ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಜ್ಯೂಸ್ ಅಂಗಡಿ ಮಾಲೀಕನನ್ನು ಹತ್ಯೆಮಾಡಿರುವ ವಿಡಿಯೋ ಹಲವು ಟಿವಿ ಚಾನೆಲ್ ಗಳು ಮತ್ತು ವಾಟ್ಸಾಪ್ ವಿಡಿಯೋ ಹರಿದಾಡುತ್ತಿದೆ.
ಹೀಗಾಗಿ ವಿಡಿಯೋವದಲ್ಲಿ ಹಲವು ಆಕ್ಷೇಪಾರ್ಹ ಅಂಶಗಳಿದ್ದು ಅದನ್ನು ಶೇರ್ ಮಾಡಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಸಿಗರೇಟ್ ನೀಡಲಿಲ್ಲ ಎಂಬ ಕಾರಣಕ್ಕೆ ಜ್ಯೂಸ್ ಅಂಗಡಿ ಮಾಲೀಕ ಮಹದೇವನನ್ನು ವಿಜಯನಗರದಲ್ಲಿ ಭಾನುವಾರ ಹತ್ಯೆ ಮಾಡಲಾಗಿತ್ತು, ಪೊಲೀಸರು ಆರೋಪಿ ವಿನಯ್ ಕುಮಾರ್ ನನ್ನು ಬಂಧಿಸಿದ್ದರು, ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.