ರಾಜ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ ದಾಳಿ

Manjula VN
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಪಾಲುದಾರಿಕೆ ಹೊಂದಿರುವ ಪಬ್ ವೊಂದರ ಮೇಲೆ ಸಿಸಿಬಿ ಹಾಗೂ ಅಬಕಾರಿ ಅಧಿಕಾರಿಗಳು ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. 
ನಗರದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿರುವ ಪ್ರತಿಷ್ಟಿತ 'ಲಿ ಮೆರಿಡಿಯನ್ ಹೋಟೆಲ್'ನಲ್ಲಿ ಸ್ಮಿತಾ ಅವರು ಶುಗರ್ ಫ್ಯಾಕ್ಟರಿ ಎಂಬ ಹೆಸರಿನಲ್ಲಿ ಸ್ಮಿತಾ ಪಬ್ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ. 
ಹೋಟೆಲ್ ನಲ್ಲಿ ಅವಧಿ ಮೀರಿ ಪಬ್ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕಳೆದ 15 ದಿನಗಳ ಹಿಂದೆ ಸಿಸಿಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಂಡು ಬಂದಿರಲಿಲ್ಲ. ಆದರೆ, ಪಬ್ ದಾಖಲಾತಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅಬಕಾರಿ ಕಾನೂನು ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ಪ್ರಕರಣವನ್ನು ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. 
ಸಿಸಿಬಿ ಅಧಿಕಾರಿಗಳ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಪಲ್ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಪಬ್ ನಡೆಸಲು ಹೋಟೆಲ್ ಗೆ ಪರವಾನಗಿ ನೀಡಲಾಗಿತ್ತು. ಆದರೆ, ಹೋಟೆಲ್ ಆಡಳಿತ ಮಂಡಳಿ ಸೋಷಿಯನ್ ನೆಟ್ ಹಾಸ್ಟಿಟಾಲಿಟಿ ಎಂಬ ಸಂಸ್ಥೆಯೊಂದಕ್ಕೆ ಪಬ್ ನಡೆಸಲು ಬೋಗ್ಯಕ್ಕೆ ನೀಡಿದ್ದು ಕಂಡು ಬಂದಿತ್ತು. ಪರವಾನಗಿ ದುರುಪಯೋಗ ಪಡಿಸಿಸಿಕೊಂಡು ಅಬಕಾರಿ ನಿಯಮ ಉಲ್ಲಂಘಿಸಿರುವ ಕುರಿತು ಹೋಟೆಲ್ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿ, ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಉತ್ತರ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ರಾಕೇಶ್ ಸಿದ್ದರಾಮಯ್ಯ ಅವರ ಸ್ನೇಹಿತ ರೋಹನ್ ಗೌಡ ಕೂಡ ಪಬ್'ನ ಪಾಲುದಾರರೆಂದು ಹೇಳಲಾಗುತ್ತಿದ್ದು, ರಾಕೇಶ್ ಅವರು ನಿಧನ ಹೊಂದಿದ ಬಳಿಕ ಅವರ ಪತ್ನಿ ಸ್ಮಿತಾ ಅವರು ಪಾಲುದಾರಿಕೆಯನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. 
SCROLL FOR NEXT