ಮೆಟ್ರೋ ನೌಕರರ ಮುಷ್ಕರದಿಂದ ಸಾರಿಗೆ ವ್ಯವಸ್ಥೆ ದುರ್ಬಲ: ಹೈಕೋರ್ಟ್ ಗೆ ಬಿಎಂಆರ್ ಸಿಎಲ್
ನಮ್ಮ ಮೆಟ್ರೋ ರೈಲು ನೌಕರರು ಇದೇ 22 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನೆಡಸಲು ಉದ್ದೇಶಿಸಿರುವುದರಿಂದ ಎಸ್ಮಾ ಮೇಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹೈಕೋರ್ಟ್ ಗೆ ಸಂವಾದಾತ್ಮಕ ಅರ್ಜಿ ಸಲ್ಲಿಸಿದೆ.
ಬೆಂಗಳೂರು: ನಮ್ಮ ಮೆಟ್ರೋ ರೈಲು ನೌಕರರು ಇದೇ 22 ರಿಂದ ಅನಿರ್ಧಿಷ್ಠಾವಧಿ ಮುಷ್ಕರ ನೆಡಸಲು ಉದ್ದೇಶಿಸಿರುವುದರಿಂದ ಎಸ್ಮಾ ಮೇಲಿನ ತಡೆಯಾಜ್ಞೆ ತೆರವುಗೊಳಿಸುವಂತೆ ಬಿಎಂಆರ್ ಸಿಎಲ್ ಹೈಕೋರ್ಟ್ ಗೆ ಸಂವಾದಾತ್ಮಕ ಅರ್ಜಿ ಸಲ್ಲಿಸಿದೆ.
ನೌಕರರ ಮುಷ್ಕರದಿಂದ ನಗರದಲ್ಲಿನ ಸಾರಿಗೆ ವ್ಯವಸ್ಥೆ ದುರ್ಬಲಗೊಳ್ಳುವುದರಿಂದ ಪ್ರಯಾಣಿಕರು ತೀವ್ರ ರೀತಿಯ ತೊಂದರೆ ಎದುರಿಸುವಂತಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಎಸ್ಮಾ ಜಾರಿಗೆ ಸಂಬಂಧಿಸಿದಂತೆ ಕಾರಣ ತಿಳಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ನೌಕರರೊಂದಿಗೆ ರಾಜೀ ಮಾಡಿಕೊಳ್ಳಲಾಗಿತ್ತು. ಇದರ ಹೊರತಾಗಿ ಸರ್ಕಾರ ಮೇಲ್ವಿಚಾರಣೆಗಾಗಿ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಐವರು ನಿರ್ದೇಶಕರನ್ನು ನೇಮಕಗೊಳಿಸಿದೆ .ಬಿಎಂಆರ್ ಸಿಎಲ್ ನೌಕರರು ಯಾವುದೇ ಚರ್ಚೆ ಮಾಡದೆ, ರೈಲು ತಡೆಯುವ ಮೂಲಕ ಪ್ರಯಾಣಿಕರಿಗೆ ತೊಂದರೆ ಕೊಡಲು ನಿರ್ಧರಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಬಿಎಂಆರ್ ಸಿಎಲ್ ನೌಕರರ ಪರ ವಕೀಲರ ಆಕ್ಷೇಪಣೆಗೆ ಕಾಲಾವಕಾಶ ನೀಡಿ ನ್ಯಾಯಾಧೀಶ ಎಲ್. ನಾರಾಯಣಸ್ವಾಮಿ ಈ ಅರ್ಜಿ ವಿಚಾರಣೆಯನ್ನು ಇದೇ 20ರವರೆಗೆ ಮುಂದೂಡಿದ್ದಾರೆ.ಮುಂದಿನ ವಿಚಾರಣೆಯವರೆಗೂ ಎಸ್ಮಾ ಮೇಲಿನ ತಡೆಯಾಜ್ಞೆಯನ್ನು ನ್ಯಾಯಾಲಯ ವಿಸ್ತರಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.