ಇಂದಿರಾ ಕ್ಯಾಂಟೀನ್: ಹೆಸರು ಬದಲಾದರೂ ಅದೇ ಸ್ವಾದ ಖಾತ್ರಿ 
ರಾಜ್ಯ

ಇಂದಿರಾ ಕ್ಯಾಂಟೀನ್: ಹೆಸರು ಬದಲಾದರೂ ಅದೇ ಸ್ವಾದ ಖಾತ್ರಿ

ಸಿದ್ದರಾಮಯ್ಯ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮದ ಚಿಹ್ನೆ ಎನ್ನುವಂತೆ ಬಿಂಬಿತವಾಗಿರುವ ಇಂದಿರಾ ಕ್ಯಾಂಟೀನ್ ಆಗಸ್ಟ್ 2017 ರಲ್ಲಿ ಪ್ರಾರಂಭವಾಗಿತ್ತು.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮದ ಚಿಹ್ನೆ ಎನ್ನುವಂತೆ ಬಿಂಬಿತವಾಗಿರುವ ಇಂದಿರಾ ಕ್ಯಾಂಟೀನ್ ಆಗಸ್ಟ್ 2017 ರಲ್ಲಿ ಪ್ರಾರಂಭವಾಗಿತ್ತು. ಬೆಂಗಳೂರಿನ ಎಲ್ಲಾ 197 ವಾರ್ಡ್ ಗಳಲ್ಲಿ ಇಂದು ಕ್ಯಾಂಟೀನ್ ಕಾರ್ಯಾಚರಣೆಯಲ್ಲಿದೆ. ಆದರೆ ಇದೀಗ ರಾಜ್ಯವು ಚುನಾವಣೆಗೆ ಸಿದ್ದವಾಗಿದೆ. ಒಂದೊಮ್ಮೆ ರಾಜ್ಯದಲ್ಲಿ ಬೇರೆ ಪಕ್ಷ, ಸಿದ್ದಾಂತದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಇಂದಿರಾ ಕ್ಯಾಂಟಿನ್ ಇದೇ ರೀತಿ ಮುಂದುವರಿಯಲಿದೆಯೆ ಎನ್ನುವುದರ ಕುರಿತು ಎಕ್ಸ್ ಪ್ರೆಸ್ ಒಂದು ಸಮೀಕ್ಷೆ  ನಡೆಸಿದೆ. ಆ ಸಮೀಕ್ಷೆಯಲ್ಲಿ ನಮಗೆ ತಿಳಿದುಬಂದ ಕೆಲವು ಪ್ರಮುಖಾಂಶಗಳು ಹೀಗಿದೆ.
ಇದರಲ್ಲಿ ಮೊದಲನೆಯದಾಗಿ ಕೇಳಿಬಂದ ವಿಚಾರವೆಂದರೆ ರಾಜ್ಯದಲ್ಲಿ ಒಂದೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಇಂದಿರಾ ಕ್ಯಾಂಟೀನ್ ಗಳ ಹೆಸರನ್ನು ಯಾವುದಾದರೂ  ರಾಷ್ಟ್ರೀಯವಾದಿ ನಾಯಕರ ಹೆಸರಿಗೆ ಬದಲಿಸಬಹುದು. ಐಟಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಧೀರ್ ಹೇಳುವಂತೆ" ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ’ಕಿತ್ತೂರು ರಾಣಿ ಚೆನ್ನಮ್ಮ ಕ್ಯಾಂಟೀನ್’ ಅಥವಾ ಇನ್ನಾವುದೇ ರಾಷ್ಟ್ರೀಯ ನಾಯಕರ ಹೆಸರಿನಲ್ಲಿ ಮರುನಾಮಕರಣ ಮಾಡಬಹುದು."ಇನ್ನೋರ್ವ ಬಿಜೆಪಿ ಬೆಂಬಲಿಗರಾದ ಅರ್ಜುನ್ ರಾವ್ ’ಅಟಲ್ ಬಿಹಾರಿ ವಾಜಪೇಯಿ ಕ್ಯಾಂಟೀನ್’ ಎಂದು ಮರುನಾಮಕರಣ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಬಿಜೆಪಿ ಪರವಾಗಿರುವ ಸಾರ್ವಜನಿಕರಲ್ಲಿ ಕೆಲವರು ಕ್ಯಾಂಟೀನ್ ಇದೇ ಹೆಸರಿನಲ್ಲಿ ಮುಂದುವರಿಯಲಿ ಎಂದಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾದ ತಿಮ್ಮಯ್ಯ ಹೇಳಿದಂತೆ "ಬಿಜೆಪಿ ಅವರು ಗೆದ್ದರೆ ಅವರು ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಬಾರದು. ಅವರು ಹಾಗೆ ಮಾಡಿದರೆ ಅವರಿಗೆ ಕೆಟ್ಟ ಹೆಸರಾಗುತ್ತದೆ"
ಇಂದಿರಾ ಕ್ಯಾಂಟಿನ್ ಗೂಡ್ಸ್ ಟೆಂಪೋ ಚಾಲಕರಾದ ದಯಾನಂದ್ ಮಾತನಾಡಿ "ಇದು ಕಾಂಗ್ರೆಸ್ ಯೋಜನೆಯಾಗಿರುವುದರಿಂದ ಹೆಸರು ಬದಲಾಗುವುದಿಲ್ಲ, ಒಂದೊಮ್ಮೆ ಬೇರೆ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕ್ಯಾಂಟೀನ್ ಗಳಲ್ಲಿ ಇನ್ನಷ್ಟು ಸುಧಾರಣೆ ತರಬಹುದು" ಎನ್ನುತ್ತಾರೆ.
ಕ್ಯಾಬ್ ಚಾಲಕ ಸಮೀರ್, ದಿನಗೂಲಿಯಾಗಿರುವ ಶಾಂತಾ ಸಹ ಇಂದಿರಾ ಕ್ಯಾಂಟೀನ್ ಈಗಿರುವಂತೆಯೇ ಮುಂದುವರಿಯಲಿದೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇದಕ್ಕೇನೂ ತಡೆಯಾಗದು. ಇದೊಂದು ಜನೋಪಯೋಗಿ ಯೋಜನೆ ಎಂದಿದ್ದಾರೆ. ಹಾಗೆಯೇ ಶಾಲಾ ಶಿಕ್ಷಕಿಯಾದ ಅಮೃತಾ ಶೆಟ್ಟಿ ಕಾಂಗ್ರೆಸ್ ಬಹುಮತ ಪಡೆಯಲಿದೆ, ಇಂದಿರಾ ಕ್ಯಾಂಟೀನ್ ಯಾವ ಬದಲಾವಣೆಗಳಿಲ್ಲದೆ ಮುಂದುವರಿಯಲಿದೆ ಎಂದರೆ ಆಟೋ ಚಾಲಕ ಶ್ರೀನಿವಾಸ್, ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಇಂದಿರಾ ಕ್ಯಾಂಟೀನ್ ಎಂದು ಈಗಾಗಲೇ ನೊಂದಣಿಯಾಗಿರುವ ಹೆಸರನ್ನು ಅವರು ಬದಲಿಸುವುದಿಲ್ಲ ಎಂದಿದ್ದಾರೆ.
ಇನ್ನೋರ್ವ ಟೆಂಪೋ ಚಾಲಕ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ, ಆದರೆ ಯಾವ ಪಕ್ಷ  ಬಂದರೂ ಸಹ ಜನಸಾಮಾನ್ಯರಿಗೆ ಹೊರೆಯಾಗದಂತೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಹಾರ ಪೂರೈಸುವುದಕ್ಕಾಗಿ ಈ ಕ್ಯಾಂಟೀನ್ ಮುಂದುವರಿಯಲಿದೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

ರಮೇಶ್ ಜಾರಕಿಹೊಳಿಗೆ ಸ್ಟಿಂಗ್ ಮಾಡಿದ್ದು ಯಾರು? ಒಬ್ಬ CM ಇಂಥಾ ಕೀಳು ಮಟ್ಟಕ್ಕೆ ಇಳಿಯಬಾರದಿತ್ತು: ಛಲವಾದಿ ನಾರಾಯಣಸ್ವಾಮಿ