ನನಿಧಿಗಾಗಿ ಪತ್ನಿಯನ್ನು ಬಲಿನೀಡಲು ಮುಂದಾದ ಅರ್ಚಕ ಮಹಲಿಂಗೇಶ್(ಎಡ), ನಿಧಿಗಾಗಿ ಹೋಮಕ್ಕೆ ಸಿದ್ದವಾದ ಹೊಂಡ(ಬಲ) 
ರಾಜ್ಯ

ಬೆಂಗಳೂರು: ನಿಧಿಯಾಸೆಗೆ ಪತ್ನಿಯನ್ನು ಬಲಿ ನೀಡಲು ಮುಂದಾದ ಅರ್ಚಕನ ಬಂಧನ

ನಿಧಿಯ ಆಸೆಗಾಗಿ ತನ್ನ ಪತ್ನಿ ಹಾಗೂ ಮಗಳನ್ನು ಬಲಿ ಕೊಡಲು ತಯಾರಾಗಿದ್ದ ಅರ್ಚಕನೊಬ್ಬನನ್ನು ಬೆಂಗಳೂರು ಬ್ಯಾಡರಹಳ್ಳಿ ಪೋಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಿಧಿಯ ಆಸೆಗಾಗಿ ತನ್ನ ಪತ್ನಿ ಹಾಗೂ ಮಗಳನ್ನು ಬಲಿ ಕೊಡಲು ತಯಾರಾಗಿದ್ದ ಅರ್ಚಕನೊಬ್ಬನನ್ನು ಬೆಂಗಳೂರು ಬ್ಯಾಡರಹಳ್ಳಿ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು  ಜ್ಞಾನ ಭಾರತಿ ಬಳಿಯ ಉಲ್ಳಾಲು ದೇವಾಲಯದಲ್ಲಿ ನಿಧಿ ಇದೆ ಎನ್ನುವ ಆಸೆಯಿಂದ ಮಹಲಿಂಗೇಶ್ ಡಿ (46) ತಾನು 18 ವರ್ಷಗಳ ಹಿಂದೆ ವಿವಾಹವಾಗಿದ್ದ ಸವಿತಾಳನ್ನು ಬಲಿ ನೀಡಲು ಸಿದ್ದವಾಗಿದ್ದ. ಈತನಿಗೆ ಮೂವರು ಮಕ್ಕಳಿದ್ದು ಹಿರಿಯ ಮಗಳು 17 ವರ್ಷದವಳ ಮೇಲೆ ಅತ್ಯಾಚಾರ ಎಸಗಿದ್ದ.
ತಂದೆಯ ಕಿರುಕುಳ ತಾಳಲಾರದೆ ಮಗಳು ಮಹಿಳಾ ಆಯೋಗಕ್ಕೆ ದೂರಿತ್ತಿದ್ದಳು. ದೂರಿನ ಹಿನ್ನೆಲೆಯಲ್ಲಿ ಆಯೋಗದ ಸದಸ್ಯರು ಅರ್ಚಕ ಮಹಲಿಂಗೇಶ್ ಮನೆಗೆ ಧಾವಿಸಿ ಪತ್ನಿ, ಮಕ್ಕಳನ್ನು ರಕ್ಷಿಸಿದ್ದಾರೆ.
ಪತ್ನಿ ಹಾಗೂ ಮಗಳ ಹೇಳಿಕೆ ಆಧಾರದಲ್ಲಿ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಬ್ಯಾಡರಹಳ್ಳಿ ಪೊಲೀಸರು ತಿಳಿಸಿದರು.
ಇದೀಗ ಆರೋಪಿಗೆ ನಿಧಿಯ ಸೂಚನೆ ನೀಡಿದ್ದನೆನ್ನಲಾದ ಜ್ಯೋತಿಷಿ ಮಾರ್ತಾಂಡನ ಹುಡುಕಾಟದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!