ಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅವರಿಗೆ ಮತದಾರರ ಪಟ್ಟಿ ಪರಿಷ್ಕರಣೆ ಪಟ್ಟಿಯಲ್ಲಿ ಕ್ರಮ ಸಂಖ್ಯೆ 420 ನಮೂದಾಗಿದ್ದು ಇದೀಗ ಎಲ್ಲೆಡೆ ಟ್ರೋಲ್ ಆಗುತ್ತಿದೆ.
ಮಂಡ್ಯದ 10ನೇ ವಾರ್ಡ್ ನ ಮತದಾರರ ಪಟ್ಟಿಯಲ್ಲಿ ದಿವ್ಯ ಸ್ಪಂದನ ಎಂದು ನಮೂದಾಗಿದೆ. ವಿದ್ಯಾನಗರದ ಪಿಎಲ್ ಡಿ ಬ್ಯಾಂಕ್ ಮತಗಟ್ಟೆಯಲ್ಲಿ ರಮ್ಯಾ ಮತ ಚಲಾವಣೆ ಮಾಡಬೇಕಿದೆ.
ದೆಹಲಿಯಲ್ಲಿ ವಾಸವಾಗಿರುವ ಅವರು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿದ್ಯಾನಗರದ ಬಾಡಿಗೆ ಮನೆಯಲ್ಲಿ ಇದ್ದರು.