ಹೊತ್ತಿ ಉರಿಯುತ್ತಿರುವ ಬಾವಿ ನೀರು 
ರಾಜ್ಯ

ದಕ್ಷಿಣ ಕನ್ನಡ: ಬೆಂಕಿ ಹಚ್ಚಿದರೆ ನೀರು ಹೊತ್ತಿ ಉರಿಯುತ್ತೆ; 2 ಬಾವಿಗಳಲ್ಲಿ ಪೆಟ್ರೋಲ್ ಪತ್ತೆ!

ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಕಂಡು ಬಂದಿದೆ. ಹೀಗಾಗಿ ಈ ರಹಸ್ಯವನ್ನು ಬೇಧಿಸಲು ಪೊಲೀಸರು ...

ದಕ್ಷಿಣ ಕನ್ನಡ: ಬೆಂಕಿ ಹಚ್ಚಿದರೆ ಬಾವಿ ನೀರು ಉರಿಯುವ ವಿಲಕ್ಷಣ ಘಟನೆ ಮಂಗಳೂರಿನ ದೇರಳಕಟ್ಟೆಯಲ್ಲಿ ಕಂಡು ಬಂದಿದೆ. ಹೀಗಾಗಿ  ಈ ರಹಸ್ಯವನ್ನು ಬೇಧಿಸಲು ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಮುಂದಾಗಿದ್ದಾರೆ.
ಉಸ್ಮಾನ್ ಎಂಬುವರಿಗೆ ಸೇರಿದ ಬಾವಿಯಲ್ಲಿ ಪೆಟ್ರೋಲ್ ಅಂಶ ಪತ್ತೆಯಾಗಿದೆ. ಮಂಗಳವಾರ ರಾತ್ರಿ ಬಾವಿಯನ್ನು ಸ್ವಚ್ಚಗೊಳಿಸಿದ ನಂತರ ಅದರ ನೀರಿನಿಂದ ವಾಸನೆ ಬರುತ್ತಿತ್ತು, ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಕಲುಷಿತ ನೀರು ಇದರಲ್ಲಿ ಸೇರಿದೆ ಎಂದು ಆರೋಪಿಸಲಾಗುತ್ತಿತ್ತು, ಆದರೆ ಮಂಗಳವಾರ ಬಾವಿಯನ್ನು ಸ್ವಚ್ಚಗೊಳಿಸಿದ ನಂತರ ಅದರಿಂದ ಬರುವ ವಾಸನೆ ಸಹಿಸಲು ಅಸಾಧ್ಯವಾಗಿತ್ತು... ಜೊತೆಗೆ ಕಣ್ಣಲ್ಲಿ ನೀರು ಬರುತ್ತಿತ್ತು ಎಂದು ಉಸ್ಮಾನ್ ಹೇಳಿದ್ದಾರೆ.
ಈ ವಿಷಯವನ್ನು ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಿದಾಗ ಅವರು ನಿರ್ಲ್ಯಕ್ಷ ವಹಿಸಿದ್ದಾರೆ,. ಹೀಗಾಗಿ ಉಸ್ಮಾನ್ ಬಾವಿ ನೀರನ್ನು ಪಾತ್ರೆಗೆ ಹಾಕಿ ಅದನ್ನು ಬೆಂಕಿ ಕಡ್ಡಿಯಿಂದ ಹಚ್ಚಿದಾಗ ಅದು ಹೊತ್ತಿ ಉರಿದಿದೆ. ಇದಾದ ನಂತರ ಸ್ಥಳಕ್ಕೆ ಬಂದ ಅಧಿಕಾರಿಗಳು ಅದನ್ನು ಪರಿಶೀಲಿಸಲು ಮಾದರಿ ತೆಗೆದುಕೊಂಡು ಹೋಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬಾವಿಗಿಲಿದು ಪರಿಶೀಲಿಸಿದ್ದಾರೆ. 
ಬಾವಿಯ ಇರುವ ಸ್ಥಳದಿಂದ 50 ಮೀಟರ್ ದೂರ ಇರುವ ಇಂಡಿಯನ್ ಆಯಿಲ್ ಕಂಪನಿ ಪ್ರತಿನಿಧಿಗಳು ಗುರುವಾರ ಪೆಟ್ರೋಲ್ ಬಂಕ್ ಮುಚ್ಚಿದ್ದಾರೆ, ಪೆಟ್ರೋಲ್ ಕೊರತೆ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಇಲ್ಲಿ ಪೆಟ್ರೋಲ್ ಪಂಪ್ ಆರಂಭಿಸಿದ್ದಕ್ಕೆ 2013 ರಿಂದಲು ಇಲ್ಲಿನ ಸ್ಥಳೀಯರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ, ಅಷ್ಟು ದೂರವಿದ್ದರೂ ಬಾವಿಗೆ ಹೇಗೆ ಪೆಟ್ರೋಲ್ ತಲುಪಿತು ಎಂಬುದು ಆಶ್ಚರ್ಯ ಮೂಡಿಸುತ್ತಿದೆ ಎಂದು ಮಂಗಳೂರು ಉತ್ತರ ವಿಭಾಗದ ಡಿಸಿಪಿ ರಾಮ ರಾವ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ