ಸಂಗ್ರಹ ಚಿತ್ರ 
ರಾಜ್ಯ

ನಾಪತ್ತೆಯಾಗಿದ್ದ ಶಾಸಕರ ಪುತ್ರಿ ಲಕ್ಷ್ಮಿ ನಾಯಕ್ ನಿರ್ಮಾಪಕ ಸುಂದರ್ ಜೊತೆ ರಹಸ್ಯ ವಿವಾಹ!

ಬೆಳಗ್ಗೆ ನಾಪತ್ತೆಯಾಗಿದ್ದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಲಕ್ಷ್ಮೀ ನಾಯಕ್ ಅವರು ಇದೀಗ ಕನ್ನಡ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಬೆಳಗ್ಗೆ ನಾಪತ್ತೆಯಾಗಿದ್ದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಮಗಳು ಲಕ್ಷ್ಮೀ ನಾಯಕ್ ಅವರು ಇದೀಗ ಕನ್ನಡ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರೊಂದಿಗೆ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ನಾಪತ್ತೆಯಾಗಿದ್ದ ಲಕ್ಷ್ಮೀ ನಾಯಕ್ ಅವರು ಫೇಸ್ ಬುಕ್ ನಲ್ಲಿ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿದ್ದು, ನಾನು ನನ್ನ ಸ್ವಇಚ್ಛೆಯಿಂದಲೇ ಸುಂದರ್ ಅವರನ್ನು ವಿವಾಹವಾಗಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇನ್ನು ಇಂದು ಬೆಳಗ್ಗೆ ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯ್ಕ್ ಅವರು ತಮ್ಮ ಮಗಳು ಲಕ್ಷ್ಮೀ ನಾಯ್ಕ್ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಬಳಿಕ ಬಂದ ಮಾಧ್ಯಮ ಸುದ್ದಿಗಳಲ್ಲಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್ ಪಿ ಗೌಡ ಇಬ್ಬರೂ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ರಹಸ್ಯವಾಗಿ ವಿವಾಹವಾಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸ್ವತಃ ಲಕ್ಷ್ಮೀ ನಾಯ್ಕ್ ಅವರೇ ಸೆಲ್ಫಿ ವಿಡಿಯೋ ಮೂಲಕ ತಮ್ಮ ವಿವಾಹದ ಕುರಿತು ಸ್ಪಷ್ಟನೆ ನೀಡಿದ್ದಾರೆ. 
ಸೆಲ್ಫಿ ವಿಡಿಯೋದಲ್ಲಿ ಲಕ್ಷ್ಮೀ ನಾಯಕ್ ಏನು ಹೇಳಿದ್ದಾರೆ?
‘ನಾನು ಸುಂದರ್​ ಗೌಡ್ರು ಇಬ್ರೂ ಇಷ್ಟ ಪಟ್ಟು, ಇಚ್ಛೆಯಿಂದ ಮದ್ವೆ ಆಗಿರುವಂಥದ್ದು. ನಮ್ಮಿಂದ ಯಾರಿಗೂ ಏನೂ ತೊಂದರೆ ಆಗ್ಬಾರ್ದು, ಹಾನಿ ಆಗ್ಬಾರ್ದು. ನಾನು ಮನಸಾರೆ ಅವರನ್ನು ಮದುವೆ ಆಗಿದ್ದೇನೆ. ಇದಕ್ಕೆ ನಂಗೆ ಯಾವುದೇ ಅಭ್ಯಂತರ ಇಲ್ಲ, ಯಾರೂ ಫೋರ್ಸ್​ ಮಾಡಿಲ್ಲ. ನಾನು ಮೈನರ್​ ಅಲ್ಲ ಮೇಜರ್​. ನನ್ನ ಬುದ್ಧಿ ಸ್ವತಃ ನಾನು ಯೋಚನೆ ಮಾಡಬಹುದು. ಐ ಆ್ಯಮ್​ ಹ್ಯಾಪಿ ಟು ಲಿವ್​ ವಿಥ್​ ಹಿಮ್​‘ ಎಂದಿದ್ದಾರೆ.
ಬುಧವಾರ ಲಕ್ಷ್ಮೀ ನಾಪತ್ತೆಯಾಗಿರುವ ಕುರಿತು ಶಾಸಕ ಶಿವಮೂರ್ತಿ ನಾಯ್ಕ್​ ಯಲಹಂಕ ನ್ಯೂಟೌನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ