ರಾಜ್ಯ

ಮಂಗಳೂರಿನಲ್ಲಿ ನಿಪಾ ವೈರಸ್ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ:

Raghavendra Adiga
ಮಂಗಳೂರು: ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಶಂಕಿತ ನಿಫಾ ಸೋಂಕಿತರಿಬ್ಬರ ಗಂಟಲು ದ್ರವ ಹಾಗೂ ರಕ್ತದ ಮಾದರಿಗಳಿಗಳಲ್ಲಿ ನಿಫಾ ವೈರಾಣು ಪತ್ತೆಯಾಗಿಲ್ಲ. ರಕ್ತ ಪರೀಕ್ಷೆ ವರದಿಯಲ್ಲಿ ಸಹ ಸೋಂಕಿ ಇಲ್ಲವೆಂದು ಖಚಿತವಾಗಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಸೋಂಕು ಇಲ್ಲ ಎಂದು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಕೇರಳ ಕೋಝಿಕೋಡ್ ಮಹಿಳೆ ಹಾಗೂ ಇನ್ನೊಬ್ಬ ರೋಗಿಗಳಿಬ್ಬರಲ್ಲಿಯೂ ನಿಫಾ ಸೋಂಕು ಪತ್ತೆಯಾಗಿಲ್ಲ ಎನ್ನುವುದಾಗಿ ತಿಳಿದುಬಂದಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಬಾವಲಿಗಳ ಮೂಲಕ ನಿಪಾ ವೈರಸ್ ಜ್ವರಕ್ಕೆ ಜನರು ಬಲಿಯಾಗಿದ್ದಾರೆ. ಆದರೆ ದಕ್ಷಿಣ ಕನ್ನಡಕ್ಕೆ ಈ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದು ಅವರು ವಿವರಿಸಿದರು.
ಪ್ರಾಣಿಗಳು, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನ ತಿನ್ನಬೇಡಿ, ಇದು ಗಾಳಿಯಲ್ಲಿ ಹರಡುವ ಸಾಂಕ್ರಾಮಿಕ ರೋಗವಲ್ಲ. ಹೆಚ್ಚಾಗಿ ನೈರ್ಮಲ್ಯದ ಕಡೆ ಕಾಳಜಿ ವಹಿಸಿ. ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ಇತ್ತಿದ್ದಾರೆ.
ಕೇರಳದಲ್ಲಿ ವ್ಯಾಪಕವಾಗಿರುವ ನಿಫಾ ವೈರಾಣು ಜ್ವರ ಮಂಗಳೂರಿನ ಇಬ್ಬರಲ್ಲಿ ಕಾಣಿಸಿಕೊಂಡಿದೆ ಎಂದು ಶಂಕೆ ವ್ಯಕ್ತವಾಗಿತ್ತು. ಅದಕ್ಕಾಗಿ ಅವರ ದೇಹದ ದ್ರವ ಹಾಗೂ ರಕ್ತವನ್ನು ಮಣಿಪಾಲಕೆ ಕಳಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.
SCROLL FOR NEXT