ರಾಜ್ಯ

ಕ್ಲಬ್ ಗೆ ಭೂಮಿ ನೀಡಿಕೆ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಹಕಾರ ನಗರ ರಕ್ಷಣಾ ಕಾಲೋನಿ ನಿವಾಸಿಗಳು

Nagaraja AB

ಬೆಂಗಳೂರು : ನಾಗರಿಕ ವಸತಿ ಪ್ರದೇಶದ ನಿವೇಶನವನ್ನು  ನಿಯಮ ಉಲ್ಲಂಘಿಸಿ ರಾಜ್ಯಸರ್ಕಾರ ಕ್ಲಬ್ ಗೆ ನೀಡಿರುವುದನ್ನು ವಿರೋಧಿಸಿ ಸಹಕಾರ ನಗರ ರಕ್ಷಣಾ ಕಾಲೋನಿ ನಿವಾಸಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಕೆ. ಎಚ್. ಸತ್ಯನಾರಾಯಣ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ಬಿ.ಎಂ. ಶ್ಯಾಮ್ ಪ್ರಸಾದ್ ಅವರನ್ನೊಳಗೊಂಡ ಪೀಠ, ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದ್ದೂಡಿದೆ.

ಕೃಷಿ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷರಾಗಿರುವ ಕ್ಲಬ್ ಗೆ ನಿವೇಶನ ನೀಡಲಾಗಿದೆ ಎಂದು ಒಬ್ಬರ ಅರ್ಜಿಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಅರ್ಜಿಯಲ್ಲಿ ಬಿಡಿಎ , ಬಿಬಿಎಂಪಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಸಚಿವರ ಪ್ರಭಾವದಿಂದಾಗಿ ಕೊತಿ ಹೊಸಹಳ್ಳಿಯಲ್ಲಿನ 3,336 ಚದರ ಅಡಿಯ ನಾಗರಿಕ ವಸತಿ ನಿವೇಶನವನ್ನು ಬಿಡಿಎ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಕ್ಲಬ್ ಗೆ ನೀಡಿದೆ ಎಂದು ಆರೋಪಿಸಲಾಗಿದೆ.



 

SCROLL FOR NEXT