ಸಾಂಗ್ಲಿಯಾನ-ಡಿ ರೂಪಾ-ಆಶಾದೇವಿ 
ರಾಜ್ಯ

ನಿಭರ್ಯಾ ತಾಯಿಯ ಅಂದ ಚೆಂದ ವರ್ಣಿಸಿ ವಿವಾದಕ್ಕೀಡಾದ ಸಾಂಗ್ಲಿಯಾನ

ದೆಹಲಿಯಲ್ಲಿ ಕಾಮುಕರಿಂದ ಭೀಕರವಾಗಿ ಅತ್ಯಾಚಾರಕ್ಕೀಡಾಗಿ, ಅಮಾನುಷವಾಗಿ ಕೊಲೆಗೀಡಾದ ನಿರ್ಭಯಾ ಮತ್ತು ಆಕೆಯ ತಾಯಿ ಚೆಂದವನ್ನು ವರ್ಣಿಸಿ...

ಬೆಂಗಳೂರು: ದೆಹಲಿಯಲ್ಲಿ ಕಾಮುಕರಿಂದ ಭೀಕರವಾಗಿ ಅತ್ಯಾಚಾರಕ್ಕೀಡಾಗಿ, ಅಮಾನುಷವಾಗಿ ಕೊಲೆಗೀಡಾದ ನಿರ್ಭಯಾ ಮತ್ತು ಆಕೆಯ ತಾಯಿ ಚೆಂದವನ್ನು ವರ್ಣಿಸಿ ನಿವೃತ್ತ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ವಿವಾದಕ್ಕೀಡಾಗಿದ್ದಾರೆ. 
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದ ಮಹಿಳಾ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ನಿರ್ಭಯಾ ತಾಯಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಾಂಗ್ಲಿಯಾನ ಅವರು ನಿರ್ಭಯಾ ತಾಯಿ ಇಲ್ಲಿಗೆ ಬಂದಿದ್ದು. ನಮ್ಮ ಜತೆ ಮಾತನಾಡಿದ್ದು ತುಂಬಾ ಸಂತಸ ತಂದಿದೆ.  ನಿರ್ಭಯ ತಾಯಿ ಇಷ್ಟು ಚೆನ್ನಾಗಿದ್ದರೆ, ಇನ್ನು ನಿರ್ಭಯಾ ಇನ್ನೆಷ್ಟು ಚೆಂದ ಇರಬೇಕು ಎಂದು ಹೇಳಿದ್ದಾರೆ. 
ಇದೇ ವೇಳೆ ಯಾರಾದರೂ ದೌರ್ಜನ್ಯ ಮಾಡಲ ಬಂದರೆ ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರೆ. ಸುಮ್ಮನೆ ಅವರಿಗೆ ಶರಣಾಗುವುದು ಒಳ್ಳೆಯದ್ದು ಆಗ ಕೊಲೆಯಾಗುವುದನ್ನಾದರೂ ತಪ್ಪಿಸಬಹುದು ಎಂದು ಹೇಳಿದ್ದರು. 
ತಮ್ಮ ಹೇಳಿಕೆಯನ್ನು ಸಮರ್ಥಿಕೊಂಡಿರುವ ಸಾಂಗ್ಲಿಯಾನ ಯಾವುದೇ ಕೆಟ್ಟ ಉದ್ದೇಶದಿಂದ ಈ ರೀತಿ ಹೇಳಲಿಲ್ಲ. ಯಾರಾದರೂ ನನ್ನ ಹತ್ತಿರ ಬಂದು ನೀವು ಎಷ್ಟು ಚೆನ್ನಾಗಿದ್ದೀರಾ. ಇನ್ನು 40 ವರ್ಷದ ವ್ಯಕ್ತಿಯಂತೆ ಕಾಣಿಸುತ್ತೀರಾ ಎಂದು ಹೇಳಿದರೆ ನನಗೆ ಸಂತೋಷವಾಗತ್ತದೆ. ಅದೇ ಅರ್ಥದಲ್ಲಿ ನಾನು ಅವರಿಗೂ ಹೇಳಿದ್ದು ಒಬ್ಬ ವ್ಯಕ್ತಿಯ ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ