ಸಾಂದರ್ಭಿಕ ಚಿತ್ರ 
ರಾಜ್ಯ

ಕ್ಷಯರೋಗಿಗಳ ಮಾಹಿತಿ ನೀಡಿ ಇಲ್ಲವೇ ಜೈಲು ಶಿಕ್ಷೆ ಅನುಭವಿಸಿ: ಔಷಧ ವ್ಯಾಪಾರಿಗಳಿಗೆ ಸರ್ಕಾರ ಎಚ್ಚರಿಕೆ

ಟಿಬಿ ನಿರೋಧಕ ಔಷಧಿಗಳನ್ನು ಕೇಳಿಕೊಂಡು ತಮ್ಮಲ್ಲಿಗೆ ಬರುವ ಕ್ಷಯರೋಗಿಗಳ ಕುರಿತಂತೆ ಸರ್ಕಾರಕ್ಕೆ ಮಾಹಿತಿ ನೀಡಲು ವಿಫಲವಾದ ಔಷಧ ವ್ಯಾಪಾರಿಗಳು ಆರು ತಿಂಗಳಿನಿಂದ ಎರಡು ವರ್ಷಗಳ..........

ಬೆಂಗಳೂರು: ಟಿಬಿ ನಿರೋಧಕ ಔಷಧಿಗಳನ್ನು ಕೇಳಿಕೊಂಡು ತಮ್ಮಲ್ಲಿಗೆ ಬರುವ ಕ್ಷಯರೋಗಿಗಳ ಕುರಿತಂತೆ ಸರ್ಕಾರಕ್ಕೆ ಮಾಹಿತಿ ನೀಡಲು ವಿಫಲವಾದ ಔಷಧ ವ್ಯಾಪಾರಿಗಳು ಆರು ತಿಂಗಳಿನಿಂದ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕ್ಷಯರೋಗಿಗಳ  ಬಗೆಗೆ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಲು ವಿಫಲರಾದ ಔಷದಿ ವ್ಯಾಪಾರಿಗಲು, ಔಷದಿ ತಯಾರಕರು ಮತ್ತು ಕ್ಷಯರೋಗ ಪೀಡಿತರನ್ನು ಪತ್ತೆ ಹಚ್ಚಿ ಸರಿಯಾದ ಸಾರ್ವಜನಿಕ ಆರೋಗ್ಯ ಕ್ರಮ ತೆಗೆದುಕೊಳ್ಳಲು ವಿಫಲರಾದ ಸಾರ್ವಜನಿಕ ಆರೋಗ್ಯ ಸಿಬ್ಬಂದಿಗಳು ಶಿಕ್ಷೆಗೆ ಗುರಿಯಾಗಬೇಕಾಗುವುದು ಎಂದು ಸಚಿವಾಲಯ ಹೇಳಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 69 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕು ಹರಡುವ ಸಾಧ್ಯತೆಗಳು) ಮತ್ತು 270 (ಜೀವಕ್ಕೆ ಅಪಾಯಕಾರಿ ರೋಗದ ಸೋಂಕು ಹರಡುವ ಸಾಧ್ಯತೆ) ಉಲ್ಲೇಖಿಸಿ ಸಚಿವಾಲಯ ಈ ಆದೇಶ ನಿಡಿದೆ.
ಮೇ 7, 2012 ರಂದು.ಭಾರತವು ಕ್ಷಯರೋಗವು ಒಂದು ಗಮನಾರ್ಹವಾದ ರೋಗವೆಂದು ಘೊಷಿಸಿದ್ದು ವೈದ್ಯಕೀಯ ಪ್ರಯೋಗಾಲಯಗಳು,, ವೈದ್ಯರು ಆಸ್ಪತ್ರೆಗಳು ಮತ್ತು ಶುಶ್ರೂಷಾ ಕೇಂದ್ರಗಳು ಕ್ಷಯರೋಗ ನಿರೋಧಕ ಔಷಧಿಗಳನ್ನು ವಿತರಿಸಬೇಕು. ಔಷಧಗಳ ವಿವರಗಳೊಂದಿಗೆ ಆಯಾ ಕ್ಷಯರೋಗಿಗಳ ಕುರಿತಂತೆ ನೋಡಲ್ ಅಧಿಕಾರಿಗಳಿಗೆ ಂಆಹಿತಿ ನಿಡಬೇಕು. ವೈದ್ಯರು ರೋಗಿಗಳ ಮಾಹಿತಿಯನ್ನು ವಿದ್ಯುನ್ಮಾನ ಮಾದ್ಯಮ ಅಥವಾ ಕಡತದ ರೂಪದಲ್ಲಿ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ನೀಡುವುದು ಕಡ್ಡಾಯವೆಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT