ಬೆಂಗಳೂರು. ಕ್ಷೇತ್ರದ ಶಾಸಕರು ಹಾಗೂ ಸಂಸದರ ಬಗ್ಗೆ ಮಾಹಿತಿ ಪಡೆಯಲು ಹಾಗೂ ಚುನಾವಣಾ ಅಕ್ರಮಗಳ ಮೇಲೆ ನಿಗಾ ಇಡುವ ಸಲುವಾಗಿ ಎಲೆಕ್ಷನ್ ವಾಚ್ ರಿಪೋರ್ಟ್ ಎಂಬ ಮೊಬೈಲ್ ಆ್ಯಪ್ ಮತ್ತು ಎಸ್ಎಂಎಸ್ ಸೇವೆಯನ್ನು ನೂತನವಾಗಿ ಆಸೋಸಿಯೋಷನ್ ಫಾರ್ ಡೆಮಾಕ್ರಟಿಕೆ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಆರಂಭಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ನಿನ್ನೆ ಮಾತನಾಡಿರುವ ಎಡಿಆರ್ ಟ್ರಸ್ಟಿ ತ್ರಿಲೋಚನ್ ಶಾಸ್ತ್ರಿಯವರು, ಎಸ್ಎಂಎಸ್ ಮೂಲಕ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಮಾಹಿತಿ ಪಡೆಯುವ ಜೊತೆಗೆ ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳ ಪೋಟೋ ಮತ್ತು ವಿಡಿಯೋಗಳನ್ನು ಆ್ಯಪ್ ಮೂಲಕ ಅಪ್ ಲೋಡ್ ಮಾಡಬಹುದಾಗಿದೆ. ನಿಮ್ಮ ಅಭ್ಯರ್ಥಿ ಜೊತೆಗೆ ನಿಮ್ಮ ವಿಧಾನಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರ ಅಥವಾ ಪಿನ್ ಕೋಟ್ ಟೈಪ್ ಮಾಡಿ. 56070ಗೆ ಎಸ್ಎಂಎಸ್ ಮಾಡಬೇಕು. ಆಗ ನಿಮ್ಮ ಕ್ಷೇತ್ರದ ಶಾಸಕ ಹಾಗೂ ಸಂಸದರ ಆಸ್ತಿ ವಿವರ, ಪಕ್ಷ, ಶೈಕ್ಷಣಿಕ ಅರ್ಹತೆ ಸೇರಿದಂತೆ ಎಳ್ಲಾ ಮಾಹಿದಿ ಎಸ್ಎಂಎಸ್ ನಲ್ಲಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸಾರ್ವಜನಿಕರನ್ನು ಸಕ್ರಿಯಗೊಳಿಸಿ ಸಮರ್ಥ ಅಭ್ಯರ್ಥಿಗಳ ಆಯ್ಕೆಗಾಗಿ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಡಿಆರ್ ಎಲೆಕ್ಷನ್ ವಾಚ್ ರಿಪೋರ್ಟ್ ಎಂಬ ಮೊಬೈಲ್ ಕೂಡ ಸಿದ್ಧಪಡಿಸಲಾಗಿದ್ದು, ಗೂಗಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ಅಥವಾ ಅವರ ಬೆಂಬಲಿಗರು ಆಮಿಷವೊಡ್ಡಿ ಮತ ನೀಡುವಂತೆ ಕೇಳಿಕೊಳ್ಳುವ ದೃಶ್ಯಗಳನ್ನು ಈ ಆ್ಯಪ್ ಮೂಲಕ ವಿಡಿಯೋ ತೆಗೆದು ಅಪ್ ಲೋಡ್ ಮಾಡಬಹುದು. ಈ ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುತ್ತದೆ. ಅಲ್ಲದೆ, ಅಕ್ರಮ ಮಾಡಿದವರ ಮಾಹಿತಿಯನ್ನು ಆಧರಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದಿದ್ದಾರೆ.
ಎಡಿಆರ್ ಮುಖ್ಯಸ್ಥ ಅನಿಲ್ ವರ್ಮಾ ಅವರು ಮಾತನಾಡಿ, ದೇಶದಲ್ಲಿ ಕಪ್ಪು ಹಣ ಇಂದಿಗೂ ಓಡಾಡುತ್ತಿದೆ. ಚುನಾವಣೆಯಲ್ಲೂ ಈ ಹಣದ ಬಳಕೆ ಹೆಚ್ಚಾಗಿರುತ್ತದೆ. ಚುನಾವಣಾ ವ್ಯವಸ್ಥೆಯನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಮತ್ತು ಬೇರೆ ಬೇರೆ ರಾಜ್ಯದ ಹೈಕೋರ್ಟ್ ನಲ್ಲಿ ಸಾರ್ವಜನಿರ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ. ರಾಜಕೀಯ ಪಕ್ಷದ ಜೊತೆಗೆ ಚುನಾವಣೆ ಸ್ಪರ್ಧಿಸುವ ಅಭ್ಯರ್ಥಿಗಳ ಆದಾಯವನ್ನು ಆರ್'ಟಿಇ ಮೂಲಕ ಪಡೆಯುವ ಅವಕಾಶ ನೀಡಬೇಕು. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಿಂದ ನೋಟಾ ಹೆಚ್ಚಿದ್ದರೆ ಅಲ್ಲಿ ಮರು ಚುನಾವಣೆ ಮಾಡಬೇಕು ಅಥವಾ ಗೆಲವನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics