ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ರಾಜ್ಯದ ಟ್ಯಾಕ್ಸಿ ಚಾಲಕರಲ್ಲಿ ಭಾರೀ ಸಂತೋಷಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಇದೀಗ ಮುಖ್ಯಮಂತ್ರಿಯಾಗಿದ್ದು ಅವರು ತಮ್ಮ ಸಮಸ್ಯೆಗಳತ್ತ ಗಮನ ಹರಿಸುತ್ತಾರೆ ಎಂದು ರಾಜ್ಯದ ಪ್ರಮುಖ ಟ್ಯಾಕ್ಸಿ ಸೇವಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಚಾಲಕರು ನಿರೀಕ್ಷೆ ಹೊಂದಿದ್ದಾರೆ.
ಟ್ಯಾಕ್ಸಿ ಸೇವಾ ಸಂಸ್ಥೆಗಳು ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಭರದಲ್ಲಿ ಚಾಲಕರಿಗೆ ಅತ್ಯಂತ ಕನಿಷ್ಟ ವೇತನ ನೀಡುತ್ತಲಿವೆ. ಇದರ ಕುರಿತಂತೆ ನೂತನ ಮುಖ್ಯಮಂತ್ರಿಗಳು ಶೀಘ್ರವಾಗಿ ಕ್ರಮ ತೆಗೆದುಕೊಂಡು ಚಾಲಕರಿಗೆ ಸಿಗಬೇಕಾದ ನ್ಯಾಯಯುತ ವೇತನ ದರ ಜಾರಿಗೆ ಮುಂದಾಗಲಿದ್ದಾರೆ ಎನ್ನುವುದು ಬಹುತೇಕ ಚಾಲಕರ ನಿರೀಕ್ಷೆಯಾಗಿದೆ.
ಹಿಂದೊಮ್ಮೆ ನಗರದ ಟ್ಯಾಕ್ಸಿ ಚಾಲಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಜೆಡಿ (ಎಸ್)ನಾಯಕ ಕುಮಾರಸ್ವಾಮಿ ಚಾಲಕರು ನಡೆಸಿದ್ದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು.ಚಾಲಕರ ಸಮಸ್ಯೆ ಕುರಿತಂತೆ ಪರಿಹಾರ ಒದಗಿಸಲು ಅವರು ಸಾರಿಗೆ ಇಲಾಖೆಯೊಂದಿಗೆ ಹೋರಾಟ ನಡೆಸಿದ್ದರು.ಅಲ್ಲದೆ ತಾವೇ ನೂತನ ಕ್ಯಾಬ್ ಸಂಸ್ಥೆ ರಚಿಸಲು ಚಾಲಕರಿಗೆ ನೆರವು ನೀಡುವ ಸಂಬಂಧ ಮಾತನಾಡಿದ್ದರು. ಈ ಎಲ್ಲಾ ಕಾರಣಕ್ಕಾಗಿ ಟ್ಯಾಕ್ಸಿ ಚಾಲಕರಿಗೆ ಕುಮಾರಸ್ವಾಮಿ ಮೇಲೆ ಸಾಕಷ್ಟು ಭರವಸೆ ಇದೆ.
ಚಾಲಕರಿಗೆ ಅನುಕೂಲ ಕಲ್ಪಿಸುವ ಕ್ಯಾಬ್ ಸೇವೆ ಪ್ರಾರಂಭಿಸಲು ಕುಮಾರಸ್ವಾಮಿಯವರು ಅಂದು ಮುಂದಾಗಿದ್ದರು.ಇದೀಗ ಇಅದೇ ಬೇಡಿಕೆಗೆ ಮರುಜೀವ ಬಂದಿದೆ, "ಸಾರಿಗೆ ಇಲಾಖೆ ಪರವಾನಗಿ ನೀಡಿಲ್ಲದ ಕಾರಣದಿಂದ, ಹಣಕಾಸಿನ ಮುಗ್ಗಟ್ಟು ಎದುರಾಗಿದ್ದರಿಂದ ಹೊಸ ಕ್ಯಾಬ್ ಸಂಸ್ಥೆ ಕಾರ್ಯಾಚರಣೆಯನ್ನು ನಿಲ್ಲಿಸಿದೆ." ಉಬರ್, ಟ್ಯಾಕ್ಸಿ ಫಾರ್ ಶ್ಯೂರ್, ಓಲಾದ ಚಾಲಕರ ಸಂಸ್ಘಟನೆಯ ಮಾಜಿ ಅಧ್ಯಕ್ಷ ತನ್ವೀರ್ ಪಾಶಾ ಹೇಳಿದ್ದಾರೆ.
’ನಮ್ಮ ಟಿವೈಜಿಆರ್’ ಕ್ಯಾಬ್ ಸಂಸ್ಥೆಗಾಗಿ ಸಾರಿಗೆ ಇಲಾಖೆ ಪರವಾನಗಿ ನೀಡಲಿದೆ ಎಂದು ಅವರು ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಂತೆ ಗಮನ ಸೆಳೆಯುವದಕ್ಕಾಗಿ ನಿಯೋಗವೊಂದು ನೂತನ ಮುಖ್ಯಮಂತ್ರಿಗಳನ್ನು ಇನ್ನು 10 ದಿನಗಳಲ್ಲಿ ಭೇಟಿಯಾಗಲಿದೆ. ಚಾಲಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ಆಶಿಸುತ್ತಿದ್ದಾರೆ.
"ಸರ್ಕಾರಿ ಸ್ವಾಮ್ಯದ ಕ್ಯಾಬ್ ಸಂಸ್ಥೆಯಾಗಿದ್ದರೆ ಸರ್ಕಾರದ ನಿಗದಿತ ಶುಲ್ಕ ಪಾವತಿಯು ಗ್ರಾಹಕರು, ಚಾಲಕರಿಬ್ಬರಿಗೂ ಅನುಕೂಲವಾಗಲಿದೆ ಎಂದು ಇಂದಿರಾನಗರ ನಿವಾಸಿ ಕೌಶಿಕ್ ಚಟರ್ಜಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos