ಗದಗ: ಹಲವು ವರ್ಷಗಳಿಂದಲೂ ದಂಡುಪಾಳ್ಯ ಗ್ಯಾಂಗ್ ನಂತೆ ದರೋಡೆ ಮಾಡಿಕೊಂಡು ಕೃತ್ಯವೆಸಗುತ್ತಿದ್ದ, ಮಹಿಳಿ ಸೇರಿ ಆರು ಪಾತಕಿಗಳ ಗುಂಪನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದರೋಡೆ ನಡೆಸಲು ತಂತ್ರ ರೂಪಿಸುತ್ತಿದ್ದ ಈ ನಟೋರಿಯಸ್ ಗ್ಯಾಂಗ್ ನ್ನು ಬೆಟಗೇರಿಯ ಕನಗಿನಹಲ್ ರಸ್ತೆಯಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬೆಟಗೇರಿಯಲ್ಲಿ 2017 ಮತ್ತದು 2018ರಲ್ಲಿ ಒಂದೇ ಮಾದರಿಯಲ್ಲಿ ಕೊಲೆ, ದರೋಡೆ ನಡೆದಿದ್ದವು. ಆರೋಪಿಗಳ ಸುಳಿವು ಹಿಡಿದು ಬೆನ್ನು ಹತ್ತಿದಾಗ ಒಂದೊಂದೇ ಪ್ರಕರಣಗಳು ಬಯಲಾದವು. ಆರೋಪಿಗಳನ್ನು ಶಿವಪ್ಪ ಹರಣಶಿಕಾರಿ, ಚಂದ್ರಪ್ಪ ಶಿವಪ್ಪ ಹರಣಸಿಕಾರಿ, ಉಮೇಶ ಅರ್ಜುನ ಹರಣಶಿಕಾರಿ, ಮಾರುತಿ ಚೆನ್ನಪ್ಪ ರೋಣ, ಮಣ್ಣಪ್ಪ ಪುತನಪ್ಪ ರೋಣ, ಮೋಹನ ಮಾರುತಿ ರೋಣ ಎಂದು ಗುರ್ತಿಸಲಾಗಿದೆ.
ಸೆಟ್ಲ್'ಮೆಂಟ್'ನ ಮೋಹನ ಮಾರುತಿ ರೋಣ ಹಾಗೂ ಪತ್ನಿ ಬಸಮ್ಮ ಮೋಹನ ರೋಣ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ಆರೋಪಿಗಳು ತಮ್ಮತ ಬಳಿಯೇ ಶಸ್ತ್ರಾಸ್ತ್ರಗಳನ್ನಿಟ್ಟುಕೊಂಡು ರಸ್ತೆಗಳಲ್ಲಿ ಓಡಾಡುತ್ತಿದ್ದರು. ವೃತ್ತಿಪರರಂತೆ ಕೃತ್ಯಗಳನ್ನು ಎಸಗುತ್ತಿದ್ದರು. ರಸ್ತೆಗಳಲ್ಲಿ ಓಡಾಡುವ ಈ ಗುಂಪು ಮನೆಗಳ ಕುರಿತಂತೆ ಮಾಹಿತಿಗಳನ್ನು ಕಲೆ ಹಾಗುತ್ತಿದ್ದರು. ಮನೆಯಲ್ಲಿ ಒಂಟಿ ಮಹಿಳೆ ಹಾಗೂ ವೃದ್ಧ ಮಹಿಳೆ ಇರುವುದು ಕಂಡುಬಂದ ಕೂಡಲೇ ಕೃತ್ಯವೆಸಗುತ್ತಿದ್ದರು.
ಸಾಮಾನ್ಯವಾಗಿ ಈ ಗುಂಪು ಮಧ್ಯರಾತ್ರಿ ವೇಳೆಗೆ ದಾಳಿ ಮಾಡುತ್ತಿತ್ತು. ಮೊದಲು ಬಸಣ್ಣ ರೋಣ ಬಾಗಿಲು ತಟ್ಟುತ್ತಿದ್ದಳು. ಒಮ್ಮೆ ಬಾಗಿಲು ತೆಗೆದ ಕೂಡಲೇ ಮನೆಯ ಮೇಲೆ ದಾಳಿ ಮಾಡುತ್ತಿದ್ದರು. ಬಾಗಿಲು ತೆಗೆದ ಬಳಿಕ ಇತರರಿಗೆ ಬಸಮ್ಮ ಸಿಗ್ನಲ್ ನೀಡುತ್ತಿದ್ದಳು. ಬಳಿಕ ಮನೆಗೆ ನುಗ್ಗುತ್ತಿದ್ದ ಮಾರುತಿ ಹತ್ಯೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.