ ಕಡೆಗೆ ಮತ್ತು ಇನ್ನೊಂದು ರಸ್ತೆ ಬೆಂಗಳೂರು ಕಡೆಗೆ ಹೋಗುತ್ತದೆ ಎಂದು ಗೌಡರ್ ವಿವರಿಸಿದರು.

ಡಿಪೊವನ್ನು ನಿರ್ಮಿಸಲು ಬೆಂಗಳೂರು ಮೆಟ್ರೊ ನಿಗಮಕ್ಕೆ 45 ಎಕರೆ ಜಮೀನು ಬೇಕು. 17 ಎಕರೆ ಜಮೀನನ್ನು ಬಿಡಿಎಯಿಂದ ಪಡೆದರೆ 29 ಎಕರೆ ಖಾಸಗಿ ಮಾಲಿಕರಿಂದ ಪಡೆಯಲಾಗುವುದು ಎಂದು ಗೌಡರ್ ತಿಳಿಸಿದರು.

ಈ ವಿಷಯವನ್ನು ಬಿಡಿಎಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು ಸುರಂಗ ಮೂಲಕ ಬೆಂಗಳೂರು ಮೆಟ್ರೊ ರೈಲು ನಿಗಮ ರಸ್ತೆ ನಿರ್ಮಾಣ ಮಾಡಲಿದೆ. ಬಿಡಿಎ ಜಾಗಗಳು ಇರುವಲ್ಲಿ ನಿರ್ಮಾಣಗೊಳ್ಳುವ ರಸ್ತೆಗಳಿಗೆ ಬಿಎಂಆರ್ ಸಿಎಲ್ ಪರಿಹಾರ ನೀಡಬೇಕಾಗಿಲ್ಲ. ಆದರೆ ಇನ್ನೊಂದು ಭಾಗದಲ್ಲಿ 17 ಎಕರೆ ಜಮೀನನ್ನು ಬಿಡಿಎ ಕೆಂಪೋಗೌಡ ಲೇ ಔಟ್ ನಿರ್ಮಾಣ ಮಾಡಲು ಪಡೆದುಕೊಂಡಿದ್ದು ಇದಕ್ಕೆ ರೈತರಿಗೆ ಪರಿಹಾರ ನೀಡಬೇಕಾಗಬಹುದು ಎಂದು ಹೇಳಿದರು.

SCROLL FOR NEXT