ರಾಜ್ಯ

ಸಮುದ್ರದಡಿಯಲ್ಲಿ ಮುಳುಗಿ ಗುರುತಿನ ಚೀಟಿ ಪಡೆದ ಯುವ ಮತದಾರರು

Nagaraja AB

ಕಾರವಾರ:  2000 ಜನವರಿ 1 ರಂದು ಜನಿಸಿದ ಮಿಲೆನ್ನಿಯಮ್  ಯುವ ಮತದಾರರಿಗೆ ಮತದಾನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದಿಂದ   ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

 ಉತ್ತರ ಕನ್ನಡ ಜಿಲ್ಲೆಯ 13 ಮಿಲೆನ್ನಿಯಮ್ ಮತದಾರರಲ್ಲಿ ನಾಲ್ವರು ಮತದಾರರಿಗೆ  ಅರಬ್ಬೀ ಸಮುದ್ರದಡಿಯಲ್ಲಿ ಸ್ಕೂಬ್ ಡೈವಿಂಗ್ ಮೂಲಕ ಜಿಲ್ಲಾಧಿಕಾರಿಗಳು  ಗುರುತಿನ ಚೀಟಿ ವಿತರಿಸಿದರು.

ಜಿಲ್ಲಾಧಿಕಾರಿ ಎಸ್ .ಎಸ್. ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ್ ನಾಯಕ್, ನೀರಿನೊಳಗೆ ಜಿಗಿದು ಗುರುತಿನ ಟೀಟಿ ನೀಡಿದರು. ಅಲ್ಲದೇ, ಗುರುತಿನ ಚೀಟಿಯ ಮಹತ್ವ ಕುರಿತು ಅರಿವು ಮೂಡಿಸಿದರು.

 ಮಿಲಿಯೆನ್ನಿಮ್  ಮತದಾರರಾದ ಅಕ್ಷಯ್ ವಿಲಾಸ್ ಗೋವೆಕರ್, ಪೂನಾಮ್ ರವಿ, ಗಜನಿಕರ್, ದೀಕ್ಷಾ ಮುಕುಂದ್ ಮಡಿವಾಳ ಮತ್ತು  ಐಶ್ವರ್ಯ ಅವರು ಸಹ ಸ್ಕೂಬಾ ಡೈವಿಂಗ್ ಮೂಲಕ ಗುರುತಿನ ಚೀಟಿ ಪಡೆದುಕೊಂಡರು.

 ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಮತದಾನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಭಾರತೀಯ ಚುನಾವಣಾ ಆಯೋಗದಿಂದ ಈ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿಸಿದರು.



SCROLL FOR NEXT