ರಾಜ್ಯ

ಬೆಸ್ಕಾಂ ಅದಕ್ಷತೆ ವಿರುದ್ಧ ಗ್ರಾಹಕರ ಆಕ್ರೋಶ

Nagaraja AB

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ, ಮತ್ತಿತರ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲು ಬೆಸ್ಕಾಂ ಮಿತ್ರಾ ಆಪ್ ಮೂಲಕ ದೂರು ದಾಖಲಿಸಬಹುದು. ಆದರೆ, ಕಳೆದ ಮೂರು ದಿನಗಳಿಂದ ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ದೂರಿನ ಯಂತ್ರದ ಅದಕ್ಷತೆ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಂಗೇರಿ ನಿವಾಸಿ ಅಭಿಷೇಕ್, ಮೊನ್ನೆ ದಿನ ಬೆಸ್ಕಾಂ ಮಿತ್ರಾಗೆ ದೂರು ದಾಖಲಿಸಿದ್ದಾರೆ. 30 ನಿಮಿಷದ ನಂತರ ಕರೆ ಮಾಡಿದ ವ್ಯಕ್ತಿಯೊಬ್ಬ ವಿದ್ಯುತ್ ಕಡಿತವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಭಿಷೇಕ್  ಇಲ್ಲ ಎಂದಿದ್ದಾರೆ ತಕ್ಷಣ ಕರೆ ಸ್ಥಗಿತಗೊಂಡಿದ್ದೆ. ನಂತರ ಕೆಲವೇ ನಿಮಿಷಗಳಲ್ಲಿ ಈ ನಿಮ್ಮ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂಬಂತಹ ಸಂದೇಶ ಬಂದಿರುವುದಾಗಿ ತಿಳಿಸಿದ್ದಾರೆ.

ಮತ್ತೊಬ್ಬರು ಪ್ರತಿಕ್ರಿಯಿಸಿ ಸಹಾಯವಾಣಿ 1912 ಗ್ರಾಹಕರ ದೂರುಗಳಿಗೆ ಪ್ರತಿಕ್ರಿಯಿಸುತ್ತದೆ. ಆದರೆ. ಪ್ರಸ್ತುತ  ಅದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಹಾಯವಾಣಿ, ಎಸ್ ಎಂಎಸ್, ಆಪ್ ಸೌಕರ್ಯಗಳು ರಾಜ್ಯದಾದ್ಯಂತ ವಿದ್ದರೂ ಕೆಳಮಟ್ಟದ ಅಧಿಕಾರಿಗಳಿಂದ ತಪ್ಪುಗಳಾಗುತ್ತಿವೆ ಎಂದು ಬೆಸ್ಕಾಂ ಹೇಳುತ್ತದೆ.

 ವಿದ್ಯುತ್ ಕಡಿತಕ್ಕೆ ಕೆಲ ನಿಬಂಧನೆಗಳಿದ್ದು, 10 ನಿಮಿಷಕ್ಕಿಂತಲೂ ಹೆಚ್ಚಿಗೆ ಕಡಿತ ಮಾಡಿದ್ದರೆ ಸಿಬ್ಬಂದಿಗಳು ತಿಳಿಸಬೇಕಾಗುತ್ತದೆ. ಒಂದು ವೇಳೆ ಇದಕ್ಕಿಂತಲೂ ಹೆಚ್ಚಿನ ಕಾಲ ವಿದ್ಯುತ್ ಕಡಿತಗೊಂಡರೆ ನಾಗರಿಕರು ವಿದ್ಯುತ್ ಪೂರೈಕೆಯಾಗದಿರುವ ಬಗ್ಗೆ ಮಾಹಿತಿ ನೀಡಬಹುದು ಎಂದು ಬೆಸ್ಕಾಂ ವ್ಯವಸ್ಖಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಹೇಳುತ್ತಾರೆ,

ಸಹಾಯವಾಣಿ ದಕ್ಷತೆಯಿದ ಕಾರ್ಯನಿರ್ವಹಿಸುವಂತೆ ಆದೇಶ ನೀಡಲಾಗುವುದು, ಮಿತ್ರಾ ಆಪ್ ನಲ್ಲಿನ ದೂರು ದಾಖಲು ವಿಧಾನದಲ್ಲೂ ಕೆಲ ಬದಲಾವಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ, ಕ್ಷೇತ್ರ ಸೇವೆಯಲ್ಲಿ ವಾಹನ ಕಂಡುಹಿಡಿಯಲು ಬೆಸ್ಕಾಂನಲ್ಲಿ ಜೆಪಿಎಸ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಇದರಿಂದ ಗ್ರಾಹಕರು ವಾಹನ ಏಲ್ಲಿ ಇದೆ  ಎಂಬುದನ್ನು ಕಂಡುಹಿಡಿದು ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ರಾಜೇಂದ್ರ ಚೋಳನ್ ತಿಳಿಸಿದ್ದಾರೆ.

SCROLL FOR NEXT