ರಾಜ್ಯ

ಆರ್ ಆರ್ ನಗರ ಚುನಾವಣೆ: ಬೆಳಿಗ್ಗೆ 11 ಗಂಟೆಯವರೆಗೂ ಶೇ.21 ರಷ್ಟು ಮತದಾನ

Nagaraja AB

ಬೆಂಗಳೂರು: ಕಾಂಗ್ರೆಸ್ , ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಗತಿಯಲ್ಲಿದ್ದು, ಬೆಳಗ್ಗೆ 11 ಗಂಟೆಯವರೆಗೂ ಶೇ. 21 ರಷ್ಟು ಮತದಾನವಾಗಿರುವ ಬಗ್ಗೆ ವರದಿ ಬಂದಿದೆ.

 ನಕಲಿ ಗುರುತಿನ ಚೀಟಿ ಹಗರಣದಿಂದಾಗಿ  ಮೇ 12 ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಇಂದಿಗೆ ಮುಂದೂಡಲಾಗಿತ್ತು.  ಜಾಲಹಳ್ಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ  9.746 ನಕಲಿ ಮತದಾರರ ಚೀಟಿಗಳನ್ನು ಮೇ 8 ರಂದು ಚುನಾವಣಾ ಆಯೋಗ ಪತ್ತೆ ಮಾಡಿತ್ತು.

 ಈ ನಕಲಿ ಗುರುತಿನ ಚೀಟಿಗಳು ಪತ್ತೆಯಾದ ನಂತರ  ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ಉಂಟಾಗಿ, ಚುನಾವಣಾ ಆಯೋಗ  ಇಂದಿಗೆ ಚುನಾವಣೆಯನ್ನು ಮುಂದೂಡಿತ್ತು. ಶನಿವಾರ ಚುನಾವಣಾ ಪ್ರಚಾರ ಅಂತ್ಯಗೊಂಡಿತ್ತು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದ್ದರೂ ಉಭಯ ಪಕ್ಷಗಳ ನಡುವೆ ಚುನಾವಣೆ ಹೊಂದಾಣಿಕೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್  ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದ್ದಾರೆ.
SCROLL FOR NEXT