ರಾಜ್ಯ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಿಮಿನಲ್ ಕೇಸ್: ಹೈಕೋರ್ಟ್ ಮಹತ್ವದ ಆದೇಶ

Raghavendra Adiga
ಬೆಂಗಳೂರು: ಸಾರ್ವಜನಿಉಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ೦ಗಳಿಗೆ ಹೈಕೋರ್ಟ್ ಆದೇಶಿಸಿದೆ.
ಸೋಮವಾರ ಕಸದ ಸಮಸ್ಯೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎನ್. ಸುಜಾತಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿಎ.
"ಬೆಂಗಳೂರನ್ನು  ಸ್ವಚ್ಛಗೊಳಿಸಲು ಬಿಬಿಎಂಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.ಕಸದ ವಿಲೇವಾರಿಉ ಭರದಿಂದ ಸಾಗಿದೆ. ಹಾಗೆ ಸ್ವಚ್ಚ ಮಾಡಿದ ಜಾಗದಲ್ಲಿ ಪೌರ ಕಾರ್ಮಿಕರು ರಂಗೋಲಿ ಹಾಕುತ್ತಿದ್ದಾರೆ. ಆದರೆ ಕೆಲವರು ರಂಗೋಲಿಯ ಮೇಲೆಯೂ ಕಸ ಎಸೆಯುತ್ತಿದ್ದಾರೆ" ಎಂದು ಬಿಬಿಎಂಪಿ ವಕೀಲ ಡಿ.ಎನ್. ನಂಜುಂಡ ರೆಡ್ಡಿ ಹೇಳಿದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ಎಲ್ಲಾದರಲ್ಲಿ ಕಸ ಚೆಲ್ಲುವವರ ವಿರುದ್ಧ ಪೌರಾಡಳಿತ ಕಾಯ್ದೆಯ ಅನುಸಾರ ಕ್ರಮ ತೆಗೆದುಕೊಳ್ಳಿ. ಈ ಕುರಿತು ಬಿಬಿಎಂಪಿ ಸಭೆಗಳಲ್ಲಿ ಚರ್ಚಿಸಿ. 
"ಸಾರ್ವಜನಿಕ ಸ್ಥಳದಲ್ಲಿ ಕಸ ಚೆಲ್ಲುವವರ ವಿರುದ್ಧ ತೆಗೆದುಕೊಂಡ ಕ್ರಮದ ಕುರಿತು ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಬೇಕು. ಅಂಕಿ ಅಂಶಗಳನ್ನು ನೀಡಬೇಕು." ನ್ಯಾಯಾಲಯ ಹೇಳಿದೆ.
ಅರ್ಜಿಯ ಮುಂದಿನ ವಿಚಾರಣೆ ಡಿಸೆಂಬರ್ 15ಕ್ಕೆ ನಡೆಯಲಿದೆ.
SCROLL FOR NEXT