ನಂದಿ ಬೆಟ್ಟ 
ರಾಜ್ಯ

ಬೆಂಗಳೂರು: ನಂದಿ ಬೆಟ್ಟದಿಂದ ಕಾಲು ಜಾರಿ ಬಿದ್ದ ಮಹಿಳೆ ಸಾವು

ನಂದಿ ಬೆಟ್ಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರು/ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಸನದ ಜೆ.ಸುನೀತಾ(54) ದುರ್ದೈವಿ ಮಹಿಳೆಯಾಗಿದು  ಅವರ ಪತಿ, ಹೋಟೆಲ್ ಉದ್ಯೋಗಿ ಎಂ.ಕುಮಾರ್(53) ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಹಾಸದದಿಂದ ಬೆಂಗಳುರಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಈ ದಂಪತಿ ಮಂಗಳವಾರ (ಮೇ 1) ನಂದಿ ಬೆಟ್ಟಕ್ಕೆ ತೆರಳಿದ್ದಾರೆ. 
ಬೆಟ್ಟದ ಹೋಟೆಲ್ ಮಯೂರ ಹಿಂಬಾಗದಲ್ಲಿ ಬಂಡೆಯೊಂದರ ಮೇಲೆ ಕುಳಿತಿದ್ದ ದಂಪತಿ ಸಂಜೆ 6.30ರ ಸುಮಾರು ಹಿಂತಿರುಗಲಿಕ್ಕಾಗಿ ಏಳುವಾಗ ಸುನೀತಾ ಚಪ್ಪಲಿಯೊಂದು ಕೆಳಗೆ ಬಿದ್ದಿದೆ.ಅದನ್ನು ತೆಗೆದುಕೊಳ್ಳಲೆನ್ನುವಂತೆ ಆಕೆ ಬಾಗಿದ್ದಾಗ ಆಧಾರ ತಪ್ಪಿದಂತಾಗಿ ಇಳಿಜಾರಿದ್ದ ಬಂಡೆಯಿಂದ ಉರುಳಿ ಕಂದಕಕ್ಕೆ ಬಿದ್ದಿದ್ದಾರೆ. ಆಕೆಯ ರಕ್ಷಣೆಗೆ ಮುಂದಾದ ಪತಿ ಕುಮಾರ್ ಸಹ ಕಂದಕಕ್ಕೆ ಜಾರಿದ್ದಾರೆ.
ಕುಮಾರ್ ಹತ್ತಿರದ ಬಂಡೆಯೊಂದನ್ನು ಆಧಾರವಾಗಿಟ್ಟುಕೊಂಡು ಬದುಕುಳಿದರೆ ಸುನೀತಾ ಕೆಳಗೆ ಬಿದ್ದು ಕಾಣೆಯಾಗಿದ್ದರು. ರಾತ್ರಿ 10ರ ವೇಳೆಗೆ ಚೇತರಿಸಿಕೊಂಡ್ ಅಕುಮಾರ್ ಮಯೂರ ಹೋಟೆಲ್ ಗೆ ತೆರಳಿ ಘಟನೆ ಕುರಿತು ವಿವರಿಸಿದ್ದಾರೆ. ಆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೋಲೀಸರು  ಕಾರ್ಯಾಚರಣೆ ನಡೆಸಿ ಸುಮಾರು 350 ಅಡಿ ಆಳದಲ್ಲಿ ಮುನೇಶ್ವರ ದೇವಾಲಯ ಸಮೀಪ ಸುನೀತಾ ಅವರ ಶವವನ್ನು ಪತ್ತೆ ಮಾಡಿದ್ದಾರೆ.
ಕುಮಾರ್ ಅವರ ತಲೆ ಹಾಗೂ ಮೂಗಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!