ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು: ಮಗಳಿಗೆ ಗಂಡು ಸಿಕ್ಕಿಲ್ಲ ಎಂದು ಮನನೊಂದ ತಾಯಿ-ಮಗಳು ಆತ್ಮಹತ್ಯೆ

ಮಗಳಿಗೆ ತಕ್ಕ ವರ ಸಿಕ್ಕಿ ವಿವಾಹವಾಗಿಲ್ಲ ಎಂದು ಮನನೊಂದ ತಾಯಿ ತನ್ನ ಮಗಳೊಡನೆ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.

ಬೆಂಗಳೂರು: ಮಗಳಿಗೆ ಗಂಡು ಸಿಕ್ಕಿಲ್ಲ ಎಂದು ಮನನೊಂದ ತಾಯಿ – ಮಗಳು ಆತ್ಮಹತ್ಯೆ
Raghavendra Adiga
Updated On : 20 Mar 2018, 12:27 pm
ಬೆಂಗಳೂರು: ಮಗಳಿಗೆ ತಕ್ಕ ವರ ಸಿಕ್ಕಿ ವಿವಾಹವಾಗಿಲ್ಲ ಎಂದು ಮನನೊಂದ ತಾಯಿ ತನ್ನ ಮಗಳೊಡನೆ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ. ನಡೆದಿದೆ. 
ಸಾವಿತ್ರಮ್ಮ (61) ಜುಳಾ (37) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಮೂರು ದಿನಗಳ ಹಿಂದೆಯೇ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು ಅಮ್ಮ, ಮಗಳು ಮನೆಯ ಹೊರಗೆ ಕಾಣಿಸಿಕೊಂಡಿರದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದ ನಂತರ ಘಟನೆ ಬೆಳಕಿಗೆ ಬಂದಿದೆ.
ಮೃತರು ತಮಗೆ ಸೇರಿದ್ದ ನಾಲ್ಕು ಅಂಗಡಿಗಳ ಬಾಡಿಗೆ ಆದಾಯದಲ್ಲಿ ಜೀವಿಸುತ್ತಿದ್ದರು. ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ  ಸಾವಿತ್ರಮ್ಮನ ಮಗ ತನ್ನ ಸಂಸಾರದೊಡನೆ ಕೆಂಗೇರಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ.

Advertisement

Advertisement

"ಸಾವಿತ್ರಮ್ಮ ತನ್ನ ಮಗಳಿಗೆ ವಿವಾಹವಾಗಿಲ್ಲ ಎಂದು ಬೇಸರದಿಂದಿದ್ದರು. ಈ ಸಂಬಂಧ ಅವರು ಪಕ್ಕದ ಮನೆಯವರೊಡನೆಯೂ ವಿಷಾದ ವ್ಯಕ್ತಪಡಿಸಿದ್ದರು. ಇದೇ ಕಾರಣದಿಂಡ ಬೇಸತ್ತು  ತಾಯಿ, ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.  ಮೃತರು ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement