ಗದಗ: ಸರ್ಕಾರಿ ಕೆರೆ ಜಾಗದಲ್ಲಿ ಗಾಂಜಾ ಬೆಳೆ ಪತ್ತೆ!

ಗದಗ: ಗದಗದಿಂದ 42 ಕಿ.ಮೀ ದೂರದಲ್ಲಿರುವ ಶಿರಹಟ್ಟಿ ತಾಲೂಕಿನ ಶ್ರೀಮಂತಗಡ ಗ್ರಾಮದಲ್ಲಿ ಸರ್ಕಾರಿ ಕೆರೆಯ ಏರಿಯ ಮೇಲೆ ಗಾಂಜಾ ಬೆಳೆಯಲಾಗುತ್ತಿರುವುದು ಪತ್ತೆಯಾಗಿದೆ. ಇಲ್ಲಿ ನೀರಾವರಿ ಪೈಪ್‌ಲೈನ್‌ಗಳು, ನೀರಿನ ಟ್ಯಾಂಕ್ ಮತ್ತು ಇತರ ಅಗತ್ಯ ಆಧುನಿಕ ಉಪಕರಣಗಳನ್ನು ಬಳಸಿ ಗಾಂಜಾ ಸಸ್ಯಗಳನ್ನು ಬೆಳೆಸಲಾಗುತ್ತಿತ್ತು.
ಅರಣ್ಯ ಪ್ರದೇಶದಲ್ಲಿರುವ 'ಸಬನಕೆರೆ' ಎಂಬ ಕೆರೆಯ ಏರಿಯ ಮೇಲೆ, ಮುಳ್ಳುಪೊದೆಗಳ ನಡುವೆ ಒಟ್ಟು 25 ಗಾಂಜಾ ಗಿಡಗಳು ಪತ್ತೆಯಾಗಿವೆ. ಈ ನಿಷಿದ್ಧ ಬೆಳೆಯನ್ನು ಬೆಳೆದವರು ಯಾರೆಂಬುದು ಇನ್ನೂ ತಿಳಿದುಬಂದಿಲ್ಲ.
ಅವರು ಗಿಡಗಳನ್ನು ಬೆಳೆಸಲು ನೀರಿನ ಟ್ಯಾಂಕ್, ನೀರಾವರಿ ಪಂಪ್ ಮತ್ತು ಪೈಪ್‌ಲೈನ್‌ಗಳಂತಹ ಸಂಪೂರ್ಣ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರು. ಈ ಕೃಷಿಕರು ಗಿಡಗಳಿಗೆ ನೀರುಣಿಸಲು ಮತ್ತು ಅವುಗಳ ಆರೈಕೆ ಮಾಡಲು ನಿಯಮಿತವಾಗಿ ಈ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಮತ್ತು ತಹಸೀಲ್ದಾರ್ ಅವರನ್ನೊಳಗೊಂಡ ತಂಡವು ಸ್ಥಳಕ್ಕೆ ಭೇಟಿ ನೀಡಿದೆ. ಗಾಂಜಾ ಗಿಡಗಳು ಹಾಗೂ ಅಲ್ಲಿ ಬಳಸಲಾಗಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿರಹಟ್ಟಿಯ ನಿವಾಸಿ ರಾಘವೇಂದ್ರ ಎಚ್. ಅವರು ಮಾತನಾಡಿ, ಸುಮಾರು ಆರು ತಿಂಗಳ ಹಿಂದೆಯೇ ಗಾಂಜಾ ಕೃಷಿಯನ್ನು ಪ್ರಾರಂಭಿಸಿರಬಹುದು. ಆದರೆ, ಇದಕ್ಕೂ ಮೊದಲು ಇಲ್ಲಿ ಗಾಂಜಾ ಬೆಳೆಯಲಾಗುತಿತ್ತೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



