ಬೆಂಗಳೂರು: ಗೋಡೌನ್ ನಲ್ಲಿ ಬೆಂಕಿ ಅವಘಡ, ಅಂಗಡಿ ಮಾಲೀಕ ಸಾವು
ಬೆಂಗಳೂರು: ಗೋಡೌನ್ ನಲ್ಲಿ ಬೆಂಕಿ ಅವಘಡ ಸಂಬವಿಸಿದ ಹಿನ್ನೆಲೆಯಲ್ಲಿ 24 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ದುರಂತ ಘಟನೆ ಬೆಂಗಳೂರಿನ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ನಲ್ಲಿ ಸಂಬವಿಸಿದೆ.
ಮೃತರನ್ನು ಕಲೀಮ್ ಪಾಶಾ ಎಂದು ಗುರುತಿಸಲಾಗಿದ್ದು ಅಕ್ಕ ಪಕ್ಕದ ನಿವಾಸಿಗಳು ತಕ್ಷಣ ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ ಯಶಸ್ವಿಯಾಗಲಿಲ್ಲ. ಮೊಬೈಲ್ ಬಿಡಿ ಭಾಗಗಳ ಅಂಗಡಿಯನ್ನು ನಡೆಸುತ್ತಿದ್ದ ಪಾಶಾ ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ತಮ್ಮ ಹೆತ್ತವರೊಡನೆ ವಾಸಿಸಿದ್ದರು.
ಕಲೀಮ್ ಮನೆಯ ಪಕ್ಕದಲ್ಲಿಯೇ ಮೊಹಮ್ಮದ್ ಕದೀರ್ ಬಾಷಾ ಅವರ ಗೋಡೌನ್ ಒಂದರಲ್ಲಿ ಬಟ್ಟೆಗಳನ್ನು ಸಂಗ್ರಹಿಸಿಡಲಾಗಿತ್ತು. ಅಗ್ನಿ ವಘಡ ಸಂಭವಿಸಿದಾಗ ಬೆಂಕಿ ಹೆಚ್ಚು ವ್ಯಾಪಕವಾಗಿ ಹರಡಲು ಈ ಬಟ್ಟೆ ಸಂಗ್ರಹವೂ ಕಾರನವಾಗಿತ್ತು. ಮಧ್ಯಾಹ್ನ 1.15 ಕ್ಕೆ ಘಟನೆ ಸಂಬವಿಸಿದೆ. ಆ ವೇಳೆ ಕಲೀಮ್ ತನ್ನ ಕೋಣೆಯಲ್ಲಿ ಮಲಗಿದ್ದರು. ಬೆಂಕಿ ಹೊತ್ತಿ ದಟ್ಟ ಹೊಗೆ ಕೋಣೆಯನ್ನಾವರಿಸಿದ ಕಾರಣ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂಡು ಹಿರಿಯ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಕೆಲಸಮಯದ ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲೇ ಕಲೀಮ್ ಸಾವನ್ನಪ್ಪಿದ್ದರು. ಬೆಂಕಿ ಅವಘಡಕ್ಕೆ ಸರಿಯಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ ಕೆಲ ಸ್ಥಳೀಯರು ಹೇಳುವಂತೆ ಗೋಡೌನ್ ಮುಂದೆ ಕೆಲವರು ಯಾವಾಗಲೂ ಸಿಗರೇಟ್ ಸೇದುತ್ತಿರುತ್ತಾರೆ. ಸಿಗರೇಟ್ ನ ತುಂಡಿನಲ್ಲಿದ್ದ ಬೆಂಕಿ ಕಿಡಿಯಿಂದಾಗಿ ಬೆಂಕಿ ಹೊತ್ತಿದೆ ಎಂದಿದ್ದಾರೆ. ಇದೇ ವೇಳೆ ಗೋಡೌನ್ ಮಾಲೀಕ ಪರಾರಿಯಾಗಿದ್ದು ಪೋಲೀಸರು ಅವನ ಪತ್ತೆಗೆ ಬಲೆ ಬೀಸಿದ್ದಾರೆ.
"ನಾನು ತನ್ನ ಮನೆಯ ಟೆರೇಸ್ ನಲ್ಲಿದ್ದಾಗ ಪಕದ ಬೀದಿಯಲ್ಲಿ ಅಂಗಡಿಗೆ ಬೆಂಕಿ ಹತ್ತಿದ್ದು ಕಾಣಿಸಿದೆ. ನಾನು ತಕ್ಷಣ ಬೆಂಕಿ ಅನಾಹುತದ ಎಚ್ಚರಿಕೆ ನೀಡಿದೆ. ಕೆಲವರು ಅತ್ತ ಧಾವಿಸಿದ್ದರು. ಗೋಡೌನ್ ಮಾಲೀಕರು ಬೆಂಕಿಗೆ ಕಾರಣವಾಗಬಹುದಾದ ಕೆಲ ರಾಸಾಯನಿಕಗಳನ್ನು ಸಂಗ್ರಹಿಸಿದ್ದರು." ಎಂದು ಪ್ರತ್ಯಕ್ಷ ದರ್ಶಿ ಆತೋ ಚಾಲಕ ವೆಂಕತೇಶ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
"ಘಟನೆ ನಡೆಯುವ ಸ್ವಲ್ಪ ಮುನ್ನ ಕಲೀಮ್ ತಲೆನೋವು ಎಂದು ಕೋಣೆಯಲ್ಲಿ ಮಲಗಿದ್ದ. ನಾನು ಅಂಗಡಿ ನೋಡಿಕೊಲ್ಳುತ್ತಿದ್ದೆ. ನನ್ನ ಹಿರಿಯ ಮಗ ಬೈಕ್ ರಿಪೇರಿ ಕೆಲಸಕ್ಕೆ ತೆರಳಿದ್ದ, ಪತಿ ವ್ಯಾಪಾರಕ್ಕಾಗಿ ಹೋಗಿದ್ದರು. ಪುತ್ರಿಯರಿಬ್ಬರೂ ಶಾಲೆಗೆ ಹೋಗಿದ್ದರು. ನಾನು ಬೆಂಕಿ ಕಾಣಿಸಿಕೊಳ್ಳುತ್ತಲೇ ಅನಾಹುತವಾಗಿದೆ ಎಂದು ಕಿರುಚಿದೆ. ಆದರೆ ಬೆಂಕಿ ದೊಡ್ಡ ಪ್ರಮಾಣದಲ್ಲಿದ್ದ ಕಾರಣ ಯಾರೂ ಕೋಣೆಗೆ ತೆರಳಿ ಅವನನ್ನು ಎಬ್ಬಿಸಲಾಗಲಿಲ್ಲ. ಆತ ನಿಶ್ಚಲನಾಗಿ ಬಿದ್ದಿದ್ದ. ಅವನನ್ನು ಸ್ಥಳೀಯಆಸ್ಪತ್ರೆಗೆ ಕರೆದೊಯ್ದಾಗ ಅವನಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು" ಕಲೀಮ್ ತಾಯಿ ಶಕೀಲಾ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos