ರಾಜ್ಯ

ಬೆಂಗಳೂರಿಗೂ ವಕ್ಕರಿಸಿತೇ 'ನಿಪಾಹ್' ಸೋಂಕು?: ತುರ್ತು ನಿಗಾ ಘಟಕದಲ್ಲಿ ಮೂವರು ದಾದಿಯರಿಗೆ ಚಿಕಿತ್ಸೆ!

Srinivasamurthy VN
ಬೆಂಗಳೂರು: ಕೇರಳದಲ್ಲಿ 13 ಜನರ ಸಾವಿಗೆ ಕಾರಣವಾಗಿರುವ ಮಾರಣಾಂತಿಕ ನಿಪಾಹ್ ವೈರಾಣು ಸೋಂಕು ರಾಜಧಾನಿ ಬೆಂಗಳೂರಿಗೆ ವಕ್ಕರಿಸಿರುವ ಕುರಿತು ಆತಂಕ ವ್ಯಕ್ತವಾಗಿದೆ.
ರಾಜಧಾನಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಮೂವರು ದಾದಿಯರಿಗೆ ಸೋಂಕು ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗುತ್ತಿದ್ದು, ಮೂವರನ್ನೂ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ ಪ್ರಸ್ತುತ ಶಂಕಿತ ಸೋಂಕಿಗೆ ಒಳಗಾಗಿರುವ ಮೂವರೂ ದಾದಿಯರು ಕೇರಳ ಮೂಲದವರಾಗಿದ್ದು, ಇತ್ತೀಚೆಗಷ್ಟೇ ಅವರು 15 ದಿನಗಳ ರಜೆ ಮೇಲೆ ಕೇರಳಕ್ಕೆ ಹೋಗಿ ಬಂದಿದ್ದರು ಎಂದು ತಿಳಿದುಬಂದಿದೆ.
ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈಗಾಗಲೇ ಅವರ ರಕ್ತ ಹಾಗೂ ಗಂಟಲಿನ ದ್ರವವನ್ನು ಸಂಗ್ರಹಿಸಿ ಮಣಿಪಾಲದ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ 15 ದಿನಗಳ ಹಿಂದೆ ಕೇರಳಕ್ಕೆ ಹೋಗಿ ಬಂದಿದ್ದ ಇವರಲ್ಲಿ ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಸದ್ಯ ಮಣಿಪಾಲ್‌ ಆಸ್ಪತ್ರೆಯ  ತುರ್ತು ನಿಗಾ ಘಟಕದಲ್ಲಿರಿಸಿ ಪ್ರತ್ಯೇಕವಾಗಿ ಚಿಕಿತ್ಸೆ ಮುಂದುವರೆಸಲಾಗಿದೆ. ಪ್ರಯೋಗಾಲಯದಿಂದ ವರದಿ ಬಂದ ನಂತರ ನಿಫಾ ಸೋಂಕು ಇದೆಯೋ ಇಲ್ಲವೋ ಎಂಬು ಖಚಿತವಾಗಲಿದೆ. 
SCROLL FOR NEXT