ಅನಂತ್ ಕುಮಾರ್ 
ರಾಜ್ಯ

ಜೀವನದಲ್ಲಿ ತಾವು ಪಟ್ಟ ಕಷ್ಟ ಬೇರಾರು ಪಡದಿರಲಿ ಎಂದು ಆರೋಗ್ಯ ಯೋಜನೆ ಜಾರಿಗೆ ತಂದಿದ್ದ ಅನಂತ್ ಕುಮಾರ್

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ 'ಪ್ರಧಾನಮಂತ್ರಿ ಭಾರತೀಯ ಜನ ಔಷಧ ಪರಿಯೋಜನೆ' ಉದ್ಘಾಟನೆ ವೇಳೆ ಕೇಂದ್ರ ರಾಸಾಯನಿಕ ರಸಗೊಬ್ಬ, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಅನಂತ್ ಕುಮಾರ್...

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ 'ಪ್ರಧಾನಮಂತ್ರಿ ಭಾರತೀಯ ಜನ ಔಷಧ ಪರಿಯೋಜನೆ' ಉದ್ಘಾಟನೆ ವೇಳೆ ಕೇಂದ್ರ ರಾಸಾಯನಿಕ ರಸಗೊಬ್ಬ, ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ಅನಂತ್ ಕುಮಾರ್ ಅವರು ತಮ್ಮ ಜೀವನದ ಕಹಿ ಘಟನೆಗಳನ್ನು ನೆನೆದು ಭಾವೋದ್ವೇಗಕ್ಕೊಳಗಾಗಿದ್ದರು. 
ನನ್ನ ತಾಯಿ ಶ್ರೀಮತಿ ಗಿರಿಜಾ ಶಾಸ್ತ್ರಿಯವರು 2 ದಶಕಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು. ರೋಗದಿಂದ ಬಳಲುತ್ತಿದ್ದರೂ. ಆವರ ಆತ್ಮಸ್ಥೈರ್ಯ ಮಾತ್ರ ಕುಂದಿರಲಿಲ್ಲ. ಆವರ ಶಕ್ತಿ ನನಗೆ ಪ್ರೇರಣೆಯಾಗಿತ್ತು. ನನ್ನ ತಾಯಿ ನನಗೆ ಮಾದರಿ ವ್ಯಕ್ತಿಯಾಗಿದ್ದರು ನಿಜವಾದ ಅದ್ಯಮ ಚೇತನವಾಗಿದ್ದರು ಎಂದು ಹೇಳಿಕೊಂಡಿದ್ದರು. 
ಈ ಬಗ್ಗೆ 2018ರ ಮಾರ್ಚ್ ತಿಂಗಳಿನಲ್ಲಿ ಟ್ವೀಟ್ ಮಾಡಿ ನೋವು ಹಂಚಿಕೊಂಡಿದ್ದರು. ಟ್ವೀಟ್ ಮಾಡುವ ವೇಳೆ ಇನ್ನು ಕೆವೇ ತಿಂಗಳುಗಳಲ್ಲಿ ತಂದೆ ಹಾಗೂ ತಾಯಿಯಂದೆ ತಾವೂ ಕೂಡ ಇದೇ ರೋಗಕ್ಕೆ ತುತ್ತಾಗುತ್ತೇನೆಂಬುದು ಅವರಿಗೆ ತಿಳಿದಿರಲಿಲ್ಲ. 
ತಾಯಿಯ ನಿರ್ದೇಶನ ಹಾಗೂ ಮಾರ್ಗದರ್ಶನದಂತೆಯೇ ಅನಂತ್ ಕುಮಾರ್ ಅವರು ವಿದ್ಯಾಭ್ಯಾಸ ಆರಂಭಿಸಿದ್ದರು. ಅನಂತ್ ಕುಮಾರ್ ಅವರು ಯುವಕನಾಗಿದ್ದಾಗ ಅವರ ತಂದೆ ಹಾಗೂ ತಾಯಿ ಇಬ್ಬರೂ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. 
2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರು ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಯೋಜನೆ ಜಾರಿ ತರಲು ಶ್ರಮಿಸಿದರು. ಯೋಜನೆ ಘೋಷಣೆ ಮಾಡುವ ವೇಳೆ ತಮ್ಮ ಜೀನನದಲ್ಲಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದರು. 
ಅನಂತ್ ಕುಮಾರ್ ಅವತ ತಂದೆ ನಾರಾಯಣ ಶಾಸ್ತ್ರಿಗಳು ರೈಲ್ವೇ ಇಲಾಖೆಯ ಉದ್ಯೋಗಿಯಾಗಿದ್ದರು. ಬಡತನ ಅವರನ್ನು ಹಿಂಬಾಲಿಸಿಕೊಂಡೇ ಬಂದಿತ್ತು. ಜೊತೆಗೆ ಅನಂತ್ ಕುಮಾರ್ ಅವರ ತಾಯಿ ಗಿರಿಜಾ ಶಾಸ್ತ್ರಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ತಂದೆ ಅಂದು ರೈಲ್ವೆ ಇಲಾಖೆಯಲ್ಲಿ ತಿಂಗಳಿಗೆ ರೂ.1,200 ಬರುತ್ತಿತ್ತು. ತಾಯಿಯ ಚಿಕಿತ್ಸೆಗೂ ದುಡ್ಡು ಸಾಲುತ್ತಿರಲಿಲ್ಲ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಅಮ್ಮನಿಗೆ ಔಷಧಿ ತಂದರೆ, ಊಟಕ್ಕೆ ದುಡ್ಡು ಇರುತ್ತಿರಲಿಲ್ಲ. ಅದೆಷ್ಟೋ ದಿನ ಊಟ ಮಾಡದೆಯೇ ಮಲಗಿಕೊಂಡೇ ದಿನಗಳನ್ನು ಕಳೆದಿದ್ದೇನೆ 
ಕೆಲವೊಮ್ಮೆ ವೈದ್ಯರು ಬರೆದ ಮಾತ್ರ ಚೀಟಿಯಲ್ಲಿ ಎಲ್ಲವನ್ನೂ ತರಲು ತಂದೆಗೆ ಸಾಧ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ಪೂರ್ಣ ಪ್ರಮಾಣದಲ್ಲಿ ಟ್ಯಾಬ್ಲೆಟ್ಸ್ ಕೊಡಲು ಆಗದೆ ಅರ್ಧ ಅರ್ಧ ಮಾತ್ರೆ ಕೊಟ್ಟಿದ್ದೂ ಇದೆ. ಆದರೂ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ತಂದೆಗೂ ಕೂಡ ಕ್ಯಾನ್ಸರ್ ಇರುವ ವಿಚಾರ ತಿಳಿದು ಬಂದಿತ್ತು. ಈ ಸಂದರ್ಭದಲ್ಲಿ ನನಗೆ ದಿಕ್ಕೇ ತೋಚದಂತಾಗಿತ್ತು ಎಂದು ಹೇಳಿಕೊಂಡಿದ್ದಾರೆ. 
ತಾವು ಅನುಭವಿಸಿದ್ದ ನೋವು ಮತ್ತೆ ಯಾರೂ ಅನುಭವಿಸಬಾರದು ಎಂದು ಆಲೋಚಿಸಿದ್ದ ಅನಂತ್ ಕುಮಾರ್ ಅವರು, ಮೋದಿ ಸಂಪುಟದಲ್ಲಿ ಸಚಿವರಾದ ಕೂಡಲೇ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಪರಿಯೋಜನೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ತಂದರು. ಇದೀಗ ಔಷಧಿಗಳು ಅಗ್ಗದ ದರದಲ್ಲಿ ದೊರೆಯುತ್ತಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT