ಸಹಪಾಠಿಯಿಂದ ಟೆಕ್ಕಿಯ ಮೇಲೆ ಅತ್ಯಾಚಾರ; ಆರೋಪಿಯ ಬಂಧನ 
ರಾಜ್ಯ

ಬೆಂಗಳೂರು: ಸಹಪಾಠಿಯಿಂದ ಟೆಕ್ಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ

24 ವರ್ಷದ ಟೆಕ್ಕಿಯನ್ನು ಸಹಪಾಠಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ಬೆಂಗಳೂರು: 24 ವರ್ಷದ ಟೆಕ್ಕಿಯನ್ನು ಸಹಪಾಠಿ ಅತ್ಯಾಚಾರ ಮಾಡಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ. 
ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಪಂಜಾಬ್ ಮೂಲದ ವ್ಯಕ್ತಿ ಈ ಕುಕೃತ್ಯ ಎಸಗಿದ್ದು, ಶಾಲೆಯಲ್ಲಿ ತನ್ನ ಕಿರಿಯ ಸಹಪಾಠಿಯಾಗಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ.  ಆರೋಪಿ ಪ್ರೌಢಶಾಲೆಯಲ್ಲಿ ನನ್ನ ಹಿರಿಯ ಸಹಪಾಠಿಯಾಗಿದ್ದರೂ ಹಲವು ವರ್ಷಗಳಿಂದ ಸಂಪರ್ಕದಲ್ಲಿ ಇರಲಿಲ್ಲ. ಆದರೆ ಇಬ್ಬರಿಗೂ ಸಾಮಾನ್ಯ ಸ್ನೇಹಿತರಾಗಿದ್ದವರ ವಿವಾಹದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಯುವತಿಯ ನಂಬರ್ ಪಡೆದಿದ್ದ ಆರೋಪಿ ದಿಲ್ದವೀಂದರ್ ಸಿಂಗ್(25) ಯುವತಿಯೊಂದಿಗೆ ವಾಟ್ಸ್ ಅಪ್ ನಲ್ಲಿ ಚಾಟ್ ಮಾಡುತ್ತಿದ್ದ. ತಾನು ಕೆಲಸ ಅರಸಿ ಬೆಂಗಳೂರಿಗೆ ಬರುವುದಾಗಿ ಯುವತಿಯ ಬಳಿ ಕೆಲವೇ ದಿನಗಳ ಹಿಂದೆ ತಿಳಿಸಿದ್ದ. ಅಂತೆಯೇ ಶುಕ್ರವಾರ (ಮೇ.25) ರಂದು ತಾನು ಬೆಂಗಳೂರಿಗೆ ಬಂದಿರುವುದಾಗಿ ದಿಲ್ದವೀಂದರ್ ಸಿಂಗ್ ಯುವತಿಯ ಬಳಿ ಹೇಳಿದ್ದಾನೆ. 
ಮೇ.25 ರಂದು ಸಂಜೆ ಇಬ್ಬರೂ ಇಂದಿರಾನಗರದಲ್ಲಿರುವ ರೆಸ್ಟೋರೆಂಟ್ ಗೆ ತೆರಳಿದ್ದೆವು. ಆದರೆ ರೆಸ್ಟೋರೆಂಟ್ ಭರ್ತಿಯಾಗಿದ್ದರಿಂದ ಕೋರಮಂಗಲಕ್ಕೆ ತೆರಳಿದೆವು. ಈ ವೇಳೆ ದಿಲ್ದವೀಂದರ್ ಸಿಂಗ್ ನ ಮತ್ತೋರ್ವ ಸ್ನೇಹಿತ ತುಷಾರ್ ಕೂಡ ಜೊತೆಯಾಗಿದ್ದ. ಮೂವರು ಅಲ್ಲಿಂದ ಹೊರಡಬೇಕಾದರೆ ಸಮಯ ಮಧ್ಯರಾತ್ರಿ 1 ಗಂಟೆಯಾಗಿತ್ತು. ಆದ್ದರಿಂದ ನಾನು ನಿನ್ನನ್ನು ಮನೆವರೆಗೂ ಬಿಡುತ್ತೇನೆ ಎಂದು ಬಂದ ದಿಲ್ದವೀಂದರ್ ಸಿಂಗ್ ನನ್ನ ಮೇಲೆ 3-4 ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಹೇಳಿದ್ದಾರೆ. 
ದೂರನ್ನು ಆಧರಿಸಿ ಪೊಲೀಸರು ದಿಲ್ದವೀಂದರ್ ಸಿಂಗ್ ನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿಯೂ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಸಾಬೀತಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಏರಿದ ಇಂಧನ ದರ: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳ; 2 ವಾರಗಳಲ್ಲಿ ರೂ. 7.5 ಏರಿಕೆ, ತೈಲ ಕಂಪನಿಗಳಿಂದ ವಾಹನ ಸವಾರರಿಗೆ ಮತ್ತೆ ಶಾಕ್..!

ನಿತಿನ್ ನಬೀನ್ ಭೇಟಿ ಬಳಿಕ BJP ನಾಯಕತ್ವ ಚರ್ಚೆ ಮತ್ತೆ ಮುನ್ನೆಲೆಗೆ: ವಿಜಯೇಂದ್ರ ಭವಿಷ್ಯ ಕುರಿತು ಹೆಚ್ಚಿದ ಕುತೂಹಲ; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ತೀವ್ರ..!

ಬೆಂಗಳೂರು ದಿಢೀರ್ ಹವಾಮಾನ ಬದಲಾವಣೆಗೆ AI ಡೇಟಾ ಸೆಂಟರ್‌ಗಳೇ ಕಾರಣ? ‘Heat island’ ಪರಿಣಾಮ ಕುರಿತು ತಜ್ಞರ ಗಂಭೀರ ಎಚ್ಚರಿಕೆ..!

SIR ಹೆಸರಿನಲ್ಲಿ ಮತದಾರರ ಹೆಸರು ಡಿಲೀಟ್ ಆರೋಪ; war room ಸ್ಥಾಪಿಸಿದ ಕಾಂಗ್ರೆಸ್, ಎಚ್ಚರ ವಹಿಸುವಂತೆ 'ಕೈ' ನಾಯಕರಿಗೆ ಸಿದ್ದು-ಡಿಕೆಶಿ ಸೂಚನೆ

ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಹಿಂಭಾಗದಲ್ಲಿರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ..!

SCROLL FOR NEXT