ರಾಜ್ಯ

ಸಿಬಿಎಸ್ಇ ಫಲಿತಾಂಶ: ದೇಶದಲ್ಲಿ ನಾಲ್ಕನೇ ಸ್ಥಾನ ಪಡೆದ ಬೆಂಗಳೂರು ವಿದ್ಯಾರ್ಥಿನಿ

Raghavendra Adiga
ಬೆಂಗಳೂರು: 2018ರ ಸಿಬಿಎಸ್ಇ 12 ನೇ ತರಗತಿ ಪರೀಕ್ಷೆಯಲ್ಲಿ ಬೆಂಗಳೂರಿನ ವಿದ್ಯಾರ್ಥಿನಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಬೆಂಗಳೂರು ಮಲ್ಲಸಂದ್ರದಲ್ಲಿರುವ ಶ್ರೀ ಕುಮಾರನ್ಸ್ ಚಿಲ್ಡ್ರನ್ಸ್ ಹೋಮ್ ನ ಸಮೀನಾ ಸಿರಾಜ್ ಮುಲಾನಿ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿಯಾಗಿದ್ದು ಈಕೆ ಒಟ್ಟು 500 ಅಂಕಗಳಲ್ಲಿ 496 ಅಂಕಗಳೊಡನೆ ಶೇ. 99.2 ಪಡೆಇದ್ದಾರೆ.
ಅವರು ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ತಲಾ 99 ಅಂಕ ಗಳಿಸಿದ್ದರೆ ಕಂಪ್ಯೂಟರ್ ವಿಜ್ಞಾನ ಮತ್ತು ರಸಾಯನ ಶಾಸ್ತ್ರದಲ್ಲಿ 100 ಇಂಗ್ಲೀಷ್ ನಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲವಿರುವ ಸಮೀನಾ ಈ ಫಲಿತಾಂಶದಿಂದ ಸಂತಸಗೊಂಡಿದ್ದು ಇದೀಗ ಸಿಇಟಿ ಹಾಗೂ ಬಿಟ್ ಸ್ಯಾಟ್ ಪರೀಕ್ಷೆ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.  "ನಾನು ದೇಶದಲ್ಲಿಯೇ ನಾಲ್ಕನೇ ಸ್ಥಾನವನ್ನು ಪಡೆದಿರುವುದು ಬಹಳ ಸಂತಸ ತಂದಿದೆ. ಇಂಜಿನಿಯರಿಂಗ್ ಕೋರ್ಸ್ ತೆಗೆದುಕೊಳ್ಳಲು ಪ್ರವೇಶ ಪರೀಕ್ಷೆ ಬರೆದಿದ್ದು ಆ ಫಲಿತಾಂಶಕ್ಕೆ ಎದುರು ನೋಡುತ್ತಿದ್ದೇನೆ." ಅವರು ಹೇಳಿದ್ದಾರೆ.
ಪ್ರಸಕ್ತ ಸಾಲಿನ ಸಿಬಿಎಸ್ ಇ 12ನೇ ತರಗತಿಯ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ನ ಮೇಘನಾ ಶ್ರೀವಾಸ್ತವ ದೇಶಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದರು.
SCROLL FOR NEXT