ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಮೀಸಲು ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿ 
ರಾಜ್ಯ

ಕೊಡಗಿನ ಅರಣ್ಯದಲ್ಲಿ ಮತ್ತೆ ಹತ್ತಿಕೊಂಡ ಬೆಂಕಿ: ನೂರಾರು ಎಕರೆ ನಾಶ

ಕೊಡಗು ಜಿಲ್ಲೆಯ ಆನೆಕಾಡು, ದುಬಾರೆ ಮತ್ತು ಮಲ್ದರೆ ಕಾಡಿನಲ್ಲಿ ನೂರಾರು ಎಕರೆ ಕಾಡುಗಳಿಗೆ ಬೆಂಕಿ ...

ಮಡಿಕೇರಿ; ಕೊಡಗು ಜಿಲ್ಲೆಯ ಆನೆಕಾಡು, ದುಬಾರೆ ಮತ್ತು ಮಲ್ದರೆ ಕಾಡಿನಲ್ಲಿ ನೂರಾರು ಎಕರೆ ಕಾಡುಗಳಿಗೆ ಬೆಂಕಿ ಹತ್ತಿಕೊಂಡಿದೆ. ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಮೀಸಲು ಅರಣ್ಯದಲ್ಲಿ ಕುಶಾಲ್ ನಗರ ಅರಣ್ಯ ವಲಯದಲ್ಲಿ ದುಷ್ಕರ್ಮಿಗಳು ಕಾಡಿನಲ್ಲಿ ಬೆಂಕಿ ಹತ್ತಿಸಿದ್ದಾರೆ. ಇದರಿಂದ ಆನೆಕಾಡು ಬಳಿ ನಿನ್ನೆ ಮಧ್ಯಾಹ್ನ ಸುಮಾರು 2 ಗಂಟೆಗೆ ಬೆಂಕಿ ಹತ್ತಿ ಉರಿಯಿತು ಎಂದು ಉಪ ಅರಣ್ಯಾಧಿಕಾರಿ ರಂಜನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಮಾಹಿತಿ ಸಿಕ್ಕಿದ ತಕ್ಷಣವೇ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಹರಸಾಹಸ ಮಾಡಿದರು. ಸುಮಾರು 25ರಿಂದ 30 ಎಕರೆ ಅರಣ್ಯ ಪ್ರದೇಶ ಬೆಂಕಿಗೆ ನಾಶವಾಗಿದೆ ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ನಿನ್ನೆ ಅಪರಾಹ್ನ ಮತ್ತೆ ದುಬಾರೆ ಮತ್ತು ಮಲ್ದರೆ ಅರಣ್ಯವಲಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ಎಸಿಎಫ್ ಎಂ.ಸಿ.ಚಿನ್ನಪ್ಪ ಮತ್ತು ಇತರ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸತತ 6 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಬೆಂಕಿ ನಂದಿಸಿದರು. ಪೆರಿಯಪಟ್ಟಣ ಕಡೆಯಿಂದ ಬೆಂಕಿ ಹತ್ತಿಕೊಂಡು ಉರಿದು ಸುಮಾರು 60ರಿಂದ 70 ಎಕರೆ ಅರಣ್ಯವನ್ನು ನಾಶ ಮಾಡಿದೆ.

ಹೆಚ್ಚುತ್ತಿರುವ ತಾಪಮಾನ ಮತ್ತು ಮೊದಲ ಮಳೆ ಬರಲು ತಡವಾಗಿರುವುದರಿಂದ ಇಷ್ಟು ಬೇಗನೆ ಬೆಂಕಿ ಹತ್ತಿ ಉರಿಯುತ್ತಿದೆ ಎಂದು ಅರಣ್ಯಾಧಿಕಾರಿ ಎಂ.ಸಿ.ಚಿನ್ನಪ್ಪ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!