ಬೆಂಗಳೂರು; ವಿಳಾಸ ಕೇಳುವ ನೆಪದಲ್ಲಿ ಯುವತಿ ಬಳಿ ಬಂದಿರುವ ಕಾಮುಕನೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ.
ಮೇ.9 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೇ.9 ರಂದು ದ್ವಿಚಕ್ರ ವಾಹನದಲ್ಲಿ ಬಂದಿರುವ ಯುವತಿ ವಾಹನವನ್ನು ಮನೆಯ ಮುಂದಿದ್ದ ಪಾರ್ಕ್ ಬಳಿ ನಿಲ್ಲಿಸಿ, ಮನೆಗೆ ತೆರಳುತ್ತಿದ್ದಳು. ಈ ವೇಳೆ ಬೈಕ್ ನಲ್ಲಿ ಬಂದಿರುವ ಕಾಮುಕ, ಯುವತಿ ಬಳಿ ವಿಳಾಸ ಕೇಳಲು ಮುಂದಾಗಿದ್ದಾನೆ. ಯುವತಿ ಆತನ ಪ್ರಶ್ನೆಗೆ ಯಾವುದೇ ಉತ್ತರ ನೀಡದೆ ಮುಂದೆ ಸಾಗಿದ್ದಾಳೆ.
ಈ ವೇಳೆಯನ್ನು ಹಿಂಬಾಲಿಸಿರುವ ಕಾಮುಕ, ಟಿ ಶರ್ಟ್ ಹಿಡಿದು ಎಳೆದು, ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಯುವತಿ ಕೂಗಾಡಿಕೊಂಡು, ಆತನಿಂದ ತಪ್ಪಿಸಿಕೊಂಡಿ ಓಡಿದ್ದಾಳೆ. ಬಳಿಕ ಪಾದಚಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಿಂದ ಕಾಮುಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಮೇ.10 ರಂದು ಯುವತಿ ಯಲಂಹಕ ನ್ಯೂ ಟೌನ್ ಪೊಲೀಸರಿಗೆ ದೂರು ನೀಡಿದ್ದಾಳೆಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆದಿರುವ ಸ್ಥಳದಲ್ಲಿ ಯಾವುದೇ ಸಿಸಿಟಿವಿಗಳೂ ಕಂಡು ಬಂದಿಲ್ಲ. ದೂರಿನಲ್ಲಿ ಯುವತಿ ನೀಡಿರುವ ಮಾಹಿತಿ ಪ್ರಕಾರ, ಕಾಮುಕ ಹೆಲ್ಮೆಟ್ ಧರಿಸಿದ್ದನೆಂದು ಹೇಳಿದ್ದಾಳೆ. ವಿಳಾಸ ಹೇಳಿಕ್ಕ ಯುವಕ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿದ್ದಾಗ ನನ್ನನ್ನು ಹಿಂಬಾಲಿಸಿ, ಪದೇ ಪದೇ ಮಾತನಾಡಿಸಲು ಆರಂಭಿಸಿದ್ದ. ಬೀದಿಯಲ್ಲಿ ರಸ್ತೆದೀಪಗಳು ಇಲ್ಲದ ಕಾರಣ, ಇದನ್ನು ಲಾಭವಾಗಿ ಬಳಸಿಕೊಂಡು ಲೈಂಗಿಕ ಕಿರುಕುಳ ನೀಡಲು ಯತ್ನ ನಡೆಸಿದ್ದನೆ. ಈ ಹಿಂದೆಂದೂ ಆತನನ್ನು ನೋಡಿಲ್ಲ ಎಂದು ಯುವತಿ ದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಯುವತಿಯ ತಂದೆ ಉದ್ಯಮಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾಮುಕನಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics