ಲಕ್ಷ್ಮಿ ನಾಯಕ್ ಮತ್ತು ಸುಂದರ್ ಪಿ ಗೌಡ 
ರಾಜ್ಯ

ಇಬ್ಬರೂ ಸ್ವಇಚ್ಛೆಯಿಂದ ವಿವಾಹವಾಗಿದ್ದೇವೆ: ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿ ನಾಯ್ಕ್ ಹೇಳಿಕೆ

ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಹಾಗೂ ಚಲನಚಿತ್ರ ನಿರ್ಮಾಪಕ ಸುಂದರ್ ಗೌಡ ಇಂದು ಯಲಹಂಕ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ .,..

ಬೆಂಗಳೂರು: ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಹಾಗೂ ಚಲನಚಿತ್ರ ನಿರ್ಮಾಪಕ ಸುಂದರ್ ಗೌಡ ಇಂದು ಯಲಹಂಕ ಪೊಲೀಸ್ ಠಾಣೆಗೆ ಆಗಮಿಸಿ ಹೇಳಿಕೆ ನೀಡಿದ್ದಾರೆ.
ನಾವಿಬ್ಬರೂ ಸ್ವಇಚ್ಥೆಯಿಂದ ಮದುವೆಯಾಗಿದ್ದೇವೆ,ಸ ನಮ್ಮ ಮದುವೆಗೆ ಯಾರ ಒತ್ತಾಯವೂ ಇಲ್ಲ ಎಂದು ಪೊಲೀಸರ ಮುಂದೆ ನವದಂಪತಿ ಹೇಳಿಕೆ ದಾಖಲಿಸಿದ್ದಾರೆ.
ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಮಾಯಕೊಂಡ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ಪುತ್ರಿ ಲಕ್ಷ್ಮೀ  ಮೈಸೂರಿನಲ್ಲಿ ವಿವಾಹವಾಗಿದ್ದರು. ವಿವಾಹವಾದ ನಂತರ ನಟ ದುನಿಯಾ ವಿಜಯ್ ಮನೆಯಲ್ಲಿ  ಆಶ್ರಯ ಪಡೆದಿದ್ದರು.
ಇನ್ನೂ ನಟ ದುನಿಯಾ ವಿಜಯ್ ಜೊತೆ ಯಲಹಂಕ ನ್ಯೂ ಟೌನ್ ಠಾಣೆಗೆ ಆಗಮಿಸಿದ ದಂಪತಿ ಇನ್ಸ್ ಪೆಕ್ಟರ್ ಮಂಜುನಾಥ್ ಮುಂದೆ ಇಬ್ಬರೂ ಸ್ವಇಚ್ಚೆಯಿಂದಲೇ  ಮದುವೆಯಾಗಿರುವುದಾಗಿ ಹೇಳಿಕೆ ನೀಡಿದ್ದಾರೆ.ಇನ್ನೂ ಲಕ್ಷ್ಮಿ ನಾಯ್ಕ್ ಅವರನ್ನು ತಮ್ಮ ಸೊಸೆ ಎಂದು ಒಪ್ಪಿಕೊಂಡಿರುವುದಾಗಿ ಸುಂದರ್ ಮನೆಯವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೆ ಇರೋದ್ 5 ಬೆರಳು: ಸಾವಿನ ವದಂತಿ ಮಧ್ಯೆ ಚಹಾ ಕುಡಿಯುತ್ತ ಕಾಣಿಸಿಕೊಂಡ ಇಸ್ರೇಲ್ ಪ್ರಧಾನಿ; ಇರಾನ್‌ಗೆ ಮುಖಭಂಗ; Video

'ಒಂದು ವೇಳೆ ಬದುಕಿದ್ದರೆ, ಹುಡುಕಿ ಕೊಲ್ಲುತ್ತೇವೆ': ಬೆಂಜಮಿನ್ ನೆತನ್ಯಾಹು ಸಾವಿನ ವದಂತಿಗಳ ನಡುವೆ ಇರಾನ್ ಎಚ್ಚರಿಕೆ!

ಯುದ್ಧ: ಮೊದಲ ಬಾರಿಗೆ Dancing Missile ಉಡಾಯಿಸಿದ Iran; 2 ಸಾವಿರ ಕಿ.ಮೀ ವ್ಯಾಪ್ತಿ.. ಅಮೆರಿಕಕ್ಕೆ ತಲೆನೋವು!

ಬಾಲಿವುಡ್ ನಟಿ ಮಧು ಮಲ್ಹೋತ್ರಾ ನಿಧನ

Reels ಗೀಳಿಗೆ ಮತ್ತೊಂದು ಬಲಿ: Delhi–Mumbai Expresswayನಲ್ಲಿ ಕ್ಯಾಂಟರ್ ಢಿಕ್ಕಿ, ಯುವಕ ಸಾವು! Video

SCROLL FOR NEXT