ಮಂಗಳೂರು: ಮೆಕನು ಚೆಂಡಮಾರುತ ಪರಿಣಾಮ ಕರವಾಳಿ ಕರ್ನಾಟಕದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಜಿಲ್ಲಾಡಳಿತ 5 ಲಕ್ಷ ಪರಿಹಾರವನ್ನು ವಿತರಿಸಿದೆ.
ಮಂಗಳೂರಿನ ಉದಯನಗರದ ಮೋಹಿನಿ ಹಾಗೂ ಕೊಡಿಯಾಲಬೈಲ್ ನ ಮುಕ್ತಾಬಾಯಿ ಅವರ ಕುಟುಂಬಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಲಾ 5 ಲಕ್ಷ ರುಪಾಯಿ ಪರಿಹಾರಧನದ ಚೆಕ್ ಅನ್ನು ವಿತರಿಸಿದರು.
ಮೆಕುನು ಚಂಡಮಾರುತ ಕಾರವಳಿಯಲ್ಲೂ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದು, ಮಂಗಳೂರು, ಉಡುಪಿ, ಕಾರವಾರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಇನ್ನು ಮಹಾಮಳೆಗೆ ಈವರೆಗೂ ಇಬ್ಬರ ಬಲಿಯಾಗಿದ್ದಾರೆ. ಪಡುಬಿದ್ರಿಯಲ್ಲಿ ಓರ್ವ ಬಾಲಕಿ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದು 9 ವರ್ಷ ನಿಧಿ ಆಚಾರ್ಯ ಮೃತದೇಹ ಇಂದು ಪತ್ತೆಯಾಗಿದೆ.