ರಾಜ್ಯ

ಗದಗ: ಎಟಿಎಂ ಕಾರ್ಡ್ ಗಳನ್ನಿರಿಸಿ 'ಧನಲಕ್ಷ್ಮಿ' ಪೂಜೆ ಮಾಡಿದ ಮೊಬೈಲ್ ಅಂಗಡಿ ಮಾಲೀಕ!

Shilpa D
ಗದಗ: ದೀಪಾವಳಿ ಅಂಗವಾಗಿ ಮಾಡುವ ಧನಲಕ್ಷ್ಮಿ ಪೂಜೆಗಾಗಿ ಮೊಬೈಲ್ ಅಂಗಡಿ ಮಾಲೀಕನೊಬ್ಬ, ಹಣದ ಬದಲಿಗೆ ಎಟಿಎಂ ಕಾರ್ಡ್ ಗಳನ್ನು ಇರಿಸಿ ಪೂಜೆ ಮಾಡಿದ್ದಾರೆ.
ಗದಗ  ಬಸ್ ನಿಲ್ದಾಣದ ಬಳಿಯಿರುವ ಶ್ರೀನಿವಾಸ ಮೊಬೈಲ್ ಅಂಗಡಿ ಮಾಲೀಕ, ಮೇಘರಾಜ್ ಮುದರೆಡ್ಡಿ, ಹಣದ ಬದಲು ತಮ್ಮ ಕುಟುಂಬಸ್ಥರ 15 ಎಟಿಎಂ ಕಾರ್ಡಗಳನ್ನು ತಟ್ಟೆಯಲ್ಲಿರಿಸಿ ಪೂಜೆ ಮಾಡಿದ್ದಾರೆ.
ನಗದು ರಹಿತ ಪ್ರಪಂಚದಲ್ಲಿ ನಾನು ಏನಾದರೊಂದು ವಿಶಿಷ್ಟವಾದದ್ದನ್ನು ಮಾಡಬೇಕೆಂದು ಬಯಸಿದೆ, ಒಮ್ಮ ದೇವರ ಮುಂದೆ ಹಣ ವಿರಿಸಿ ಪೂಜೆ ಮಾಡು ಸಂಪ್ರದಾಯ ಮುಗಿದಿದೆ. ಹೀಗೆನಿದ್ದರೂ ನಮ್ಮೆಲ್ಲಾ ಹಣ ಬ್ಯಾಂಕ್ ನ ಕಾರ್ಡ್ ಗಳಲ್ಲಿರುತ್ತದೆ .ಹೀಗಾಗಿ ಎಷ್ಟು ಹಣ ಬೇಕು ಎಂಬದನ್ನು ದೇವರ್ ನಿರ್ಧರಿಸಲಿ ಎಂದು ಮೇಘರಾಜ್ ಮುದರೆಡ್ಡಿ ಹೇಳಿದ್ದಾರೆ.
ಇನ್ನೂ ಪೂಜೆಯಲ್ಲಿ ಭಾಗಿಯಾಗಿದ್ದ ನನ್ನ ಹಲವು ಸ್ನೇಹಿತರು ಪೂಜಾರಿಗೆ ಹಣವನ್ನು ಆನ್ ಲೈನ್ ನಲ್ಲಿ ವರ್ಗಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹಣ ಹಾಗೂ ಸಂಪತ್ತಾಗಿವೆ. ಸಂಪ್ರದಾಯದಂತೆ ಪೂಜೆ ಮಾಡಲು ನಾವು ನಮ್ಮ ಕಾರ್ಡ್ ಗಳನ್ನು ಮೇಘರಾಜ್ ಗೆ ನೀಡಿದ್ದೇವೆ, ನಮ್ಮ ಈ ಐಡಿಯಾ ಹಲವು ಮಂದಿಯನ್ನು ಆಕರ್ಷಿಸಿದೆ, ಹಿಗಾಗಿ ನಾವು ಆಹ್ವಾನ ನೀಡಿದಿದ್ದರು ಅವರೆಲ್ಲಾ ಹಾಜರಾಗಿದ್ದಾರೆ.
ಧನಲಕ್ಷ್ಮಿ ಪೂಜೆ ವೇಳೆ ಹಣ, ನಾಣ್ಯ,ಚಿನ್ನ, ಬೆಳ್ಳಿ ಇಟ್ಟು ಪೂಜೆ ಮಾಡುವುದು ವಾಡಿಕೆ,ಸದ್ಯ ಪ್ಲಾಸ್ಟಿಕ್ ಹಣ ಇಡುವುದು ಹೊಸ ಟ್ರೆಂಡ್ ಆಗಿದೆ, ಇದರಿದಂದ ಸಂಪ್ರದಾಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಮೇಘರಾಜನ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
SCROLL FOR NEXT