ರಾಜ್ಯ

ಹಂಪಿ: ವಿದೇಶಿ ಪ್ರವಾಸಿಗರ ಅಗೌರವದ ವರ್ತನೆಗೆ ಸ್ಥಳೀಯರ ಆಕ್ರೋಶ!

Shilpa D
ಬಳ್ಳಾರಿ: ವಿಜಯ ವಿಠಲ ದೇವಾಲಯದ ಸಾಲು ಮಂಟಪದ  ಕಂಬಗಳ ಮೇಲೆ ವಿದೇಶಿ ಪ್ರವಾಸಿಗರು ನಿಂತುಕೊಂಡು ಫೋಟೋ ತೆಗೆದುಕೊಂಡಿರುವುದು ಸ್ಥಳೀಯರ ಕ್ರೋಧಕ್ಕೆ ಕಾರಣವಾಗಿದೆ. ಹೀಗಾಗಿ ಪ್ರಾಚ್ಯ ಸಂಶೋಧನಾ ಇಲಾಖೆ  ಪ್ರವಾಸಿಗರ ಇಂತಹ ಅಗೌರವದ ವರ್ತನೆಯನ್ನು ತಡೆಗಟ್ಟಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ, ಭಾರತೀಯ ಪ್ರವಾಸಿಗರು ಸದ್ಯ ಮುಂಚೂಣಿಯಲ್ಲಿದ್ದಾರೆ, ಆದರೆ ವಿದೇಶಿ ಪ್ರವಾಸಿಗರು ಈ ರೀತಿಯ ವರ್ತನೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಪರಂಪರೆಯ ತಾಣವನ್ನು ಪುನರುಜ್ಜೀವನಗೊಳಿಸಲು ಪ್ರಾಚ್ಯ ಸಂಶೋಧನೆ ಇಲಾಖೆ ಪ್ರಯತ್ನಿಸುತ್ತಿದೆ. ಉಳಿದಿರುವ  ಕೆಲವು ಸ್ಮಾರಕಗಳನ್ನು ರಕ್ಷಿಸುವ ಕೆಲಸವಾಗಬೇಕು, ಅವುಗಳಲ್ಲಿ ವಿಜಯ ವಿಠಲ ದೇವಾಲಯ ಕೂಡ ಒಂದು, 
ದುರಾದೃಷ್ಟ ವಶಾತ್ ಇಲ್ಲಿ ಫೋಟೋ ತೆಗೆಸಿಕೊಳ್ಳುವುದೇ ಒಂದು ಟ್ರೆಂಡ್ ಆಗಿದೆ, ಇಲ್ಲಿನ ಕಂಬಗಳು ಒಂದಕ್ಕೊಂದು ಸಮೀಪ ಇವೆ,ಯಾವುದೇ ಆಧಾರವಿಲ್ಲದೆ ನಿಂತಿವೆ,ಜೊತೆಗೆ ಒಂದಕ್ಕೊಂದು ಅಕ್ಕ ಪಕ್ಕ ಇರುವುದರಿಂದ, ಒಂದು ಕಂಬ ಬಿದ್ದರೆ ಎಲ್ಲಾ ಕಂಬಗಳು ಉರುಳಿ ಬೀಳುವ ಸಾಧ್ಯತೆ ಇದೆ. ಜೊತೆಗೆ ಅದರ ಮೇಲೆ ನಿಂತವರ ಪ್ರಾಣಕ್ಕೂ ಸಂಚಕಾರ ಎಂದು ಕಮಲಾಪುರದ ನಿವಾಸಿ ಶರಣಪ್ಪ ಎಂಬುವರು ತಿಳಿಸಿದ್ದಾರೆ.
SCROLL FOR NEXT