ರಾಜ್ಯ

ಬಾಹ್ಯಾಕಾಶ ವಿಜ್ಞಾನಿ ಯುಆರ್ ರಾವ್ ಜನ್ಮ ದಿನ: ರಾವ್‌ ಸಾಧನೆಯನ್ನು ಸ್ಮರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Raghavendra Adiga
ಬೆಂಗಳೂರು: ಭಾರತದ ಪ್ರಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ  ಪ್ರೊ.ಯು.ಆರ್‌. ರಾವ್‌ ಜನ್ಮ ದಿನ ಇಂದು(ಮಾ.10). ಇದೇ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾವ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
ಆರ್ಯಭಟದ ರೂವಾರಿಯಾಗಿದ್ದ ರಾವ ಅವರ ಕೊಡುಗೆಯನ್ನು ಸ್ಮರಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ‘ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ದೇಶದ ಪ್ರಪ್ರಥಮ ಉಪಗ್ರಹ ಆರ್ಯಭಟದ ರೂವಾರಿ ಆದ ಪದ್ಮ ವಿಭೂಷಣ ಉಡುಪಿ ರಾಮಚಂದ್ರರಾವ್ ಅವರ ಜನ್ಮ ದಿನದಂದು ನಾಡು ಅವರ ಸೇವೆಯನ್ನು ಹೆಮ್ಮೆಯಿಂದ ಸ್ಮರಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಬಾಹ್ಯಾಕಾಶ ವಿಜ್ಞಾನಿ ರಾವ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ ರಾಷ್ಟ್ರೀಯ ವೈಮಾನಿಕ ಫೆಡರೇಷನ್‌ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದವರಲ್ಲಿ ಪ್ರಮುಖರಾಗಿದ್ದ ರಾವ್ ಕಳೆದ ವರ್ಷ ಜುಲೈ 23ರಂದು ನಿಧನರಾಗಿದ್ದರು.
SCROLL FOR NEXT