ಸರ್ವಪಕ್ಷ ಸಭೆಯಲ್ಲಿ ಮಾತುಕತೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಸರ್ಕಾರದ ಮುಂದಿನ ನಡೆಯನ್ನು ರಾಜ್ಯ ಪರ ವಕೀಲರಾದ ಫಾಲಿ ನಾರಿಮನ್ ಹಾಗೂ ಶಾಮ್ ದಿವಾನ್ ನೇತೃತ್ವದ ಕಾನೂನು ತಂಡದ ಅಭಿಪ್ರಾಯ ಪಡೆದ ನಂತರ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸರ್ವಪಕ್ಷಗಳ ಸದನ ನಾಯಕರ ಸಭೆ ನಿರ್ಧರಿಸಿದೆ.
ಕಾವೇರಿ ತೀರ್ಪು ಕುರಿತು ರಾಜ್ಯ ಸರ್ಕಾರದ ನಿಲುವು ತಿಳಿಸಲು ಸುಪ್ರೀಂಕೋರ್ಟ್ ಮಾ.18ರವರೆಗೂ ಗಡುವ ನೀಡಿದೆ. ಆ ವೇಳೆಗೆ ತೀರ್ಪಿನ ಕುರಿತು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೋ ಅಥವಾ ಬೇಡವೋ, ವ್ಯಾಜ್ಯ ಪರಿಹಾರ ವೇದಿಕೆಯ ವಿಚಾರದ ಬಗ್ಗೆ ಯಾವ ರೀತಿ ಆಕ್ಷೇಪಣೆ ಸಲ್ಲಿಸಬೇಕು ಎಂಬ ಬಗ್ಗೆ ಕಾನೂನು ತಂಡದ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲು ಸಭೆಯು ಒಮ್ಮತದ ನಿರ್ಧಾರಕ್ಕೆ ಬಂದಿದೆ.
ಸುಪ್ರೀಂಕೋರ್ಟ್ ತೀರ್ಪೀನ ಹಿನ್ನಲೆಯಲ್ಲಿ ಅನುಸರಿಬೇಕಾದ ಕ್ರಮ ಕುರಿತು ಸರ್ವಪಕ್ಷಗಳ ನಾಯಕರು, ಕಾವೇರಿ ಕಣಿವೆ ಪ್ರದೇಶದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics