ಕರ್ನಾಟಕ: ಮಕ್ಕಳ ಆರೋಗ್ಯಕರ ಬೆಳವಣಿಗೆಗಾಗಿ ಪೌಷ್ಟಿಕ ಆಹಾರ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಚಿಂತನೆ
ಬೆಂಗಳೂರು: ಮಕ್ಕಳನ್ನು ಹೆಚ್ಚು ಆರೋಗ್ಯವಂತರನ್ನಾಗಿ, ಶಕ್ತಿಶಾಲಿಗಳನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯ ಆರೋಗ್ಯ ಇಲಾಖೆ ಐದು ಹೊಸ ಆಹಾರೋತ್ಪನ್ನಗಳನ್ನು ಬಿಡುಗಡೆಗೊಳಿಸಲು ಯೋಜಿಸಿದೆ. ಈ ಉತ್ಪನ್ನಗಳನ್ನು ಶಾಲಾ ಮಕ್ಕಳಿಗೆ ಕಡ್ಡಾಯವಾಗಿ ವಿತರಿಸಲಾಗುತ್ತದೆ. ಹಾಲು, ಉಪ್ಪು, ಎಣ್ಣೆ, ಅಕ್ಕಿ ಹಾಗೂ ಗೋಧಿಯನ್ನು ಬಳಸಿ ಆಹಾರೋತ್ಪನ್ನ ತಯಾರಿಕೆಗೆ ಇಲಾಖೆ ಚಿಂತನೆ ನಡೆಇಸಿದೆ.
ಈ ಯೋಜನೆ ಅನುಷ್ಥಾನಗೊಂಡಲ್ಲಿ ಕರ್ನಾಟಕವು ಪೌಷ್ಟಿಕ ಆಹಾರಗಳನ್ನು ಕಡ್ಡಾಯಗೊಳಿಸಿದ ದೇಶದ ಎರಡನೇ ರಾಜ್ಯ ಎನಿಸಿಕೊಳ್ಳಲಿದೆ. ಇದೇ ಯೋಜನೆ ಸದ್ಯ ರಾಜಸ್ಥಾನದಲ್ಲಿ ಜಾರಿಯಲ್ಲಿದೆ.
ಪೌಷ್ಟಿಕ ಆಹಾರಗಳನ್ನು ಪರಿಚಯಿಸುವುದು, ಯಾವೆಲ್ಲಾ ಪೌಷ್ಟಿಕಾಂಶಗಳುಳ್ಳ ಆಹಾರವನ್ನು ಸೇರ್ಪಡೆಗೊಳಿಸಬೇಕೆನ್ನುವುದನ್ನು ಚರ್ಚಿಸುವ ಸಲುವಾಗಿ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಸಭೆ ನಡೆಸಿದರು ಅಲ್ಲದೆ ಶುಕ್ರವಾರ ಇನ್ನೊಂದು ಸುತ್ತು ಸಭೆ ಆಯೋಜನೆಯಾಗಿದ್ದು ಸದ್ಯ ಐದು ಆಹಾರೋತ್ಪನ್ನಗಳನ್ನು ಗುರುತಿಸಲಾಗಿದೆ. ಪ್ರತಿದಿನವೂ ಮಕ್ಕಳು ಹಾಗೂ ವಯಸ್ಕರು ಈ ಆಹಾರವನ್ನು ಸೇವಿಸಬೇಕು. ಯೋಜನೆಯ ಭಾಗವಾಗಿ ಆಹಾರೋತ್ಪನ್ನ ತಯಾರಕರು ಈ ಆಹಾರಗಳಿಗೆ ಅಗತ್ಯವಾಗಿ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶ ಸೇರ್ಪಡೆ ಮಾಡಿಕೊಳ್ಳಬೇಕು. ಎಂದು ಹೇಳಲಾಗಿದೆ.
ರಾಜ್ಯದ ನಾನಾ ಕಡೆಗಳಲ್ಲಿ ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ವಿಟಮಿನ್ ಎ ಕೊರತೆಯಿಂದಾಗಿ, ಮಕ್ಕಳು ದೃಷ್ಟಿದೋಷ ಸಮಸ್ಯೆ ಎದುರಿಸುತ್ತಾರೆ. ಡಿ ಜೀವಸತ್ವದ ಕೊರತೆಯಿಂದ ಮಕ್ಕಳಲ್ಲಿ ಮೂಳೆ ಬೆಳವಣಿಗೆ ಕುಂಠಿತವಾಗುತ್ತದೆ. ಭವಿಷ್ಯದಲ್ಲಿ ಬಲಯುತವಾದ ಪೀಳಿಗೆಯನ್ನು ಸೃಷ್ಟಿಸಲು ನಾವು ಮಕ್ಕಳಿಗೆ ಹೆಚ್ಚು ಪೌಷ್ಟಿಕ ಆಹಾರ ದೊರಕಿಸುವುದು ಮುಖ್ಯ ಎಂದು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದರು.
"ನಾವು ರಾಜ್ಯದಲ್ಲಿ ಅತಿ ಶೀಘ್ರವಾಗಿ ಈ ಯೋಜನೆ ಪ್ರಾರಂಭಿಸಲಿದ್ದೇವೆ. ರಾಜಸ್ಥಾನದ ಬಳಿಕ ದೇಶದಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಕಡ್ಡಾಯಗೊಳಿಸುತ್ತಿರುವ ರಾಜ್ಯ ನಮ್ಮದಾಗಲಿದೆ. ಒಮ್ಮೆ ಯೋಜನೆ ಜಾರಿಯಾದ ಬಳಿಕ ಉತ್ಪಾದಕರು, ಮಾರಾಟಗಾರರು ಈ ಆಹಾರೋತ್ಪನ್ನಗಳ ವಹಿವಾಟು ನಡೆಸಬೇಕಾಗುವುದು. ಜನರು ಹೆಚ್ಚುವರಿ ಪೌಷ್ಟಿಕಾಂಶಗಳು ತಾವು ಖರೀದಿಸುವ ಆಹಾರದಲ್ಲಿದೆಯೆ ಎನ್ನುವುದನ್ನು ಕಡ್ಡಾಯವಾಗಿ ಪರೀಕ್ಷಿಸಿಕೊಳ್ಳಬೇಕು. ಆ ನಂತರವೇ ಆಹಾರೋತ್ಪನ್ನ ಖರೀದಿಸಬೇಕು ಎಂದು ಆಹಾರ ಸುರಕ್ಷತಾ ವಿಭಾಗದ ಜಂಟಿ ನಿರ್ದೇಶಕರಾದ ಬಿ. ಹರ್ಷವರ್ಧನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಮಾದ್ಯಮಗಳನ್ನು ಬಳಸಿಕೊಂಡು ನಾವು ಜನರಲ್ಲಿ ಪೌಷ್ಟಿಕಾಂಶಯುಕ್ತ ಆಹಾರದ ಬಗೆಗೆ ಅರಿವು ಮೂಡಿಸಲಿದ್ದೇವೆ. ಎಂದು ಇಲಾಖೆಯ ಕಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.
"ಹೆಚ್ಚುವರಿ ಪೋಷಕಾಂಶಗಳನ್ನು ಹೊಂದಿರುವ ಉತ್ಪನ್ನಗಳಿಗೆ ಪ್ರೋತ್ಸಾಹ, ಉತ್ತಮ ಬೆಂಬಲ ಬೆಲೆ ನೀಡಲು ನಾವು ಕೃಷಿ ಸಚಿವ ಕೃಷ್ಣ ಬೈರೆಗೌಡರನ್ನು ವಿನಂತಿಸಿದ್ದೇವೆ. ಅಂತಹ ಉತ್ಪನ್ನಗಳ ಬೆಳೆಗಾರರನ್ನು ನಾವು ಉತ್ತೇಜಿಸಬೇಕಾಗಿದೆ '' ಎಂದು ಯುಎ ಎಸ್ ನಲ್ಲಿ ಕಾರ್ಯ ನಿರ್ವಹಿಸುವ ಧಿಕಾರಿಅಗಲಾದ ಪ್ರೊಫೆಸರ್ ಎಂ. ಬಿ. ರಾಜೇಗೌಡ ಹೇಳಿದ್ದಾರೆ.