ಮಂಗಳೂರು: ಮೂರು ಗಂಟೆಗಳ ಕಾಲಸತತ ಮಳೆ, ಜನಜೀವನ ಅಸ್ತವ್ಯಸ್ಥ 
ರಾಜ್ಯ

ಮಂಗಳೂರು: ಮೂರು ಗಂಟೆಗಳ ಕಾಲ ಸತತ ಮಳೆ, ಜನಜೀವನ ಅಸ್ತವ್ಯಸ್ಥ

ಕೇರಳದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಬೆನ್ನಲ್ಲೇ ರಾಜ್ಯ ಕರಾವಳಿಯಲ್ಲಿಯೂ ಮಳೆಯ ಆರ್ಭಟ ಮೊದಲಾಗಿದೆ.

ಮಂಗಳೂರು: ಕೇರಳದಲ್ಲಿ ಮುಂಗಾರು ಮಳೆ ಪ್ರಾರಂಭವಾದ ಬೆನ್ನಲ್ಲೇ ರಾಜ್ಯ ಕರಾವಳಿಯಲ್ಲಿಯೂ ಮಳೆಯ ಆರ್ಭಟ ಮೊದಲಾಗಿದೆ. ಬೆಳಿಗ್ಗೆ 9ಕ್ಕೆ ಪ್ರಾರಂಬವಾದ ,ಮಳೆ ಸತತ ಮೂರು ಗಂಟೆಗಳ ಕಾಲ ಸುರಿದ ಕಾರಣ ನಗರದಾದ್ಯಂತ ಜನಜೀವನ ಅಸ್ತವ್ಯರ್ಥವಾಗಿದೆ.
ಮಂಗಳೂರಿನ ರಸ್ತೆಗಳು ಸಂಪೂರ್ಣ್ ಜಲಾವೃತವಾಗಿದ್ದು ವಾಹನಗಳು ನೀರಲ್ಲಿ ಮುಳಿಗಿದೆ. ತಗ್ಗು ಪ್ರದೇಶದ ಮನೆ, ಕಛೇರಿಗಳಿಗೆ ಸಹ ನೀರು ನುಗ್ಗಿದೆ. ಪೋಲೀಸರು, ಅಗ್ನಿಶಾಮಕ ದಳ  ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಕರಾವಳಿ ಜಿಲ್ಲೆಯಾದ್ಯಂತ  ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ರೈಲು ಸಂಚಾರ, ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ನಗರದಲ್ಲಿ ತೋಕೂರು ನಿಲ್ದಾಣದಿಂದ ಮುಂದೆ ರೈಲು ಸಂಚಾರವಿರುವುದಿಲ್ಲ. 
ಜಿಲ್ಲೆಯ ಇತರೆಡೆಗಳಲ್ಲಿ ಸಹ ಭಾರೀ ಮಳೆಯಾಗುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಪಿಟಿ ಉದಯನಗರ, ಅತ್ತಾವರ ಸೇರಿ ಹಲವು ಕಡೆ ಮೂಲಭೂತ ಸೌಕರ್ಯಗಳಿಗೆ ಧಕ್ಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ಮಂಗಳೂರು ನಗರದಲ್ಲಿ 146 ಮಿಮೀ ಮಳೆಯಾಗಿದೆ .ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಕಳೆದೆರಡು ವರ್ಷಗಳಲ್ಲಿ ಕರಾವಳಿಯಾದ್ಯಂತ ಉತ್ತಮ ಮಳೆಯಾಗಿದ್ದು 2017 ರಲ್ಲಿ ಶೇ. 20, 2016 ರಲ್ಲಿ ಶೇ.40ರಷ್ಟು ಮಳೆ ದಾಖಲಾಗಿದೆ.
ಉಡುಪಿಯಲ್ಲಿಯೂ ಮಳೆ 
ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸಹ ವರ್ಷಧಾರೆ ಆಗುತ್ತಿದೆ. ಜಿಲ್ಲೆಯ ಕಾರ್ಕಳದ ಬೈಲೂರಿನಲ್ಲಿ ಮಂಗಳವಾರ ಮುಂಜಾನೆ ಸಿಡಿಲು ಬಡಿದ ಕಾರಣ ಗ್ರಾಮ ಪಂಚಾಯತ್ ಸದಸ್ಯೆ ಶೀಲಾ (34) ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

ಚಾಮುಂಡೇಶ್ವರಿ ದೇವಿ ಸುತ್ತ ನಡೆಯುತ್ತಿರುವ ರಾಜಕೀಯ ತೀವ್ರ ಬೇಸರ ತರಿಸಿದೆ: ಪ್ರಮೋದಾದೇವಿ ಒಡೆಯರ್

SCROLL FOR NEXT