ರಾಜ್ಯ

ವಿಧಾನಸಭೆ ಚುನಾವಣೆ: ರಾಜ್ಯಪಾಲರ ಮುಂದಿನ ನಡೆ ಹೀಗಿರಬಹುದೆ?

Raghavendra Adiga
ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಸರ್ಕಾರ ರಚನೆಗೆ ಆಸಕ್ತಿ ಹೊಂದಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಇದಾಗಲೇ ಪರಸ್ಪರ ಹೊಂದಾಣಿಕೆಯೊಡನೆ ಸಮ್ಮಿಶ್ರ ಸರ್ಕಾರ ರಚನೆಗೆ ತಂತ್ರ ರೂಪಿಸಿದೆ. ಈ ಉದ್ದೇಶಕ್ಕಾಗಿ ಕಾಂಗ್ರೆಸ್, ಜೆಡಿಎಸ್ ರಾಜ್ಯಪಾಲನ್ನು ಭೇಟಿಯಾಗಿದೆ.
ಯಾವುದೆ ಪಕ್ಷ ಅಧಿಕಾರ ವಹಿಸಿಕೊಳ್ಳಲು ಅಗತ್ಯವಾದ ಸರಳ ಬಹುಮತ ಪಡೆಯದ ಕಾರಣ ಇದೀಗ ರಾಜ್ಯಪಾಲ ವಜುಭಾಯಿ ವಾಲಾ ನಿರ್ಧಾರ ಮಹತ್ವದ್ದಾಗುತ್ತದೆ. ಇನ್ನೂ ಹೆಳಬೇಕೆಂದರೆ ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದೆ.
ಹೀಗಿರಲುಇ ರಾಜ್ಯಪಾಲರ ಮುಂದಿನ ನಡೆಯೇನು? ಕೆಲವು ಸಾಧ್ಯಾಸಾಧ್ಯತೆಗಳನ್ನು ನಾವು ಹೀಗೆ ಪಟ್ಟಿ ಮಾಡಬಹುದು-
  • ಚುನಾವಣೆ ಪೂರ್ವದಲ್ಲಿ ಮೈತ್ರಿ ಮಾಡಿಕೊಂಡಿದ್ದ ರಾಜಕೀಯ ಪಕ್ಷಗಳನ್ನು ಸರ್ಕಾರ ರಚನೆಗಾಗಿ ಆಹ್ವಾನಿಸಬಹುದು.
  • ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯನ್ನು  ಇತರೆ ರಾಜಕೀಯ ಪಕ್ಷಗಳು, ಸ್ವತಂತ್ರ ಅಭ್ಯರ್ಥಿಗಳ ನೆರವು ಪಡೆದು ಸರ್ಕಾರ ರಚನೆ ಮಾಡುವಂತೆ ಹೇಳಬಹುದು.
  • ಯಾವುದೇ ಪಕ್ಷ ಹೊಂದಾಣಿಕೆ ಸರ್ಕಾರಕ್ಕೆ ಮನ ಮಾಡದಿದ್ದರೆ ಆಗ ಚುನಾವಣೋತ್ತರ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬಹುದು.
  • ಇನ್ನು ಕೆಲವು ಪಕ್ಷಗಳಷ್ಟೇ ಸರ್ಕಾರ ರಚನೆಗೆ ಆಸಕ್ತಿ ತೋರಿಸಿ ಮೈತ್ರಿಕೂಟ ಸೇರ್ಪಡೆಗೆ ಮುಂದಾದರೆ ಇತರೆ ಪಕ್ಷಗಳ ಬಾಹ್ಯ ಬೆಂಬಲ ಪಡೆದು ಸರ್ಕಾರ ರಚಿಸುವಂತೆ ರಾಜ್ಯಪಾಲರು ಕೇಳಬಹುದು.
SCROLL FOR NEXT