ರಾಜ್ಯ

ಬೆಂಗಳೂರು: ಫ್ಲಾಟ್ ನಿಂದ ಅಪಹರಣಗೊಂಡಿದ್ದ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ,

Raghavendra Adiga
ಬೆಂಗಳೂರು: ತನ್ನ ಅಪಾರ್ಟ್ ಮೆಂಟ್ ಸಮೀಪ ನಿಂತಿದ್ದ ಉದ್ಯೋಗಸ್ಥ ಮಹಿಳೆಯೊಬ್ಬರನ್ನು ಅಪರಿಚಿತ ಗ್ಯಾಂಗ್ ಒಂದು ಅಪಹರಿಸಿದ ಘಟನೆ ಬೆಂಗಳೂರಿನ ಬೆಳ್ಳಂದೂರು ಸಮೀಪದ ಕಸವನಹಳ್ಳಿಯಲ್ಲಿ ನಡೆದಿದೆ.
ಹೀಗೆ ಅಪಹರಣಗೊಂಡಿದ್ದ ಮಹಿಳೆ ಸೋಮವಾರ ಬೆಳಿಗ್ಗೆ ಒಂದು ಖಾಲಿ ಸ್ಥಳದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೊಂದು ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಶಂಕೆ ವ್ಯಕ್ತಪಡಿಸಿರುವ ಪೋಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ. ಘಟನೆ ಸಂಬಂಧ ಸಂತ್ರಸ್ತೆಯು ಇದುವರೆಗೆ ಯಾವ ಹೇಳಿಕೆಗಳನ್ನು ನೀಡಿಲ್ಲ.
ಸಂತ್ರಸ್ತೆಯು ಖಾಸಗಿ ಶಾಲೆಯೊಂಡರ ಶಿಕ್ಷಕಿಯಾಗಿದ್ದಾರೆ. ಆಕೆಯ ಮೈಮೇಲೆ ಅನೇಕ ಗಾಯಗಳಾಗಿದ್ದು ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಗುಣಮುಖಳಾದ ಬಳಿಕ ಇದೀಗ ಅವರು ಮನೆಗೆ ಹಿಂತಿರುಗಿದ್ದು ಪ್ರತ್ಯಕ್ಷದರ್ಶಿ ನೀಡಿದ ದುಷ್ಕರ್ಮಿಗಳು ಬಳಸಿದ್ದ ಕಾರ್ ನ ನೊಂದಣಿ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ರಾತ್ರಿ 9.15ರ ಸುಮಾರಿಗೆ ಶಿಕ್ಷಕಿ ತಾವು ವಾಸವಿದ್ದ ಅಪಾರ್ಟ್‌ಮೆಂಟ್ ಹೊರಗೆ ವಾಕ್ ಮಾಡುತ್ತಿದ್ದಾಗ ಬಿಳಿ ಇಂಡಿಕಾ ಕಾರ್ ನಲ್ಲಿ ಬಂದ ದುಷ್ಕರ್ಮಿಗಳು ಆಕೆಯನ್ನು ಅಡ್ಡಗಟ್ಟಿ ಅಪಹರಣ ಮಾಡಿದ್ದರು. ಇದನ್ನು ಕಂಡ ಇಬ್ಬರು ಸ್ಥಳೀಯರು ಪೋಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಬೆಳಿಗ್ಗೆ 4.30 ರ  ವೇಳೆಗೆ ಕ್ಯಾಬ್ ಚಾಲಕ ಚಂದ್ರೇಗೌಡ ಎನ್ನುವವರು ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
"ಮನೆಯಿಂದ ಹೊರ ಹೋಗುವ ಮುನ್ನ ಚಿಕ್ಕ ವಿಚಾರಕ್ಕಾಗಿ ಆಕೆ ತನ್ನೊಂದಿಗೆ ಜಗಳವಾಡಿದ್ದಳು. ಎಂದು ಸಂತ್ರಸ್ತೆಯ ತಾಯಿ ಪೋಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದು ಅವರು ಇದೊಂದು ಅಪಹರಣ ಪರಕರಣ ಎಂದು ಒಪ್ಪಿಕೊಂಡಿಲ್ಲ. ಮಗಳು ತಾನೇ ಮನೆಗೆ ಹಿಂತಿರುಗಿದ್ದಾಳೆ. ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಸಂತ್ರಸ್ತೆ ಸಹ ಘಟನೆ ಕುರಿತಂತೆ ಯಾವ ವಿವರ ನೀಡಲು ನಿರಾಕರಿಸಿದ್ದಾರೆ. ಪ್ರತ್ಯಕ್ಷದರ್ಶಿ ಮತ್ತು ಸಿ.ಸಿ.ಟಿ.ವಿ ದೃಶ್ಯ ಆಧರಿಸಿ, ಅಪಹರಣ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮತ್ತಷ್ಟು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT