ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ: ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಎಫ್ ಬಿ ಪೇಜ್, ಪೋಸ್ಟ್ ಗೆ ಸಮರ್ಥನೆ! 
ರಾಜ್ಯ

ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆ: ವಿಕೃತಿ ಮೆರೆದ ಮಂಗಳೂರು ಮುಸ್ಲಿಂ ಎಫ್ ಬಿ ಪೇಜ್, ಪೋಸ್ಟ್ ಗೆ ಸಮರ್ಥನೆ!

ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆಗೆ ರಾಜಕೀಯ, ಸೈದ್ಧಾಂತಿಕ ವಿರೋಧಿಗಳೂ ಸಂತಾಪ ಸೂಚಿಸುತ್ತಿದ್ದರೆ, ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಂ ಪೇಜ್ ಅನಂತ್ ಕುಮಾರ್ ಅವರ ವಿರುದ್ಧ

ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅಗಲಿಕೆಗೆ ರಾಜಕೀಯ, ಸೈದ್ಧಾಂತಿಕ ವಿರೋಧಿಗಳೂ ಸಂತಾಪ ಸೂಚಿಸುತ್ತಿದ್ದರೆ, ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಂ ಪೇಜ್ ಅನಂತ್ ಕುಮಾರ್ ಅವರ ವಿರುದ್ಧ ಅವಹೇಳನಕಾರಿ ಬರಹ ಪೋಸ್ಟ್ ಮಾಡಿ ವಿಕೃತಿ ಮೆರೆದಿದೆ. 
ಜಾತಿ ರಾಜಕಾರಣ ಕುತಂತ್ರಿ ಬ್ರಾಹ್ಮಣ ಅನಂತ ಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬೀಜ ಬಿತ್ತಬೇಡ ಎಂದು ಫೇಸ್ ಬುಕ್ ಪೇಜ್ ನಲ್ಲಿ ಬರೆಯಲಾಗಿದ್ದು, ಜಾತಿ ಜಾತಿ ರಾಮ ರಾಮ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತ್ ಕುಮಾರ್ ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರಬೇಡ ಎಂದೂ ಫೋಟೋ ಮೇಲೆ ಹಾಕಲಾಗಿದೆ. 
ಅನಂತ್ ಕುಮಾರ್ ವಿರುದ್ಧ ಅವಹೇಳನಕಾರಿ ಬರಹ ಬರೆಯುವುದೂ ಅಲ್ಲದೇ ಮಂಗಳೂರು  ಮುಸ್ಲಿಂ ಪೇಜ್ ನ ಅಡ್ಮಿನ್ ತಮ್ಮ ಪೋಸ್ಟ್ ನ್ನು ಸಮರ್ಥಿಸಿಕೊಂಡಿದ್ದು,  'ಅನಂತ್ ಕುಮಾರ್ ಸಾವಿನ ಹಿಂದೆ ದುಃಖ ಪಡುವ ಅವಶ್ಯಕತೆ ಇಲ್ಲ ಸತ್ತಿದ್ದರಿಂದ ದೇಶಕ್ಕೆ ಒಳ್ಳೆಯದಾಗಲಿದೆ. ಏನು ಗೊತ್ತಿಲ್ಲದ ಅಮಾಯಕರಿಗೆ ಕೋಮು ವಿಷ ಬೀಜ ಬಿತ್ತಿ ಆಳುವ ಇಂಥವರೆಲ್ಲ ಆದಷ್ಟು ಬೇಗ ನಿರ್ನಾಮ ಆಗಲಿ ಎಂದು ಹಿಂದಿನ ಪೋಸ್ಟ್ ಗೆ ಸಮರ್ಥನೆಯಾಗಿ ಮತ್ತೊಂದು ಪೋಸ್ಟ್ ನ್ನು ಅಪ್ ಡೇಟ್ ಮಾಡಲಾಗಿದೆ. ಮಂಗಳೂರು ಮುಸ್ಲಿಂ ಪೇಜ್ ಪೋಸ್ಟ್ ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಸಾವಿನಲ್ಲೂ ವಿಕೃತಿ ಮೆರೆದಿರುವ ಪೇಜ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT