ಸರ್ಕಾರಿ ಶಾಲೆಯ ಕುಸಿದ ಭಾಗ 
ರಾಜ್ಯ

ಕುಸಿದ ಗೋಡೆ, ರೈಲ್ವೆ ಹಳಿಯ ಪಕ್ಕ ಬಯಲು ಪ್ರದೇಶ ಮಕ್ಕಳ ಶೌಚಾಲಯ

ಇಲ್ಲಿನ ಗಾಂಧಿನಗರದಲ್ಲಿರುವ ಸರ್ಕಾರಿ ಉರ್ದು ಶಾಲೆ ಅವ್ಯವಸ್ಥೆಗೆ ಸೂಕ್ತ ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ...

ಬೆಳಗಾವಿ; ಇಲ್ಲಿನ ಗಾಂಧಿನಗರದಲ್ಲಿರುವ ಸರ್ಕಾರಿ ಉರ್ದು ಶಾಲೆ ಅವ್ಯವಸ್ಥೆಗೆ ಸೂಕ್ತ ನಿದರ್ಶನವಾಗಿ ನಿಲ್ಲುತ್ತದೆ. ಇಲ್ಲಿ ಓದುವ ಮಕ್ಕಳು ಅಪಾಯದಲ್ಲಿ ದಿನನೂಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಒಂದು ಭಾಗ ಕುಸಿದು ಬಿದ್ದಿರುವುದಲ್ಲದೆ ಮಕ್ಕಳು ಶೌಚಕ್ಕೆ ಹೋಗಬೇಕೆಂದರೆ ಪಕ್ಕದ ರೈಲ್ವೆ ಹಳಿಯ ಹತ್ತಿರವಿರುವ ಚರಂಡಿಗೆ ಹೋಗಬೇಕು. ಈ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಅಪಾರವಾಗಿದೆ.

ಶಾಲೆಯ ಒಂದು ಭಾಗ ಕುಸಿದು ಬಿದ್ದಾಗ ಶೌಚಾಲಯದ ಒಂದು ಭಾಗಕ್ಕೆ ಹಾನಿಯುಂಟಾಗಿತ್ತು ಎನ್ನುತ್ತಾರೆ ಶಾಲೆಯ ಸಿಬ್ಬಂದಿ. ಆದರೂ ಕೂಡ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣು ಮಕ್ಕಳು ಇದನ್ನೇ ಬಳಸುತ್ತಿದ್ದಾರೆ. 15 ದಿನಗಳ ಹಿಂದೆ ಈ ಕಟ್ಟಡ ಕುಸಿದುಬಿತ್ತು ಎನ್ನುತ್ತಾರೆ ಸಿಬ್ಬಂದಿ.

ದೊಡ್ಡ ಹೆಣ್ಣು ಮಕ್ಕಳು ಮಧ್ಯಾಹ್ನ ಊಟದ ವಿರಾಮ ಸಮಯದಲ್ಲಿ ಮನೆಗೆ ಹೋಗಿದ್ದಾಗ ಮನೆಯಲ್ಲಿ ಶೌಚ ಮಾಡಿಕೊಂಡು ಬರುತ್ತಾರೆ. ಬಹುತೇಕ ಮಕ್ಕಳು ಶಾಲೆಯ ಹತ್ತಿರವೇ ವಾಸಿಸುತ್ತಿರುವುದು ಎಂಬುದು ಶಾಲೆಯ ಸಿಬ್ಬಂದಿ ಸಮರ್ಥನೆ.

ಆದರೆ ಶಾಲೆಯ ವಿದ್ಯಾರ್ಥಿಗಳು ಹೇಳುವುದು ಬೇರೆ. ಶಾಲೆಯ ಹತ್ತಿರ ರೈಲ್ವೆ ಹಳಿಯ ಪಕ್ಕದ ಚರಂಡಿಯಲ್ಲಿ ಹೋಗಿ ಶೌಚ ಮಾಡಬೇಕಾಗುತ್ತದೆ ಎನ್ನುತ್ತಾರೆ. ಕೆಲವು ಮೊಬೈಲ್ ಟಾಯ್ಲೆಟ್ ಗಳನ್ನು ಶಾಲಾ ಆವರಣಕ್ಕೆ ತರಲಾಯಿತು, ಆದರೆ ಅವುಗಳನ್ನು ಫಿಟ್ ಮಾಡಲಿಲ್ಲ, ಹೀಗಾಗಿ ಅವು ಬಳಕೆಯಾಗದೆ ಉಳಿದುಕೊಂಡಿವೆ ಎಂದು ಹೇಳುತ್ತಾರೆ.

ಮತ್ತೊಬ್ಬ ಶಾಲಾ ಸಿಬ್ಬಂದಿ, ನಮ್ಮ ಕಷ್ಟಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಬಯಲು ಪ್ರದೇಶದಲ್ಲಿ ಮಕ್ಕಳು ಶೌಚ ಮಾಡಬೇಕಾಗುತ್ತಿದೆ. ಆದರೆ ದೊಡ್ಡವರಾದ ಹೆಣ್ಣು ಮಕ್ಕಳದ್ದು ಮತ್ತು ಶಿಕ್ಷಕಿಯರ ಕಷ್ಟ ಹೇಳತೀರದು ಎನ್ನುತ್ತಾರೆ.

ಸರ್ಕಾರಿ ಉರ್ದು ಶಾಲೆ ಸಂಖ್ಯೆ 5ರಲ್ಲಿ ಒಟ್ಟು 595 ವಿದ್ಯಾರ್ಥಿಗಳಿದ್ದು ಅವರಲ್ಲಿ 399 ಮಂದಿ ಬಾಲಕಿಯರು.ಶಾಲಾ ಕಟ್ಟಡ ಕುಸಿದ ನಂತರ ಇಲ್ಲಿ ಸರಿಯಾಗಿ ಪಾಠಗಳು ಕೂಡ ನಡೆಯುತ್ತಿಲ್ಲ. ಇದರ ಹಿಂದೆ ಇರುವ ಮದರಸಾ ಶಾಲೆಯ ಸಮುದಾಯ ಸಭಾಂಗಣವನ್ನು ತರಗತಿಗಳನ್ನಾಗಿ ಮಕ್ಕಳಿಗೆ ಪಾಠ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಮಕ್ಕಳು ಶೌಚಕ್ಕೆಂದು ಬಳಸುತ್ತಿರುವ ದೊಡ್ಡ ಚರಂಡಿ ಅಪಾಯವಾಗಿದೆ. ಆಕಸ್ಮಿಕವಾಗಿ ಮಕ್ಕಳು ಬಿದ್ದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ. ಶಾಲೆಗೆ ಕಂಪೌಂಡ್ ಗೋಡೆಗಳಿಲ್ಲ. ಹೀಗಾಗಿ ಮಕ್ಕಳು ಚರಂಡಿಯ ಮೂಲಕ ಹಾರಿ ರೈಲ್ವೆ ಹಳಿಯನ್ನು ದಾಟಿ ತಮ್ಮ ಮನೆಗಳಿಗೆ ಹೋಗುತ್ತಾರೆ. ಇದು ಕೂಡ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಪರಿಸ್ಥಿತಿಯಿದೆ.
ಈ ಪರಿಸ್ಥಿತಿ ಹಲವು ಸಮಯಗಳಿಂದ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ. ಅನೇಕ ಸಲ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕೆಲವು ಪೋಷಕರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT