ರಾಜ್ಯ

ಬೆಂಗಳೂರು: 13.5 ಲಕ್ಷ ರೂ. ಮೌಲ್ಯದ ಅಕ್ರಮ ಕಾಸ್ಮೆಟಿಕ್‌ ಡ್ರಗ್ ವಶ

Raghavendra Adiga
ಬೆಂಗಳೂರು: ಬ್ಯೂಟಿ ಪಾರ್ಲರ್ ಗಳಲ್ಲಿ ಬಳಸಲ್ಪಡುವ ಚರ್ಮ ಬಿಳಿಯಾಗಿಸುವ ಕಾಸ್ಮೆಟಿಕ್ ಪೌಡರ್ ನ್ನು ಅಕ್ರಮ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಗುಪ್ತಚರ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತನಿಂದ 13.5 ಲಕ್ಷ ರೂ. ಮೌಲ್ಯದ ಕಾಸ್ಮೆಟಿಕ್ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಥಾಯ್ ಲ್ಯಾಂಡ್ ಹಾಗೂ ಮಲೇಷಿಯಾದಿಂದ ತರಲಾಗುವ ಈ ಡ್ರಗ್ಸ್ ಗಳನ್ನು ಬೆಂಗಳೂರಿನಿಂದ ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಸಾಗಾಟ ನಡೆಸಲಾಗುತ್ತಿತ್ತು.
ಕಾಸ್ಮೆಟಿಕ್ಸ್ ಕ್ಲಿನಿಕ್ ಹಾಗೂ ಬ್ಯೂಟಿ ಪಾರ್ಲರ್ ಗಳಲ್ಲಿ ವ್ಯಾಪಕವಾಗಿ ಬಳಕೆಯಾಗುವ ಇಂತಹಾ ಔಷಧಿಗಳು ಭಾರತದಲ್ಲಿ ಭಾರೀ ಬೇಡಿಕೆ ಹೊಂದಿದೆ.ಹೀಗಾಗಿ ಇಂತಹಾ ಡ್ರಗ್ಸ್ ಗಳ ಕಳ್ಳಸಾಗಣೆ, ವ್ಯಾಪಾರ ಸತತವಾಗಿ ನಡೆಯುತ್ತಿರುತ್ತದೆ. 
ಬೆಂಗಳೂರಿನ ಜಯನಗರದ ಮನೆಯೊಂದರಲ್ಲಿ ಸಂಗ್ರಹಿಸಲಾಗಿದ್ದ ಇಂತಹಾ ಡ್ರಗ್ಸ್ ನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಶಕ್ಕೆ ಪಡೆಯಲಾದ ಡ್ರಗ್ಸ್ ಜಪಾನ್‌ ನಿಂದ ತರಿಸಲಾಗಿದ್ದ ಟೇಶಿಯೊ ಆಕ್ಟಿವ್ ಡಿಎಕ್ಸ್ ಪೌಡರ್ ಎಂದು ಗುರುತಿಸಲಾಗಿದೆ.
ಆಹಾರ ಸಾಮಗ್ರಿ ಎಂಬ ಲೇಬಲ್ ಹಚ್ಚಿ ಇದನ್ನು ಕಳ್ಳ ಸಾಗಣೆ ಮೂಲಕ ಆಮದು ಮಾಡಿಕೊಳ್ಳಲಾಗಿದೆ ಎಂದು ಪತ್ತೆ ಮಾಡಿದ ಅಧಿಕಾರಿಗಳು ಪ್ರಕರಣ ಸಂಬಂಧ ಭಟ್ಕಳ ಮೂಲದ ಇನ್ನೋರ್ವ ವ್ಯಕ್ತಿಯನ್ನು ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರೆ.
ಆಹಾರ ಸಾಮಗ್ರಿ ಎಂದು ಬ್ರ್ಯಾಂಡ್ ಮಾಡಲಾದ ಪ್ಯಾಕ್ ಗಳನ್ನು ಸಾಮಾನ್ಯವಾಗಿ ಪರೀಕ್ಷೆಗೆ ಒಳಪಡಿಸುವುದಿಲ್ಲ. ಇದಕ್ಕಾಗಿ ಆರೋಪಿಗಳು ತಾವು ನಡೆಸುವ ಕಳ್ಳ ವ್ಯ್ವಹಾರಕ್ಕೆ ಈ ಮಾರ್ಗ ಅನುಸರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
SCROLL FOR NEXT