ಬೆಂಗಳೂರು: ಬಹುಮತ ಸಾಬೀತು ಪಡಿಸಲುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡಿದ್ದ ಭಾರತೀಯ ಜನತಾ ಪಕ್ಷದ ನಾಯಕ ಬಿ,ಎಸ್, ಯಡಿಯೂರಪ್ಪ ಮತ್ತೆ ಆತ್ಮವಿಶ್ವಾಸದಿಂದ ಪುಟಿದೆದ್ದಿದ್ದಾರೆ.
ಪಕ್ಷದ ಕಾರ್ಯಕರ್ತರಿಗಾಗಿ ತಾವು ಫೇಸ್ ಬುಕ್ ನಲ್ಲಿ ಭಾವುಕ ಸಂದೇಶವನ್ನು ಪ್ರಕಟಿಸಿದ ಅವರು ’ನಮ್ಮ ಪ್ರಯತ್ನಗಳು ಹುಸಿಯಾಗುವುದಿಲ್ಲ, ತಾಳ್ಮೆಯಿಂದಿರಿ'' ಎಂದಿದ್ದಾರೆ.
ಮೇ 17 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಮೂರು ದಿನಗಳೊಳಗೆ ರಾಜೀನಾಮೆ ಸಲ್ಲಿಸಿ ಮರಳಿದ್ದರು.
ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಬಿದ್ದಿದೆ ಎಂದಿರುವ ಯಡಿಯೂರಪ್ಪ ಜನತೆಯ ಆಶೀರ್ವಾದ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುಅ ಬಿಜೆಪಿ ಇಂದು ಅಧಿಕಾರದಿಂದ ಹೊರಗುಳಿದಿದೆ ಎಂದಿದ್ದಾರೆ.
"ಹಿಂದಿನ ಚುನಾವಣೆಯಲ್ಲಿ 122ಇದ್ದ ಕಾಂಗ್ರೆಸ್ ಬಲ 78ಕ್ಕೆ ಕುಸಿದಿದೆ.ಜೆಡಿಎಸ್ 40 ರಿಂದ 37ಕ್ಕೆ ಇಳಿದಿದೆ. ಗರಿಷ್ಠ ಸ್ಥಾನ ಗಳಿಸಿದ ಪಕ್ಷವಾಗಿ ಣಾವು ರ್ಕಾರವನ್ನು ರಚಿಸಬೇಕಾದ್ದು ನಮ್ಮ ಜವಾಬ್ದಾರಿ. ನಾವು ಏಕೆ ಯಶಸ್ವಿಯಾಗಲಿಲ್ಲವೆಂದು ಜಗತ್ತಿಗೇ ತಿಳಿದಿದೆ: ಜನರಿಂದ ತಿರಸ್ಕೃತಗೊಂಡ ಎರಡು ಪಕ್ಷಗಳು ನಮ್ಮ ವಿರುದ್ಧ ಪಿತೂರಿ ಮಾಡಿವೆ." ಅವರು ಹೇಳಿದ್ದಾರೆ.
ನಾನಿನ್ನೂ ದಣಿದಿಲ್ಲ ಎಂದಿರುವ ಬಿಎಸ್ ವೈಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ರೈತರ ಆತ್ಮಹತ್ಯೆಯನ್ನು ಸ್ಮರಿಸುತ್ತಾ "ನಮಗೆ ಅಧಿಕಾರವಿಲ್ಲ. ಆದರೆ ರೈತರ ಕಾರಣಕ್ಕಾಗಿ ನಾವು ಹೋರಾಟ ನಿರಂತರವಾಗಿರಲಿದೆ.. ನಮ್ಮ ರೈತರು ಗರ್ವದಿಂದ 'ನಾನು ರೈತ' ಎಂದು ಹೇಳಿಕೊಳ್ಳುವ ಹಾಗೆ ಮಾಡುವುದು ನನ್ನ ಸರ್ಕಾರದ ಆಶಯವಿತ್ತು. ಈಗಲೂ ಹಾಗೇ ಇದೆ ಎಂದಿದ್ದಾರೆ.
ನನ್ನ ಬೆಂಬಲಿಗರ ಪ್ರೀತಿಯಿಂದ ಗುಮಾಸ್ತನಿಂದ ನಾಯಕನಾಗಿ ನಾನು ಬೆಳೆಯಲು ಸಾಧ್ಯವಾಗಿದೆ ಎಂದು ಯಡಿಯೂರಪ್ಪ ತಮ್ಮ ಹಿಂದಿನ ದಿನಗಳನ್ನು ಸ್ಮರಿಸಿಕೊಳ್ಳುತ್ತಾ ಹೇಳಿದ್ದಾರೆ.
ನೀವೆಲ್ಲ ಕೆಲ ತಿಂಗಳು ಮನೆ ಬಿಟ್ಟು ಬಿಜೆಪಿ ಪರವಾಗಿ ಕೆಲಸ ಮಾಡಿ ಎಂದು ನಾನು ಪರಿವರ್ತನಾ ಯಾತ್ರೆಯಲ್ಲಿ ಕೊಟ್ಟ ಕರೆಗೆ ನೀವೆಲ್ಲ ಬಂದಿದ್ದೀರ, ದುಡಿದಿದ್ದೀರ. ಅಂದು ನೀವು ಪಟ್ಟ ಶ್ರಮ, ಇಂದು ನೀವು ಹಾಕಿದ ಕಣ್ಣೀರು ಯಾವುದೂ ವ್ಯರ್ಥವಾಗುವುದಕ್ಕೆ ನಾನು ಬಿಡುವುದಿಲ್ಲ. ನೀವ್ಯಾರೂ ಎದೆಗುಂದ ಬೇಡಿ. ನಿಮ್ಮ ಶಕ್ತಿಯೇ ನನ್ನ ಬಲ" ಅವರು ಹೇಳಿದರು.
ಸಧ್ಯಕ್ಕೆ ಸ್ವಲ್ಪ ತಾಳ್ಮೆಯಿಂದಿರಿ. ಮನೆಯವರೊಂದಿಗೆ ಕಾಲ ಕಳೆಯಿರಿ. ಮತ್ತೆ ನಾನು ನಿಮ್ಮೊಂದಿಗೆ ಬರುತ್ತೇನೆ. ಸ್ವಸ್ಥ, ಸದೃಢ, ಸಮರ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಸಾಗೋಣ. ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics