ರಾಜ್ಯ

ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರಿಗೆ ದೇಶದಲ್ಲಿ ಉತ್ತಮ ನಗರ ಸ್ಥಾನ

Sumana Upadhyaya

ಮಂಗಳೂರು; ಮೂರರಿಂದ ಹತ್ತು ಲಕ್ಷದವರೆಗೆ ಜನವಸತಿ ಇರುವ ನಗರ ಪ್ರದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಮಂಗಳೂರು ಭಾರತದಲ್ಲಿ ಅತ್ಯುತ್ತಮ ನಗರ ಎಂದು ಕೇಂದ್ರ ನಗರಾಭಿವೃದ್ದಿ ಮತ್ತು ವಸತಿ ಸಚಿವಾಲಯ ಘೋಷಿಸಿದೆ.

ಸ್ವಚ್ಛ ಭಾರತ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳ ಅಭಿಯಾನದಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಮರ್ಥನೀಯತೆ, ನಾವೀನ್ಯತೆ ಮತ್ತು ಅದರಿಂದ ಹೊರಬಂದ ಫಲಿತಾಂಶಗಳನ್ನು ನೋಡಿಕೊಂಡು ಮಂಗಳೂರು ನಗರಕ್ಕೆ ಮೊದಲ ಸ್ಥಾನ ನೀಡಲಾಗಿದೆ. ಸ್ವಚ್ಛತಾ ಸರ್ವೇಕ್ಷಣಾ ಪ್ರಶಸ್ತಿಯ ಭಾಗವಾಗಿದ್ದು ದೇಶದ 4203 ನಗರ ಸ್ಥಳೀಯ ಸಂಸ್ಥೆಗಳನ್ನು ಮೌಲ್ಯಮಾಪನ ಮಾಡಲಾಗಿದೆ.

ಕಳೆದ ಜನವರಿ 4ರಿಂದ ಮಾರ್ಚ್ 10ರವರೆಗೆ ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಮೌಲ್ಯಮಾಪನ ಮಾಡಲಾಗಿದೆ. ನಗರದ ನಾಗರಿಕರ ಅಭಿಪ್ರಾಯ ಮತ್ತು ಸೇವಾ ಮಟ್ಟದಲ್ಲಿನ ಬೆಳವಣಿಗೆಗಳನ್ನು ನೋಡಲಾಗಿದೆ.

ಸಚಿವಾಲಯ ದೇಶದಲ್ಲಿ ಇಂದೋರ್, ಭೋಪಾಲ್ ಮತ್ತು ಚಂಡೀಗಢವನ್ನು ಮೂರು ಅತ್ಯಂತ ಹೆಚ್ಚಿನ ಸ್ವಚ್ಛ ನಗರಿ ಎಂದು ಗುರುತಿಸಿದೆ.

SCROLL FOR NEXT