ಗದಗ

ಇವರು ಅಬಲೆಯರಲ್ಲ, ಪದಕ ಬೇಟೆಯ ಸಬಲೆಯರು: ಗದಗಿನ ಈ ಯುವ ಕುಸ್ತಿಪಟುಗಳ ಸಾಧನೆ ಕೇಳಿದರೆ ನಿಮಗೂ ಹೆಮ್ಮೆಯಾಗುತ್ತೆ..!
2003ರಲ್ಲಿ ಶರಣಪ್ಪ ಬೇಳೇರಿ ಅವರು ಗದಗದಲ್ಲಿ ಹೆಣ್ಣುಮಕ್ಕಳಿಗೆ ಕುಸ್ತಿ ತರಬೇತಿ ನೀಡಲು ಆರಂಭಿಸಿದರು. ಹೆಣ್ಣುಮಕ್ಕಳು ಕುಸ್ತಿ ಕಲಿಯಬಾರದು ಎಂಬ ಸಾಂಪ್ರದಾಯಿಕ ಮನೋಭಾವಕ್ಕೆ ಸವಾಲು ಹಾಕಿದ ಅವರು, ಗ್ರಾಮೀಣ ಪ್ರತಿಭೆಗಳಿಗೆ ಅಖಾಡದಲ್ಲಿ ಅವಕಾಶ ಕಲ್ಪಿಸಿದರು.

ಗದಗ: ಕೋಮು ಸೌಹಾರ್ದತೆ ಸಂದೇಶ; 35 ವರ್ಷಗಳಿಂದ ಲಕ್ಷ್ಮೀ ಪೂಜೆ ನೆರವೇರಿಸುತ್ತಿರುವ ಮುಸ್ಲಿಂ ಕುಟುಂಬ!
ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಬಳಿ ಸೈಕಲ್ ಪಂಕ್ಚರ್ ಮತ್ತು ದುರಸ್ತಿ ಅಂಗಡಿಯನ್ನು ನಡೆಸುತ್ತಿರುವ ಕುತುಬುದ್ದೀನ್ ಗದದ್ ಅವರು, ಪ್ರತಿ ದೀಪಾವಳಿಯಂದು ತಮ್ಮ ಅಂಗಡಿಯಲ್ಲಿ ಲಕ್ಷ್ಮಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದ್ದಾರೆ.

ಪ್ರಾಚೀನ ಭಾಷೆಗೆ ಉತ್ತೇಜನ: ಹಳಗನ್ನಡ ಸಂಪ್ರದಾಯ ಜೀವಂತವಾಗಿಟ್ಟಿರುವ ಭೈರನಹಟ್ಟಿ ಕನ್ನಡ ಮಠ!
ಪ್ರತಿ ವರ್ಷ ನವೆಂಬರ್ 1 ರಿಂದ 44 ದಿನಗಳ ಕಾಲ ಮಠದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಭೀಕರ ಬರಕ್ಕೆ ನಲುಗಿದ ಗದಗ: ಹೊಂಬಾಳ ಗ್ರಾಮದಲ್ಲಿ ರೈತರಿಗೆ ಸತತ ನಷ್ಟ; ಬದುಕಿಗಾಗಿ ನಗರಗಳತ್ತ ಮುಖ ಮಾಡಿದ ಅನ್ನದಾತ..!
ಜನವರಿಯಿಂದಲೂ ಹೊಂಬಾಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಹೀಗಾಗಿ ರೈತರು ಹೊಲಗಳನ್ನು ಖಾಲಿ ಬಿಟ್ಟಿದ್ದು, ಕೆಲವರು ಮಳೆ ಬಂದರೆ ಮಣ್ಣಿನಲ್ಲಿನ ತೇವಾಂಶ ಬೇಗ ಆವಿಯಾಗದಿರಲಿ ಎಂಬ ನಿರೀಕ್ಷೆಯಲ್ಲಿ ಮೇಲ್ಮಣ್ಣಿನ ಮೇಲೆ ಮರಳು ಮತ್ತು ಸಣ್ಣ ಕಲ್ಲುಗಳನ್ನು ಹರಡಿದ್ದಾರೆ.

ನಾಪತ್ತೆಯಾಗಿದ್ದ KRIDL ಎಂಜಿನಿಯರ್ ಮುಂಬೈನಲ್ಲಿ ಪತ್ತೆ; ಗದಗಕ್ಕೆ ವಾಪಸ್ ಕರೆತಂದ ಪೊಲೀಸರು
ಶುಕ್ರವಾರ ತಡರಾತ್ರಿ ಪರ್ವೇಜ್ ಅವರನ್ನು ಮುಂಬೈನಿಂದ ಗದಗಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಆರೋಗ್ಯವಾಗಿದ್ದು, ವಿಚಾರಣೆ ನಡೆಸಿದ ಬಳಿಕ ಮನೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.

ಡೆತ್‌ನೋಟ್ ಬರೆದಿಟ್ಟು ಹೋಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆ!
ಬರೋಬ್ಬರಿ 40 ದಿನಗಳ ಕಾಲ ಪೊಲೀಸರ ಕಣ್ಣಿಗೆ ಬೀಳದೆ ಐದು ರಾಜ್ಯಗಳಲ್ಲಿ ಅಲೆದಾಡುತ್ತಿದ್ದ ಅಧಿಕಾರಿಯನ್ನು ರಾಜ್ಯ ಪೊಲೀಸ್ ತಂಡ ಮಹಾರಾಷ್ಟ್ರದ ಮುಂಬೈನಲ್ಲಿ (Mumbai) ಪತ್ತೆಹಚ್ಚಿ ವಶಕ್ಕೆ ಪಡೆದಿದೆ.

ಗದಗದ ನೀಲಗುಂದ ಬೆಟ್ಟಕ್ಕೆ ಸಂರಕ್ಷಿತ ಸ್ಮಾರಕ ಮಾನ್ಯತೆ? ಶಿಲಾಯುಗದ ಗುಹಾಚಿತ್ರಗಳ ರಕ್ಷಣೆಗೆ ಸರ್ಕಾರದ ಸೂಚನೆ..!
ಈ ಬೆಟ್ಟವನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಚೇರಿ (ಸಿಎಂಒ) ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ಇದು ಇತಿಹಾಸಕಾರರು ಹಾಗೂ ಇತಿಹಾಸಾಸಕ್ತರಲ್ಲಿ ಸಂತಸ ಮೂಡಿಸಿದೆ.

SSLC ಪಾಸಾದವರಿಗೆ ಬಂಪರ್ ಆಫರ್: ಗದಗ ಜಿಲ್ಲಾ ನ್ಯಾಯಾಲಯದಲ್ಲಿ 22 ಹುದ್ದೆಗಳ ನೇಮಕಾತಿ; ₹46,675 ಸಂಬಳ
ಗದಗ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಒಟ್ಟು 22 ಜವಾನ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆ ಕುರಿತ ವರದಿ ಇಲ್ಲಿದೆ:

ಬರದಿಂದ ಕಂಗೆಟ್ಟ ಗದಗ ಜಿಲ್ಲೆ: ಜೀವನಕ್ಕಾಗಿ ಉದ್ಯೋಗ ಅರಸಿ ಗುಳೇ ಹೊರಟ ರೈತರು!
ಗದಗದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಲ್ಲಿ ವಿಳಂಬವಾಗಿತ್ತು. ವಿಧಾನಸಭೆಯಲ್ಲಿ ಚರ್ಚೆಯಾದ ನಂತರ, ಸರ್ಕಾರವು ಸ್ಥಳ ಪರಿಶೀಲನೆಗೆ ಆದೇಶಿಸಿತು ಮತ್ತು ನಂತರ ಗದಗ, ರೋಣ ಹಾಗೂ ಮುಂಡರಗಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತು.

