ಕಲಬುರಗಿ: ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಮತ್ತು ಆತನ ಪುತ್ರ ರಾಜೇಶ್ ಗುತ್ತೇದಾರ್ ವಿರುದ್ಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪರ್ಯಾಯ ಎಂಎಸ್ ಡಬ್ಲ್ಯೂ ಕಾಲೇಜಿನ ಪ್ರಾಂಶುಪಾಲ ಮಹೇಶ್ ರಾಥೋಡ್ ದೂರು ದಾಖಲಿಸಿದ್ದಾರೆ.
ಮಹೇಶ್ ರಾಥೋಡ್ ಗೆ ಜೀವ ಬೆದರಿಕೆ ಹಾಕಿರುವ ಗುತ್ತೇದಾರ್ ಮತ್ತು ಆತನ ಪುತ್ರ ಅವರ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿರುವುದಾಗಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡ್ ಲೋಕೇಶ್ ಹೇಳಿದ್ದಾರೆ,
ಹಲ್ಲೆ ಮತ್ತು ಜಾತಿ ನಿಂದನೆ ದಾಖಲಾಗಿದ್ದು ಆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಲೋಕೇಶ್ ತಿಳಿಸಿದ್ದಾರೆ, ಗುತ್ತೇದಾರ್ ಮತ್ತು ಆತನ ಪುತ್ರನಿಗೆ ನೊಟೀಸ್ ನೀಡಿದ್ದು, ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ, ಆದರೆ ತಮ್ಮ ವಿರುದ್ಧ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ರಾಥೋಡ್ ಅವರು ತಮ್ಮ ಕಾರನ್ನು ತಮ್ಮ ಮನೆಯ ಹತ್ತಿರದ ರಸ್ತೆಗೆ ಸಮೀಪವಾಗಿ ಪಾರ್ಕ್ ಮಾಡಿದ್ದರು. ಹೀಗಾಗಿ ಮನೆಯ ಒಳಗೆ ಪ್ರವೇಶಿಸುವುದು ಕಷ್ಟವಾಗಿತ್ತು.
ಕಾಲೇಜು ವಿದ್ಯಾರ್ಥಿಗಳು ಕೂಡ ತಮ್ಮ ಬೈಕ್ ಅನ್ನು ರಸ್ತೆಯಲ್ಲಿ ನಿಲ್ಲಿಸಿದ್ದರು. ಸಹಜವಾದ ಪಾರ್ಕಿಂಗ್ ನಿಯಮದ ಪ್ರಕಾರ ನಿಲ್ಲಿಸಿರಲಿಲ್ಲ, ಹೀಗಾಗಿ ರಸ್ತೆ ಬ್ಲಾಕ್ ಆಗಿತ್ತು. ಈ ವಿಷಯವಾಗಿ ನಡೆದ ವಾಗ್ವಾದ ಅತಿರೇಖಕ್ಕೆ ಹೋಗಿತ್ತು. ಹೀಗಾಗಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
ತಮ್ಮ ಆರೋಪಕ್ಕೆ ಬೇಕಾದ ಸಾಕ್ಷ್ಯಾಧಾರಗಳನ್ನು ರಾಥೋಡ್ ಇನ್ನೂ ಒದಗಿಸಿಲ್ಲ, ಪ್ರಕರಣ ನಡೆದ ವೇಳೆ ಸ್ಥಳದಲ್ಲಿದ್ದ ಮಹಿಳೆಯೊಬ್ಬರು ರಾಥೋಡ್ ವಿರುದ್ಧ ದೂರು ದಾಖಲಿಸಿದ್ದಾರೆ, ಇಬ್ಬರ ನಡುವಿನ ಜಗಳವನ್ನು ಸಮಾಧಾನ ಪಡಿಸಲು ಹೋದಾಗ ರಾಥೋಡ್ ಆಕೆಯನ್ನು ತಳ್ಳಿದ್ದರು, ಅದರಿಂದ ಆಕೆ ಕೆಳಗೆ ಬಿದ್ದರು, ಹೀಗಾಗಿ ತನಿಖೆ ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics