ಸಂಗ್ರಹ ಚಿತ್ರ್ 
ರಾಜ್ಯ

ಐವಿಎಫ್ ಕೇಂದ್ರದಿಂದ ವಂಚನೆ: 3 ಲಕ್ಷ ರೂ. ಪರಿಹಾರ ನೀಡಲು ಗ್ರಾಹಕ ನ್ಯಾಯಮಂಡಳಿ ಆದೇಶ

ಬೆಂಗಳೂರಿನ ಇನ್-ವಿಟ್ರೋ ಫರ್ಟಿಲಿಟಿ (ಐವಿಎಫ್) ಕೇಂದ್ರವೊಂದು ತಾನು ಪಡೆದ ಶುಲ್ಕಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸದ ಕಾರಣ ವ್ಯಕ್ತಿಯೊಬ್ಬನಿಗೆ ಭಾರೀ ಪ್ರಮಾಣದ ದಂಡ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು: ಬೆಂಗಳೂರಿನ ಇನ್-ವಿಟ್ರೋ ಫರ್ಟಿಲಿಟಿ (ಐವಿಎಫ್)  ಕೇಂದ್ರವೊಂದು ತಾನು ಪಡೆದ ಶುಲ್ಕಕ್ಕೆ ಸರಿಯಾಗಿ ಚಿಕಿತ್ಸೆ ಒದಗಿಸದ ಕಾರಣ ವ್ಯಕ್ತಿಯೊಬ್ಬನಿಗೆ ಭಾರೀ ಪ್ರಮಾಣದ ಪರಿಹಾರ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಮೈಸೂರು ಮೂಲದ 40 ವರ್ಷದವನಾದ ವ್ಯಕ್ತಿ ಅವಿವಾಹಿತನಿದ್ದು ತಾನು ತನ್ನ ತಾಯಿ ಜೀವಿತ ಆಸೆಯನ್ನು ನೆರವೇರಿಸುವುದಕ್ಕಾಗಿ ಭಾಡಿಗೆ ತಾಯಿಯ ಮೂಲಕ ಮಗುವನ್ನು ಹೊಂದಲು ಬಯಸಿದ್ದನು.  ಆದರೆ ಐವಿಎಫ್ ಸೆಂಟರ್ ನವರ ನಿರ್ಲಕ್ಷದಿಂದ ಅದು ಸಾಧ್ಯವಾಗದೆ ಹೋದ ಕಾರಣ ಆತ ಕಾನೂನಿನ ಮೊರೆ ಹೋಗಿದ್ದರು. 
ನಾಲ್ಕನೇ  ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಮಂಡಳಿ ಅಧ್ಯಕ್ಷ ಎಸ್.ಎಲ್. ಪಾಟೀಲ್ ಮತ್ತು ಸದಸ್ಯ ಟಿ.ಎನ್. ರೂಪಾ ವ್ಯಕ್ತಿಯ ಸಮಸ್ಯೆಯನ್ನು ಆಲಿಸಿ ಡಾ. ರಮಾ ಅವರ ಐವಿಎಫ್ ಸೆಂಟರ್,  3 ಲಕ್ಷ ರೂ. ಪರಿಹಾರವಾಗಿ ನೀಡಲು ಆದೇಶಿಸಿದ್ದಾರೆ.
ಮೈಸೂರಿನಲ್ಲಿರುವ ಎನ್.ಆರ್ ಮೊಹಲ್ಲದ ನಿವಾಸಿಗಳಾದ  ಮಾರ್ಟಿನ್ ಸುಜಯ್ ಮತ್ತು ಅವರ ತಾಯಿ ಆರ್.ಎಸ್.ಸೂರ್ಯಪ್ರಭಾ ಪಾವತಿಸಿದ್ದ ಜೊತೆಗೆ 5,000 ದಾವೆಗಳ ವೆಚ್ಚವನ್ನು ಸಹ ಐವಿಎಫ್ ಕೇಂದ್ರ ಭರಿಸಬೇಕಿದೆ. ಅಲ್ಲದೆ ವರ್ಷಕ್ಕೆ 10% ನಷ್ಟು ಬಡ್ಡಿದರದ ಆಧಾರದಲ್ಲಿ ಪರಿಹಾರ ಮೊತ್ತ ವಿರತಿಸಬೇಕಾಗಿದೆ.
ಸೂರ್ಯಪ್ರಭಾ ಹಾಗೂ ಮಾರ್ಟಿನ್ ರಮಾ ಅವರ ಐವಿಎಫ್ ಸೆಂಟರ್ ಗೆ ತೆರಳಿದಾಗ ಅವರು ಬಾಡಿಗೆ ತಾಂಯ್ತನ ಅಥವಾ ಐವಿಎಫ್ ಮೂಲಕ ಮಗುವನ್ನು ಹೊಂದುವುದೆಂದರೆ ನೀರು ಕುಡಿದಷ್ಟು ಸುಲಭವೆಂದು ನಂಬಿಸಿದ್ದರು.ಸೂರ್ಯಪ್ರಭಾ ತಾವು ಸ್ಥಳೀಯ ಪತ್ರಿಕೆಯೊಂದರ ಜಾಹೀರಾತನ್ನು ನೋಡಿದ ಬಳಿಕ ಕೇಂದ್ರದ ಸಂಪರ್ಕ ಮಾಡೀದ್ದರು.ಇದಕ್ಕಾಗಿ ಅವರಿಗೆ  7 ಲಕ್ಷ ರೂಪಾಯಿಗಳನ್ನು ಪಾವತಿಸಲು ಕೇಳಲಾಯಿತು ಅಲ್ಲದೆ ಅವಳಿ ಮಕ್ಕಳಿಗಾಗಿ  1.5 ಲಕ್ಷ ರೂ. ಹೆಚ್ಚುವರಿ ಬೇಡಿಕೆ ಒಡ್ಡಲಾಗಿದೆ.
2016 ರ ಆಗಸ್ಟ್ 19 ರಂದು ಮಾರ್ಟಿನ್ ಮತ್ತು ಸೂರ್ಯಪ್ರಭಾ  2.25 ಲಕ್ಷ ರೂ. ಪಾವತಿಸಿದ್ದಾರೆ. ಅಲ್ಲದೆ ಏಪ್ರಿಲ್ 25, 2017 ರಂದು 2.5 ಲಕ್ಷ ರೂ ಪಾವತಿ ಮಾಡಿದ್ದಾರೆ. ಆ ಬಳಿಕ ಐವಿಎಫ್ ಸೆಂಟರ್ ಕಡೆಯಿಂದ ಚಿಕಿತ್ಸೆ ಕಾರ್ಯವಿಧಾನದ ಬಗೆಗೆ ಸೂಕ್ತ ಪ್ರತಿಕ್ರಿಯೆ ಸಿಗದ ಕಾರಣ ಅವರು ಗ್ರಾಹಕ ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!